ಸಿಟಿ ಬಿಟ್ಟು ಊರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸೋನು ಗೌಡ; ಪಬ್-ಎಣ್ಣೆ ಬಿಟ್ಬಿಟ್ಟಾ ಸುಂದ್ರಿ ಎಂದ ನೆಟ್ಟಿಗರು!

First Published | Jul 2, 2024, 5:38 PM IST

ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸೋನು ಶ್ರೀನಿವಾಸ್ ಗೌಡ. ಪಾರ್ಟಿ ಎಲ್ಲಿ ಎಂದ ಪ್ರಶ್ನೆ ಮಾಡಿದ ನೆಟ್ಟಿಗರು.....
 

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ 24ನೇ ಹುಟ್ಟುಹಬ್ಬವನ್ನು ಸರಳವಾಗಿ ಹುಟ್ಟೂರಿನಲ್ಲಿ ಆಚರಿಸಿಕೊಂಡಿದ್ದಾರೆ.

ಪ್ರತಿ ವರ್ಷ ಬೆಂಗಳೂರಿನ ಸಿಟಿಯಲ್ಲಿ ಫಾಲೋವರ್ಸ್ ಮತ್ತು ಸ್ನೇಹಿತರ ಜೊತೆ ಆಚರಿಸಿಕೊಳ್ಳುತ್ತಿದ್ದ ಸೋನು ಈ ವರ್ಷ ಮನೆ ದೇವರ ಪೂಜೆ ಮಾಡಲು ಮುಂದಾಗಿದ್ದಾರೆ.

Tap to resize

ತಾಯಿ ಮತ್ತು ತಮ್ಮನ ಜೊತೆ ಹುಟ್ಟು ಊರಿಗೆ ಪ್ರಯಾಣ ಮಾಡಿ ದೇವರ ಪೂಜೆ ಸಲ್ಲಿಸುವ ಮೂಲಕ ಸಿಂಪಲ್ ಬರ್ತಡೇ ಆಚರಿಸಿಕೊಂಡಿದ್ದಾರೆ.

ಬೆಂಗಳೂರಿನ ಸಿಟಿಯಲ್ಲಿ ಪಬ್ ಪಾರ್ಟಿ ಅಂತ  ಇದ್ದ ಹುಡುಗಿ ಎಲ್ಲಾ ಬಿಟ್ಟು ಊರಿಗೆ ಹೋಗಿದ್ದು ಯಾಕೆ? ಎಣ್ಣೆ ಬಿಟ್ಟಮಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹುಟ್ಟುಹಬ್ಬಕ್ಕೆಂದು ಸೋನು ಸಾವಿರಾರೂ  ರೂಪಾಯಿಗಳಿಗೆ ಶಾಪಿಂಗ್ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಏನೆಲ್ಲಾ ಖರೀದಿಸಿದ್ದಾರೆ ಎಂದು ಅಪ್ಲೋಡ್ ಮಾಡಿದ್ದಾರೆ. 

ಸದ್ಯ ಸೇವಂತಿ ಯೂಟ್ಯೂಬ್ ಚಾನೆಲ್‌ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಸೋನು 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 

Latest Videos

click me!