ಯಾರೂ ಊಹಿಸದ ರೋಚಕ ತಿರುವಿನಲ್ಲಿ ಅಮೃತಧಾರೆ... ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್‌ ದಿವಾನ್… ಭೂಮಿಕಾ ಏನಾದ್ಲು?

Published : Sep 04, 2025, 05:50 PM IST

ಅಮೃತಧಾರೆ ಧಾರಾವಾಹಿಯಲ್ಲಿ ಯಾರೂ ಊಹಿಸಲಾರದ ತಿರುವು ಸಿಕ್ಕಿದೆ. ಶಾಕುಂತಲಾ ಮಹಾಮೋಸದಿಂದ ಮನೆಬಿಟ್ಟ ಭೂಮಿಕಾ, ಡ್ರೈವರ್ ಆಗಿ ಬದಲಾದ್ರು ಕೋಟ್ಯಾಧಿಪತಿ ಗೌತಮ್ ದಿವಾನ್.

PREV
18

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಯಾರೂ ಊಹಿಸಿರಲಾರದ ಮಹಾ ತಿರುವು ಪಡೆದುಕೊಂಡಿದೆ. ಹುಟ್ಟಿದ್ದು ಇಬ್ಬರು ಮಕ್ಕಳು ಎಂದು ಗೊತ್ತಾದ ಮೇಲೆ ಭೂಮಿಕಾ ಶಾಕುಂತಲಾಳನ್ನು ಶೂಟ್ ಮಾಡಿಯೇ ಬಿಡುತ್ತಾಳೇನೋ ಎಂದು ಅಂದುಕೊಂಡಿದ್ದರು. ಆದರೆ ಈವಾಗ ಆಗುತ್ತಿರೋದೆಲ್ಲಾ ಬೇರೆಯದೇ ಆಗಿದೆ.

28

ಈಗಾಗಲೇ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಕಾಣಿಸಿರುವಂತೆ ಸೀರಿಯಲ್ ಗೆ ರೋಚಕ ತಿರುವು ಸಿಕ್ಕಿದೆ. ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಭೂಮಿಕಾಗೆ ಮೊದಕಿಗೆ ಹೆಣ್ಣು ಮಗು ಹುಟ್ಟಿದ್ದು, ಆ ಮಗುವನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದು ತಾನೆ ಎಂದು ಶಾಕುಂತಲಾ ಹೇಳಿದ್ದನ್ನು ಕೇಳಿ ಭೂಮಿಕಾ ರಣಚಂಡಿ ಅವತಾರ ತಾಳಿದ್ದಳು. ಆದರೆ ಆರಂಭದಲ್ಲಿ ಭೂಮಿಕಾ ಮಾತಿಗೆ ಹೆದರಿದ್ದ ಶಾಕುಂತಲಾ, ಕೊನೆಗೆ ತನ್ನ ಕಂತ್ರಿ ಬುದ್ಧಿಯನ್ನು ತೋರಿಸಿದ್ದರು.

38

ತಾನು ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎಂದು ಹೇಳುವ ಶಾಕುಂತಲಾ, ನಿನ್ನ ಮನೆಯಲ್ಲಿ ಅಮ್ಮ, ಜೀವ, ಮಹಿಮಾ ಇದ್ದಾರೆ, ಅಪೇಕ್ಷಾ ಕೂಡ ಆ ಮನೆಗೆ ಹೋಗಿದ್ದಾಳೆ. ಅಲ್ಲಿ ಅಪಾಯ ಉಂಟಾಗಬಹುದು, ನಿನ್ನ ಗಂಡ ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಕೊಲ್ಲೋಕೆ ಶಾರ್ಪ್‌ ಶೂಟರ್‌ ಕಾದು ನಿಂತಿದ್ದಾನೆ. ಒಂದು ಮಗುವನ್ನು ಸಾಯಿಸಿದ್ದೇವೆ, ಇನ್ನೊಂದು ಮಗುವನ್ನು ಸಾಯಿಸುತ್ತೇವೆ. ತಾಕತ್‌ ಇದ್ದರೆ ಇದನ್ನೆಲ್ಲಾ ತಡೆ ನೋಡೋಣ ಎನ್ನುತ್ತಿದ್ದಾಳೆ ಶಾಕುಂತಲಾ.

48

ಈ ಸಂದರ್ಭದಲ್ಲಿ ಭೂಮಿಕಾ ಗನ್ ತೆಗೆದುಕೊಂಡು ಅದನ್ನು ಶಾಕುಂತಲಾ ಹಣೆಗೆ ಹಿಡಿದಾಗ, ಶಾಕುಂತಲಾ ಕಥೆ ಮುಗಿಯಿತು ಅಂತಾನೆ ಅಂದುಕೊಂಡಿದ್ದೆವು. ಆದರೆ ಇದೀಗ ಬಿಡುಗಡೆಯಾದ ಪ್ರೊಮೋ ನೋಡಿದರೆ ಸೀರಿಯಲ್ ನಲ್ಲಿ ರೋಚಕ ತಿರುವು ಕಾಣಿಸಿಕೊಂಡಿದ್ದು, ಬರೋಬ್ಬರಿ ಐದು ವರ್ಷಗಳ ಅಂತರದಲ್ಲಿ ಧಾರಾವಾಹಿಯಲ್ಲಿ ಏನೆಲ್ಲಾ ನಡೆಯಲಿದೆ ಅನ್ನೋದನ್ನು ತೋರಿಸಲಾಗಿದೆ.

