ಬಿಗ್ ಬಾಸ್ ಕನ್ನಡ, ಹಿಂದಿ ಸೇರಿ ಇತರ ಭಾಷೆಗಳ ಶೋನಲ್ಲಿ ಯಾವುದಕ್ಕೆ ಗರಿಷ್ಠ ರೇಟಿಂಗ್? ಲಿಸ್ಟ್ ಪ್ರಕಟ, ಕಿಚ್ಚನ ನೋಡಲು ವಾರಾಂತ್ಯದಲ್ಲಿ ಜನರು ಆಸಕ್ತರಾಗಿದ್ದರೆ, ಇತ್ತ ಬಿಗ್ ಬಾಸ್ ಶೋನಲ್ಲಿ ಯಾವ ಭಾಷೆ ಶೋಗೆ ಗರಿಷ್ಠ ರೇಟಿಂಗ್ ಇದೆ?
ಬಿಗ್ ಬಾಸ್ ರಿಯಾಲಿಟಿ ಶೋ ಅತೀ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೆ ಒಳಗಾಗಿರುವ ರಿಯಾಲಿಟಿ ಶೋ. ಬಿಗ್ ಬಾಸ್ ಸ್ಪರ್ಧಿಗಳ ರೀಲ್ಸ್ ಭಾರಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ವಿವಾದಿತರನ್ನೇ ಆಯ್ಕೆ ಮಾಡಿ ಟಿಆರ್‌ಪಿ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಅನ್ನೋ ಆರೋಪವೂ ಇದೇ. ಈ ಬಾರಿಯ ಕನ್ನಡ ಬಿಗ್ ಬಾಸ್ ಎರಡು ದಿನ ಸ್ಥಗಿತಗೊಂಡು ಭಾರಿ ಹೈಡ್ರಾಮವೇ ನಡೆದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಬಿಗ್ ಬಾಸ್ ರೇಟಿಂಗ್ ಬಹಿರಂಗವಾಗಿದೆ.
26
ಬಿಗ್ ಬಾಸ್ ಕನ್ನಡ ಹಾಗೂ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ ಹಾಗೂ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡದಲ್ಲಿ ಅತೀ ಹೆಚ್ಚು ರೇಟಿಂಗ್ ಹೊಂದಿದ್ದ ಕಾರ್ಯಕ್ರಮ. ಆದರೆ ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಕಾರಣ ಈ ಬಾರಿಯ ಕನ್ನಡ ಬಿಗ್ ಬಾಸ್ ರೇಟಿಂಗ್. ವಾರದಲ್ಲಿ ನಡೆಯುವ ಬಿಗ್ ಬಾಸ್ ಸ್ಪರ್ಧಿಗಳ ಸ್ಪರ್ಧೆಗಿಂತ ವಾರಾಂತ್ಯದ ಕಿಚ್ಚನ ಮಾತುಕತೆಗೆ ಹೆಚ್ಚಿನ ರೇಟಿಂಗ್ ಇದೆ.
36
ಕಿಚ್ಚ ಸುದೀಪ್ ಮಾತು ಕೇಳಲು ಆಸಕ್ತಿ ತೋರುತ್ತಿದ್ದಾರೆ ಜನ
ಕಿಚ್ಚ ಸುದೀಪ್ ಮಾತು ಕೇಳಲು ಆಸಕ್ತಿ ತೋರುತ್ತಿದ್ದಾರೆ ಜನ
ಕನ್ನಡ ಬಿಗ್ ಬಾಸ್ 12ರ ಆವೃತ್ತಿಯಲ್ಲಿ ಸೋಮವಾರದಿಂದ ಶುಕ್ರವಾರದ ವರೆಗಿನ ಸ್ಪರ್ಧಿಗಳ ಆಟದ ರೇಟಿಂಗ್ 7.4. ಆದರೆ ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಕಿಚ್ಚನ ಮಾತುಕತೆ ಕಾರ್ಯಕ್ರಮದ ರೇಟಿಂಗ್ 10.9. ಜನರು ಕಿಚ್ಚನ ನೋಡಲು ಮುಗಿಬೀಳುತ್ತಿದ್ದಾರೆ.
ಬಿಗ್ ಬಾಸ್ ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಿದರೆ ಬಿಗ್ ಬಾಸ್ ಮಲೆಯಾಳಂ ನಂ.1 ರೇಟಿಂಗ್ ಪಡೆದುಕೊಂಡಿದೆ. ಸೂಪರ್ ಸ್ಟಾರ್ ಮೋಹನ್‌ಲಾಲ್ ನಡೆಸಿಕೊಡುವ ಮಲೆಯಾಳಂ ಬಿಗ್ ಬಾಸ್ 12.1 ರೇಟಿಂಗ್ ಪಡೆದಿದೆ. ಇನ್ನು ತೆಲುಗು ಬಿಗ್ ಬಾಸ್ 2ನೇ ಸ್ಥಾನದಲ್ಲಿದ್ದರೆ ಕನ್ನಡ ಮೂರನೇ ಸ್ಥಾನದಲ್ಲಿದೆ. ಇನ್ನು ಕೊನೆಯ ಸ್ಥಾನದಲ್ಲಿರುವುದು ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ.
56
ಬಿಗ್ ಬಾಸ್ ಶೋ ರೇಟಿಂಗ್
ಬಿಗ್ ಬಾಸ್ ಶೋ ರೇಟಿಂಗ್
ಬಿಗ್ ಬಾಸ್ ಮಲೆಯಾಳಂ : 12.1 ರೇಟಿಂಗ್
ಬಿಗ್ ಬಾಸ್ ತೆಲುಗು :11.1 ರೇಟಿಂಗ್
ಬಿಗ್ ಬಾಸ್ ಕನ್ನಡ : 7.4 ರೇಟಿಂಗ್ (ವಾರಾಂತ್ಯ 10.9)
ಬಿಗ್ ಬಾಸ್ ತಮಿಳು : 5.6 ರೇಟಿಂಗ್
ಬಿಗ್ ಬಾಸ್ ಹಿಂದಿ : 1.3 ರೇಟಿಂಗ್
66
ಬಿಗ್ ಬಾಸ್ ರೇಟಿಂಗ್ ಹೆಚ್ಚಿಸಲು ಕಸರತ್ತು
ಬಿಗ್ ಬಾಸ್ ರೇಟಿಂಗ್ ಹೆಚ್ಚಿಸಲು ಕಸರತ್ತು
ಇದೀಗ ಬಿಗ್ ಬಾಸ್ ಆಯೋಜಕರು ಪ್ರೇಕ್ಷಕರ ಗಮನಸೆಲೆಯಲು ಹಲವರು ಕಸರತ್ತು ನಡೆಸುತ್ತಿದ್ದಾರೆ. ಹಲವು ರೋಚಕ ತಿರುವುಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಮೋಹನ್‌ಲಾಲ್ ಸೇರಿದಂತೆ ಸೂಪರ್ ಸ್ಟಾರ್‌ಗಳ ಜನಪ್ರಿಯತೆಯಲ್ಲಿ ಬಿಗ್ ಬಾಸ್ ಒಂದಿಷ್ಟು ಟಿಆರ್‌ರಪಿ ತಂದುಕೊಡುತ್ತಿದೆ. ಆದರೆ ಸ್ಪರ್ಧಿಗಳ ನೋಡಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಅನ್ನೋದು ಅಂಕಿ ಅಂಶಗಳು ಬಹಿರಂಗಪಡಿಸಿದೆ.