ಇಷ್ಟವಿಲ್ಲದ ಮದುವೆ: ನಟನೆಗೆ ಗುಡ್​ಬೈ ಹೇಳಿದ್ರಾ Bigg Boss ಲವರ್​ ಬಾಯ್​ ಸೂರಜ್​ ಸಿಂಗ್​? ಯಾಕಿದು ಗುಸುಗುಸು

Published : Apr 25, 2026, 01:42 PM IST

ಬಿಗ್​ಬಾಸ್​ ಖ್ಯಾತಿಯ ಸೂರಜ್​ ಸಿಂಗ್, 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಇತ್ತೀಚೆಗೆ ಅವರು ಬಾಣಸಿಗನ ಫೋಟೋ ಹಂಚಿಕೊಂಡಿದ್ದು, ನಟನೆ ಬಿಟ್ಟರಾ ಎಂಬ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ತಮ್ಮ ಸೀರಿಯಲ್ ಪ್ರಚಾರಕ್ಕಾಗಿ ಬಿಗ್‌ಬಾಸ್‌ಗೆ ಮರು-ಪ್ರವೇಶಿಸಿ ದಾಖಲೆ ಬರೆದ ಬಗ್ಗೆಯೂ ವಿವರಿಸಲಾಗಿದೆ.

PREV
16
ಬಿಗ್​ಬಾಸ್​​ ಲವರ್​ ಬಾಯ್​

ಬಿಗ್​ಬಾಸ್​ 12 (Bigg Boss 12)ನಲ್ಲಿ ಲವರ್​ ಬಾಯ್​ ಎಂದೇ ಫೇಮಸ್​ ಆಗಿ, ನಟಿ ರಾಶಿಕಾ ಶೆಟ್ಟಿ ಜೊತೆಗಿನ ಪ್ರೇಮ ಪ್ರಸಂಗದಿಂದ ಸಕತ್​ ಸದ್ದು ಮಾಡಿದ್ದವರು ಸೂರಜ್​ ಸಿಂಗ್​. ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದ ಸೂರಜ್​ ಅವರಿಗೆ ಅರಿವಿಲ್ಲದೇ ಅದೃಷ್ಟ ಒಲಿದಿತ್ತು. ಬಿಗ್​ಬಾಸ್​​ಗೆ ಅರಿವಿಲ್ಲದೇ ಕಾಲ್​ ಬಂದಿತ್ತು. ಅದು ಕೂಡ ಅಚಾನಕ್​ ಆಗಿ ಬಂದಿದ್ದು ಅವರಿಗೇ ಅಚ್ಚರಿ ಉಂಟು ಮಾಡಿತ್ತಂತೆ.

26
ನಟನೆ ಬರಲ್ಲ ಎಂದ್ರೂ ಕೇಳಲಿಲ್ಲ

ಅದೃಷ್ಟ ಅಂದರೆ ಹಾಗೆಯೇ. ಒಂದರ ಹಿಂದೆ ಒಂದು ಬಂದುಬಿಡುತ್ತದೆ ಎನ್ನುವುದಕ್ಕೆ ಸೂರಜ್​ ಅವರೇ ಸಾಕ್ಷಿ. ನಟನೆಯ ಗಂಧಗಾಳಿಯೂ ಇಲ್ಲದ ಸೂರಜ್​ ಅವರಿಗೆ ಬಿಗ್​ಬಾಸ್​ನಿಂದ ಹೊರಬರುತ್ತಿದ್ದಂತೆಯೇ ಸೀರಿಯಲ್​​ಗೆ ಆಫರ್​ ಬಂತು. ನಟನೆಯೇ ಬರುವುದಿಲ್ಲ, ಏನು ಆ್ಯಕ್ಟ್​ ಮಾಡುವುದು ಎಂದು ಕೇಳಿದರೂ, ಅದು ತಾನಾಗಿಯೇ ಬರುತ್ತದೆ, ನಿಮ್ಮಲ್ಲಿ ಆ ಕೆಪ್ಯಾಸಿಟಿ ಇದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಪವಿತ್ರ ಬಂಧನ (Pavitra Bandhana) ಧಾರಾವಾಹಿ ನಾಯಕನೇ ಆದರು. ಇದರಲ್ಲಿ ಸದ್ಯ ಇಷ್ಟವಿಲ್ಲದೇ ಹೋದರೂ ಅಣ್ಣನ ಪ್ರೇಯಸಿಯನ್ನೇ ಮದುವೆಯಾಗಬೇಕಾಗಿದೆ ನಾಯಕನಿಗೆ.

36
ನಟನೆ ಬಿಟ್ರಾ ಸೂರಜ್​ ಸಿಂಗ್​?

ಆದರೆ ಇವೆಲ್ಲವುಗಳ ನಡುವೆಯೇ ನಟ ಷೆಫ್ (ಬಾಣಸಿಗ)​ ಆಗಿರೋ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ ನಟ. ಅದಕ್ಕಾಗಿ ಕೆಲವರು ನಟ, ನಟನೆ ಬಿಟ್ಟು ಅಡುಗೆಯವರಾದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ತಮಾಷೆಗೆ ನಟನ ಕಾಲೆಳೆಯುತ್ತಿದ್ದಾರೆ. ಇಷ್ಟವಿಲ್ಲದ ಮದುವೆ ಆಗಿರೋದಕ್ಕೆ ನಟನೆ ಬಿಟ್ರಾ ಎಂದು ತಮಾಷೆ ಮಾಡುತ್ತಿದ್ದಾರೆ.

46
ಗುಸುಗುಸು ಏಕೆ?

Cooking up dreams, one plate at a time ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯಕ್ಟಿಂಗ್​ ಬಿಟ್ಟು ನಟನೆಯತ್ತ ಅವರು ಒಲವು ತೋರಿಸಿದ್ದಾರೆ ಎಂದೇ ಹಲವರು ಅಂದುಕೊಂಡಿದ್ದಾರೆ. ಅಷ್ಟಕ್ಕೂ ಸೂರಜ್​ ಅವರಿಗೆ ಅಡುಗೆ ಮಾಡುವುದು ಎಂದರೆ, ತುಂಬಾ ಖುಷಿ. ಬಿಗ್​ಬಾಸ್​ನಲ್ಲಿಯೂ ಅವರು ಅಡುಗೆ ಮಾಡುತ್ತಿದ್ದರು. ಅದಕ್ಕಾಗಿಯೇ ತಮಗೆ ಇದು ಖುಷಿ ಎಂದು ಹಂಚಿಕೊಂಡಿದ್ದಾರೆ.

56
ಬಿಗ್​ಬಾಸ್​​ನಲ್ಲಿ ದಾಖಲೆ

ಇದೇ ವೇಳೆ ತಮಗೆ ಅರಿವಿಲ್ಲದೇ ಬಿಗ್​ಬಾಸ್​​ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆ ಸೃಷ್ಟಿಯಾಗಿರುವ ಬಗ್ಗೆಯೂ ಹೇಳಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಮತ್ತೆ ಬಿಗ್​ಬಾಸ್ ಮನೆಗೆ ಹೋಗಿದ್ದರು ಸೂರಜ್​. ಅದಕ್ಕೆ ಕಾರಣ, ಅವರು ನಟಿಸುತ್ತಿರುವ ಸೀರಿಯಲ್​ ಪ್ರಮೋಷನ್​ಗೆ.

66
ಸೀರಿಯಲ್​ ಪ್ರಮೋಷನ್​

ಹೀಗೆ ತಮ್ಮದೇ ಸೀರಿಯಲ್​ ಪ್ರಮೋಷನ್​ಗೆ ಬಿಗ್​ಬಾಸ್​ ಸ್ಪರ್ಧಿಯೊಬ್ಬರು ಹೊರಕ್ಕೆ ಹೋಗಿ ಮತ್ತೆ ಒಳಕ್ಕೆ ಬಂದಿರೋದು ಇದುವರೆಗೂ ನಡೆದಿಲ್ಲ. ಇದೇ ಮೊದಲು ಎಂದರು ಎಂದ ಸೂರಜ್​, ಈ ಮೂಲಕ ದಾಖಲೆ ಬರೆದಿರುವುದಾಗಿ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories