ಜೀಪ್ ಮೆರಿಡಿಯನ್ SUV ಖರೀದಿಸಿ, ಅದೇ ಕಲರ್ ಬಟ್ಟೆ ತೊಟ್ಟ ಉರ್ಫಿ!

Published : Mar 10, 2023, 05:04 PM IST

ಉರ್ಫಿ ಜಾವೇದ್ (Urfi Javed) ಇದೀಗ ದೇಶದಲ್ಲಿ ಹೆಚ್ಚು ಸುದ್ದಿಯಲ್ಲಿರುವ  ಫ್ಯಾಷನ್ ಪ್ರಭಾವಿಗಳಲ್ಲಿ ಒಬ್ಬರು. ತಮ್ಮ ಔಟ್ ಆಫ್ ದಿ ಬಾಕ್ಸ್ ಫ್ಯಾಶನ್ ಸೆನ್ಸ್‌ಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಇದೀಗ ಸಂಪೂರ್ಣವಾಗಿ ವಿಭಿನ್ನ ಕಾರಣಕ್ಕಾಗಿ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಉರ್ಫಿ ಹೊಸ ಜೀಪ್‌  ಖರೀದಿಸಿದ ಕಾರಣದಿಂದ ಈಗ ಸುದ್ದಿಯಲ್ಲಿದ್ದಾರೆ.

PREV
18
ಜೀಪ್ ಮೆರಿಡಿಯನ್ SUV  ಖರೀದಿಸಿ, ಅದೇ ಕಲರ್ ಬಟ್ಟೆ ತೊಟ್ಟ ಉರ್ಫಿ!

 ಉರ್ಫಿ ಜಾವೇದ್ ಹೊಸ ಜೀಪ್ ಮೆರಿಡಿಯನ್  7-ಸೀಟರ್ SUVಯನ್ನು ಖರೀದಿಸಿರುವ ವಿಷಯ ಯುಟ್ಯೂಬ್‌ ವೀಡಿಯೋವೊಂದರಿಂದ ತಿಳಿದು ಬಂದಿದೆ. 

28

ಇತ್ತೀಚೆಗೆ ಜೀಪ್ ಮೆರಿಡಿಯನ್ SUV ಯಲ್ಲಿ ಉರ್ಫಿ ಈವೆಂಟ್‌ಗೆ ಆಗಮಿಸಿದ್ದರು.  ವೆಲ್ವೆಟ್ ರೆಡ್ ಶೇಡ್‌ನಲ್ಲಿ ಹೊಸ ಎಸ್‌ಯುವಿ ಜೊತೆ ತಮ್ಮ ಉಡುಗೆಯನ್ನು ಮ್ಯಾಚ್‌ ಮಾಡಿಕೊಂಡಿದ್ದರು.

38

ಯಾವಾಗಲೂ ತಮ್ಮ ಡ್ರೆಸ್‌ಗಳಿಗಾಗಿ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಅವರಿಗೆ  ಈಗ ಕೊಂಡಿರುವ ಜೀಪ್ ಮೆರಿಡಿಯನ್ ಮೊದಲ ಜೀಪ್ ಅಲ್ಲ. 

48
Urfi Javed

ಕಳೆದ ವರ್ಷ  ಉರ್ಫಿ ನೀಲಿ ಬಣ್ಣದ ಜೀಪ್ ಕಂಪಾಸ್ ಅನ್ನು ಖರೀದಿಸಿದರು ಮತ್ತು ಅವರು ಹಲವಾರು ಸಂದರ್ಭಗಳಲ್ಲಿ ಆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

58

ಜೀಪ್ ಮೆರಿಡಿಯನ್ ಪ್ರೀಮಿಯಂ SUV ಆಗಿದ್ದು, ಇದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜೀಪ್ ಕಮಾಂಡರ್ ಆಗಿ ಮಾರಾಟ ಮಾಡಲಾಗುತ್ತದೆ. 

68

SUV ಫ್ಲೋಟಿಂಗ್-ಟೈಪ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಲೆದರ್ ಸೀಟ್ ಕವರ್‌ಗಳು ಮತ್ತು ಇನ್ನೂ ಹೆಚ್ಚಿನ ಫಿಚರ್‌ಗಳನ್ನು ಹೊಂದಿದೆ. 

78

ಉರ್ಫಿ ಖರೀದಿಸಿರುವ ಜೀಪ್‌ ಎಲ್ಇಡಿ ಹೆಡ್ಲ್ಯಾಂಪ್‌ಗಳು, LED DRLs ಮತ್ತು ಸಿಗ್ನೇಚರ್ ಜೀಪ್ ಗ್ರಿಲ್ ಅನ್ನು ಮುಂಭಾಗದಲ್ಲಿ ಪಡೆಯುತ್ತದೆ.


 

88

ಜೀಪ್ ಮೆರಿಡಿಯನ್ SUV  170 Ps ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ  ಜೀಪ್ ಮೆರಿಡಿಯನ್  ಎಕ್ಸ್ ಶೋ ರೂಂ ಬೆಲೆ  ಭಾರತದಲ್ಲಿ ರೂ 37.15 ಲಕ್ಷದವರೆಗೆ, 


 

click me!

Recommended Stories