ಸ್ನೇಹಿತೆಯ ಖಾಸಗಿ ವಿಡಿಯೋ ಕದ್ದು 2 ಕೋಟಿಗೆ ಬ್ಲ್ಯಾಕ್​ಮೇಲ್​: 'ಬ್ಯೂಟಿ ಕ್ವೀನ್'​ ಕನ್ನಡತಿಯ ಖತರ್ನಾಕ್​ ಕೃತ್ಯ! FIR ದಾಖಲು

Published : Oct 25, 2025, 04:47 PM IST

'ಮಿಸೆಸ್‌ ಇಂಡಿಯಾ ಬ್ಯೂಟಿಫುಲ್‌ ಸ್ಮೈಲ್‌' ವಿಜೇತೆ, ನಟಿ ಆಶಾ ಜೋಯಿಸ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 61 ವರ್ಷದ ಮಹಿಳೆಯೊಬ್ಬರ ಖಾಸಗಿ ಡೇಟಾ ಕದ್ದು, 2 ಕೋಟಿ ರೂಪಾಯಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಾಗಿದೆ.  

PREV
16
ಮಿಸೆಸ್‌ ಇಂಡಿಯಾ ಬ್ಯೂಟಿಫುಲ್‌ ಸ್ಮೈಲ್‌ ವಿಜೇತೆ

ಕೆಲವು ಸಿನಿಮಾ, ಕನ್ನಡದ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಫೇಮಸ್​ ಆಗಿರೋ ನಟಿ ಆಶಾ ಜೋಯಿಸ್‌ (Asha Jois) ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ. ಮಿಸೆಸ್‌ ಇಂಡಿಯಾ ಬ್ಯೂಟಿಫುಲ್‌ ಸ್ಮೈಲ್‌, ಬ್ಯೂಟಿಫುಲ್‌ ಹೇರ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು, 2016ರಲ್ಲಿ ಮಿಸ್ ಇಂಡಿಯಾ ಪ್ಲಾನೆಟ್ ಸ್ಪರ್ಧಿಯೂ ಆಗಿದ್ದವರು ಇವರು.

26
ಜೀವನ ಪಾಠ

ಯಾವಾಗಲೂ ನಗು ಮುಖದಿಂದಲೇ ಓಡಾಡಬೇಕು, ನಮ್ಮ ಮೇಲೆ ಹಾಗೂ ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಇರಬೇಕು, ಪಾಸಿಟಿವ್‌ ಚಿಂತನೆ ಮಾಡಬೇಕು, ಟೀಕೆಗಳನ್ನು ಮರೆತು ಬಿಡಬೇಕು, ಇದೇ ನನ್ನ ಲೈಫ್‌ನ ಮಂತ್ರ ಎಂದು ಹೇಳುವ ಮೂಲಕ ಹಲವು ಕಿರೀಟ ಮುಡಿಲಿಗೇರಿಸಿಕೊಂಡಿದ್ದಾರೆ ಆಶಾ, ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬ ಸದಸ್ಯೆಯಾಗಿದ್ದಾರೆ.

36
ಎಫ್​ಐಆರ್​ ದಾಖಲು

61 ವರ್ಷದ ಪಾರ್ವತಿ ಎಂಬವವರು ನೀಡಿದ ದೂರಿನ ಮೇರೆಗೆ ಇವರ ವಿರುದ್ಧ FIR ದಾಖಲಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕೆಲ ವರ್ಷಗಳ ಹಿಂದೆ ಆಶಾ ಅವರಿಗೆ ಪಾರ್ವತಿ ಅವರ ಪರಿಚಯವಾಗಿದೆ. 

46
ಮಾಲೀಕರ ಜೊತೆ ಮದುವೆ

ಪಾರ್ವತಿ ಅವರು, ತಮ್ಮ ಕಂಪೆನಿಯ ಮಾಲೀಕರನ್ನೇ ಮದುವೆಯಾಗಿದ್ದಾರೆ. ಅವರು ಶ್ರೀಮಂತರು ಎಂದು ತಿಳಿಯುತ್ತಲೇ ಆಶಾ ನೈಸ್​ ಆಗಿ ಮಾತನಾಡುತ್ತಾ, ಅವರ ಫೋನ್‌ದಿಂದ ಖಾಸಗಿ ವಿಡಿಯೋ, ಫೋಟೊ ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

56
ಬ್ಲ್ಯಾಕ್​ಮೇಲ್​ ಶುರು

ಇದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್‌ ಮಾಡಲು ಶುರು ಮಾಡಿದ್ದಾರೆ. ಎರಡು ಕೋಟಿ ರೂಪಾಯಿಗಳನ್ನು ಪತಿಯಿಂದ ಪಡೆದು ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪಾರ್ವತಿ ಒಪ್ಪದಿದ್ದಾಗ ಪಾರ್ವತಿ ತಮ್ಮ ಪರಿಚಯಸ್ಥರಿಗೆ ಆಶಾ, ಪಾರ್ವತಿ ಅವರ ಖಾಸಗಿ ವಿಡಿಯೋ ಫೋಟೊ ಮತ್ತು ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ.

66
ಪಾರ್ವತಿ ಅವರಿಂದ ದೂರು

ಇದು ತಿಳಿಯುತ್ತಲೇ ಪಾರ್ವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಡೇಟಾ ಕದ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಈ ಆರೋಪಗಳಿಗೆ ಆಶಾ ಜೋಯಿಸ್ ಇನ್ನು ಪ್ರತಿಕ್ರಿಯೆಯನ್ನು ನೀಡಿಲ್ಲ. ಸದ್ಯ ತನಿಖೆ ಶುರು ಮಾಡಿರುವ ಪೊಲೀಸರು ಆಶಾ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ.

Read more Photos on
click me!

Recommended Stories