Brahmagantu Serial ಯಾರೂ ಊಹಿಸದ ತಿರುವು: ದಿಶಾಳ ಲವ್​ ಪ್ರಪೋಸಲ್​ ಒಪ್ಪಿಕೊಂಡ ಚಿರು? ದೀಪಾ ಗತಿ?

Published : Jan 06, 2026, 02:13 PM IST

ಬ್ರಹ್ಮಗಂಟು ಸೀರಿಯಲ್‌ನಲ್ಲಿ, ಸೌಂದರ್ಯಳಿಗೆ ಪಾಠ ಕಲಿಸಲು ಮಾಡೆಲ್ ದಿಶಾ ಆಗಿ ಬದಲಾಗಿರುವ ದೀಪಾ, ಇದೀಗ ತನ್ನ ಪತಿ ಚಿರುಗೆ ಪ್ರಪೋಸ್ ಮಾಡಿದ್ದಾಳೆ. ಚಿರು ಈ ಪ್ರಸ್ತಾಪವನ್ನು ಒಪ್ಪಿಕೊಂಡಂತೆ ಕಾಣುತ್ತಿದ್ದು, ಇದು ದೀಪಾಳ ಕನಸೋ ಅಥವಾ ಇದರ ಹಿಂದೆ ಬೇರೆ ಸತ್ಯ ಅಡಗಿದೆಯೋ ಎಂಬ ಕುತೂಹಲ ಮೂಡಿದೆ.

PREV
17
ರೋಚಕ ತಿರುವು

ಬ್ರಹ್ಮಗಂಟು ಸೀರಿಯಲ್​ (Brahmagantu Serial) ಇದೀಗ ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ದೀಪಾನೇ ದಿಶಾ ಆಗಿ ಎಲ್ಲರಿಗೂ ಚಮಕ್​ ಕೊಡುತ್ತಿದ್ದಾಳೆ. ಇವಳ ಅಸಲಿಯತ್ತು ರೂಪಾಗೆ ಬಿಟ್ಟರೆ ಬೇರೆಯವರಿಗೆ ತಿಳಿದಿಲ್ಲ. ಅರ್ಚನಾ ಇದರ ಹಿಂದೆ ಇರೋ ಕಾರಣ, ಅವಳಿಗೆ ಗೊತ್ತು ಅಷ್ಟೇ.

27
ದೀಪಾ v/s ದಿಶಾ

ಆದರೆ, ರೂಪವೇ ಮುಖ್ಯ ಎಂದುಕೊಂಡ ಸೌಂದರ್ಯನ ವಿರುದ್ಧ ತಿರುಗಿ ಬಿದ್ದಿರೋ ದೀಪಾ, ಕೆಲವೇ ವರ್ಷ ಇರುವ ಸೌಂದರ್ಯಕ್ಕಿಂತ, ಸದಾ ಇರುವ ಆಂತರಿಕ ಸೌಂದರ್ಯ ಅರ್ಥಾತ್​ ಗುಣವೇ ಮುಖ್ಯ ಎನ್ನುವ ವಾದದವಳು. ಇದನ್ನು ಸೌಂದರ್ಯಳಿಗೆ ಮನವರಿಕೆ ಮಾಡಿಕೊಡಲು ಮಾಡೆಲ್​ ದಿಶಾ ಆಗಿ ಬಂದಿದ್ದಾಳೆ ದೀಪಾ.

37
ದೀಪಾಗೆ ಮುಖಭಂಗಕ್ಕೆ ಯತ್ನ

ಇಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ನಡುವೆ ರೂಪಾಗೆ ನಿಜ ತಿಳಿದದ್ದು ಬಿಟ್ಟರೆ, ದಿಶಾ ಮತ್ತು ಚಿರುನ ಒಂದು ಮಾಡಿ, ದೀಪಾಗೆ ಮುಖಭಂಗ ಮಾಡಲು ಸೌಂದರ್ಯ ಕಾಯುತ್ತಿದ್ದಾಳೆ.

47
ನರಸಿಂಹ ಗಲಾಟೆ

ಆದರೆ, ದಿಶಾ ಮತ್ತು ಚಿರು ಲವ್​ ಮಾಡ್ತಿದ್ದಾರೆ ಎಂದುಕೊಂಡ ದೀಪಾ ಸಹೋದರ ನರಸಿಂಹ, ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಅದೇ ವೇಳೆ ದೀಪಾ ಅಪ್ಪ ಮನೆಗೆ ಭೇಟಿ ಕೊಟ್ಟಾಗಲೂ ಸೌಂದರ್ಯ, ದಿಶಾಳನ್ನು ಅವನ ಎದುರೇ ಹಾಡಿ ಹೊಗಳಿ ದೀಪಾಳನ್ನು ತೆಗೆಳಿದ್ದಾಳೆ. ಇದು ದೀಪಾ ಅಪ್ಪನಿಗೆ ಭಾರಿ ನೋವು ಉಂಟು ಮಾಡಿದೆ.

57
ರೋಸಿ ಹೋದ ದೀಪಾ

ಇವನ್ನೆಲ್ಲಾ ನೋಡಿ ರೋಸಿ ಹೋದ ದೀಪಾ, ಇನ್ನು ಮುಚ್ಚಿಟ್ಟು ಪ್ರಯೋಜನ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಚಿರುಗೆ ರೂಪ ಮುಖ್ಯನೋ, ಗುಣ ಮುಖ್ಯನೋ ನೋಡಿ ಇದಕ್ಕೆ ಮಂಗಳ ಹಾಡುವುದಾಗಿ ಹೇಳಿ ನಿರ್ಧರಿಸಿದ್ದಾಳೆ.

67
ಪ್ರಪೋಸ್​ ಮಾಡಿದ ದಿಶಾ

ಅದಕ್ಕಾಗಿ ಆಕೆ, ದಿಶಾ ಆಗಿ ಬೊಕ್ಕೆ ಹಿಡಿದು ಚಿರುಗೆ ಪ್ರಪೋಸ್​ ಮಾಡಿದ್ದಾಳೆ. I Love You, ನಿಮ್ಮನ್ನು ಪ್ರೀತಿಸ್ತೇನೆ ಎಂದಾಗ ಚಿರು ಖುಷಿಯಿಂದ ಆ ಬೊಕ್ಕೆ ತೆಗೆದುಕೊಂಡಿದ್ದಾನೆ.

77
ಏನಿದರ ಅಸಲಿಯತ್ತು?

ಇಷ್ಟೇ ಪ್ರೊಮೋದಲ್ಲಿ ತೋರಿಸಲಾಗಿದೆ. ಆದರೆ ಇದು ಸಾಧ್ಯನೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಒಂದೋ ಇದು ದೀಪಾಳ ಕನಸು, ಇಲ್ಲವೇ ದಿಶಾ ಮತ್ತು ದೀಪಾ ಒಬ್ಬರೇ ಎನ್ನುವ ಸತ್ಯ ಚಿರುಗೆ ತಿಳಿದಿದೆ ಎಂದೋ ಅಥವಾ ಪ್ರೊಮೋದಲ್ಲಿ ಮಿಸ್​ಲೀಡ್​ ಮಾಡಲಾಗಿದೆ ಎಂದೋ ಹೇಳುತ್ತಿದ್ದಾರೆ. ಆದರೆ ಅಸಲಿಯತ್ತು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories