Bigg Boss: ಕಲರ್ಸ್​ ವಾಹಿನಿ ವಿರುದ್ಧ ಗಂಭೀರ ಆರೋಪ ಮಾಡಿರೋ ಜಾಹ್ನವಿಗೆ ಸುದೀಪ್​ ಏನ್​ ಹೇಳಿದ್ರು ನೋಡಿ!

Published : Nov 15, 2025, 06:37 PM IST

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರನ್ನು ವಾಹಿನಿಯೇ ಉಳಿಸುತ್ತಿದೆ ಎಂದು ಜಾಹ್ನವಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಜಾಹ್ನವಿಯನ್ನು ನೇರವಾಗಿ ಪ್ರಶ್ನಿಸಿ, ಶೋ ನಿಯಮಗಳ ಬಗ್ಗೆ ಪಾಠ ಮಾಡಿದ್ದಾರೆ.  

PREV
16
ಗಂಭೀರ ಆರೋಪ

ಬಿಗ್​ಬಾಸ್​ (Bigg Boss) ಮನೆಯಲ್ಲಿ, ಕಲರ್ಸ್​ ಕನ್ನಡ ವಾಹಿನಿಯ ವಿರುದ್ಧ ಜಾಹ್ನವಿ ಗಂಭೀರ ಆರೋಪ ಮಾಡಿ ಮೊನ್ನೆಯಷ್ಟೇ ಹಲ್​ಚಲ್​ ಸೃಷ್ಟಿಸಿದ್ದರು. ಸ್ಪಂದನಾ ಸೋಮಣ್ಣ ಅವರು ವಾಹಿನಿಯ ವತಿಯಿಂದ ಬಂದವರು. ಅದಕ್ಕಾಗಿಯೇ ಅವರನ್ನು ಎಲಿಮಿನೇಟ್​ ಮಾಡುತ್ತಿಲ್ಲ ಎನ್ನುವುದು ಜಾಹ್ನವಿ ಆರೋಪವಾಗಿತ್ತು.

26
ಚಾನೆಲ್​ ಕಡೆಯವಳು

ಸ್ಪಂದನಾ ಅವರು ವೀಕ್​ ಸ್ಪರ್ಧಿಯಾಗಿದ್ದರೂ ಚಾನೆಲ್​ ಕಡೆಯವರು ಎನ್ನುವ ಕಾರಣಕ್ಕೆ ಆಕೆಯನ್ನು ಸೇವ್​ ಮಾಡಲಾಗುತ್ತಿದೆ. ಅವಳಿಗೆ ಮಾತಾಡೋಕೆ ಬರಲ್ಲ. ಟಾಸ್ಕ್‌ನಲ್ಲೂ ಇಲ್ಲ. ಆದರೂ ಪ್ರತಿಬಾರಿ ಸೇವ್​ ಆಗುತ್ತಿದ್ದಾಳೆ. ಅದಕ್ಕೆ ಕಾರಣ, ಆಕೆ ಚಾನೆಲ್​ ಕಡೆಯವಳು. ಅದಕ್ಕಾಗಿ ಉಳಿಸಿಕೊಳ್ತಿದ್ದಾರೆ ಎಂದಿದ್ದರು.

36
ಸುದೀಪ್​ ಕ್ಲಾಸ್​

ಇದೀಗ ಈ ಬಗ್ಗೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬೇರೆಯ ರೀತಿಯಲ್ಲಿ ಕಿಚ್ಚ ಸುದೀಪ್​ ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಜಗಳದ ವಿಷಯವಾಗಿ ಚೇಂಜಿಂಗ್​ ರೂಮ್​ನಲ್ಲಿ ಮಾತನಾಡಿದ್ದ ಬಗ್ಗೆ ಸುದೀಪ್​ ಪ್ರಶ್ನಿಸಿದ್ದಾರೆ. ಇದನ್ನು ಮಾತನಾಡಿದ್ದು ಹೌದು ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

46
ಚೇಂಜಿಂಗ್​ ರೂಮ್​ ಏಕೆ?

ಅದಕ್ಕೆ ಸುದೀಪ್​ ಅವರು, ಚೇಂಜಿಂಗ್​ ರೂಮ್​ ಇರುವುದು ಏನಕ್ಕೆ ಎಂದು ಪ್ರಶ್ನಿಸಿದ್ದಾರೆ. ನಂಬಿಕೆಯಿಂದ ಒಂದು ಜಾಗ ಕೊಟ್ಟಾಗ ಅಲ್ಲಿ ಹೋಗಿ ಡಿಸ್​ಕಷನ್​ ಮಾಡೋದು ಓಕೆನಾ ಎಂದು ಪ್ರಶ್ನಿಸಿದ್ದಾರೆ.

56
ತಿಳಿವಳಿಕೆ ಇಲ್ವಾ?

ಕೊನೆಗೆ ನೇರವಾಗಿ ಜಾಹ್ನವಿ ಅವರಿಗೆ, ಇಂತಿಂಥವರು ವಾಹಿನಿ ಕಡೆಯಿಂದ ಬಂದವರು, ಅವರನ್ನು ಹೊರಕ್ಕೆ ಹಾಕಲ್ಲ ಎಂದಿದ್ದೀರಲ್ಲ, ಇಷ್ಟೆಲ್ಲಾ ತಿಳಿವಳಿಕೆ ಇರೋ ನೀವು ವಾಹಿನಿ ಮತ್ತು ಷೋ ಹಾಕಿರೋ ರೂಲ್ಸ್​ ಬಗ್ಗೆ ಗೊತ್ತಿರಬೇಕಲ್ವಾ ಜಾಹ್ನವಿಯವರೇ ಎಂದು ಸುದೀಪ್​ ಪ್ರಶ್ನಿಸಿದ್ದಾರೆ.

66
ಮ್ಯಾನುಪಲೇಷನ್​ ಎನ್ನುತ್ತಾರೆ

ಅದಕ್ಕೆ ಜಾಹ್ನವಿ ಏನೋ ಕಾರಣ ಕೊಡಲು ಹೋದರು. ಆಗ ಸುದೀಪ್​ ಅವರು, ವಿಷಯ ಡೈವರ್ಟ್​ ಆಗ್ತಿದೆ. ಹೀಗೆ ಡೈವರ್ಟ್​ ಆಗುವ ವಿಷಯಗಳಿಗೆ ಮ್ಯಾನುಪಲೇಷನ್​ ಎನ್ನುತ್ತಾರೆ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.

Read more Photos on
click me!

Recommended Stories