58

ಶಾಕುಂತಲಾ ಷಡ್ಯಂತ್ರಕ್ಕೆ ಹೆದರಿ ಇದೀಗ ಭೂಮಿಕಾ ರಾತ್ರೋ ರಾತ್ರಿ ಮಗುವಿನ ಜೊತೆಗೆ ಮನೆ ಬಿಟ್ಟು ಹೊರ ನಡೆದಿದ್ದಾಳೆ. ಮಗು ಮತ್ತು ಗೌತಮ್ ಜವಾಬ್ಧಾರಿ ನಿಮ್ಮದು ಎಂದು ದೇವರಲ್ಲಿ ಹೇಳಿ ಹೊರ ನಡೆದಿದ್ದಾಳೆ. ಇನ್ನೊಂದೆಡೆ ಇನ್ನೇನು ಗೌತಮ್ ದಿವಾನ್ ಮನೆಗೆ ಎಂಟ್ರಿ ಕೊಡಬೇಕು ಎನ್ನುವಷ್ಟರಲ್ಲಿ ಶಾಕುಂತಲಾ, ದಿಯಾ ಮತ್ತು ಜೈದೇವ್ ಜೊತೆ ಮಾತನಾಡುತ್ತಾ, ಭೂಮಿಕಾ ಮನೆ ಬಿಟ್ಟು ಹೊರಗೆ ಹೋಗಾಯ್ತು, ಇನ್ನು ಆ ಗೌತಮ್ ದಿನಾನ್ ನಾನು ಹಾಕೋ ತಾಳಕ್ಕೆ ಕುಣಿಬೇಕು ಎನ್ನುತ್ತಾಳೆ. ಇದನ್ನು ಕೇಳಿ ಗೌತಮ್ ಶಾಕ್ ಆಗುತ್ತಾನೆ.

68

ಗೌತಮ್ ಅಳುತ್ತಾ, ನಿಮ್ಮನ್ನು ನಾನು ಹೆತ್ತ ತಾಯಿಯಂತೆ ಅಂದುಕೊಂಡೆ ಅಲ್ಲಮ್ಮ, ಆದರೆ ನೀವು ವಿಷವನ್ನೇ ಕೊಟ್ಟುಬಿಟ್ಟಿರಿ ಎನ್ನುತ್ತಾ, ಇಷ್ಟೆಲ್ಲಾ ನೀವು ಮಾಡಿರೋದು ಈ ಆಸ್ತಿಗೋಸ್ಕರ ಅಲ್ಲ ಎನ್ನುತ್ತಾ, ಆಸ್ತಿ ಪತ್ರಗಳನ್ನೆಲ್ಲಾ ಶಾಕುಂತಲಾ ಮುಂದೆ ಎಸೆಯುತ್ತಾ, ನನಗೆ ಬೇಕಾಗಿರೋದು ಭೂಮಿಕಾ ಪ್ರೀತಿ ಅಷ್ಟೇ, ಆಕೆಯನ್ನು ನಾನು ಹುಡುಕಿಯೇ ತೀರುತ್ತೇನೆ ಎನ್ನುತ್ತಾ ಹೊರಡುತ್ತಾನೆ ಗೌತಮ್.

78

ಇದೀಗ ಗೌತಮ್, ಬಿಳಿ ಬಣ್ಣದ ಪ್ಯಾಂಟ್, ಶರ್ಟ್ ಧರಿಸಿ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಐದು ವರ್ಷಗಳ ನಂತರದ ಜೀವನವನ್ನು ತೆರೆ ಮೇಲೆ ತೋರಿಸಲಾಗಿದೆ. ಬುದ್ಧ ನೆಲೆಯಲ್ಲಿ ಗೌತಮ್, ಭೂಮಿಕಾ ನಿಮಗೋಸ್ಕರ ನಾನು ಹುಡುಕದಿರೋ ಜಾಗ ಇಲ್ಲ. ಬೇಡದೇ ಇರುವ ದೇವರಿಲ್ಲ. ಆದಷ್ಟು ಬೇಗ ಅವರು ನನಗೆ ಸಿಗೋ ಹಾಗೇ ಮಾಡು ಎನ್ನುತ್ತಾ ಬುದ್ಧನ ಮುಂದೆ ಕೈ ಮುಗಿಯುತ್ತಾರೆ.

88

ಗೌತಮ್ ಕಾರಿನಲ್ಲಿ ಬರುತ್ತಿರುವಾಗ, ಎದುರಿಗೆ ಬಂದ ಮಗುವನ್ನು ಗೌತಮ್ ತಡೆದು ಎಬ್ಬಿಸಿ ವಿಚಾರಿಸುವಾಗ, ಭೂಮಿಕಾ ಆ ಮಗುವನ್ನು ಕರೆದು ಆಕಾಶ್ ನಿನಗೆ ಏನು ಆಗಿಲ್ಲ ತಾನೆ ಎನ್ನುತ್ತಾಳೆ. ಗೌತಮ್ ಮುಖ ನೋಡಿದರೂ ಯಾವುದೇ ಭಾವನೆ ಹೊರ ಸೂಚಿಸದೇ, ತನ್ನ ಪಾಡಿಗೆ ತಾನು ಹೋಗುತ್ತಾಳೆ ಭೂಮಿಕಾ. ಹಾಗಿದ್ರೆ ಇನ್ನು ಮುಂದಿನ ಎಪಿಸೋಡ್ ಗಳಲ್ಲಿ ಏನೇನು ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.

Read more Photos on
click me!

Recommended Stories