ಈಗಾಗಲೇ ನಮೃತಾ ಗೌಡ, ತನಿಷಾ ಕುಪ್ಪಂಡ, ಅಷ್ಟೇ ಯಾಕೆ ಅನುಪಮಾ ಗೌಡ ಜೊತೆಗೂ ಕಾರ್ತಿಕ್ ಹೆಸರು ಕೇಳಿ ಬಂದಿತ್ತು. ಅನುಪಮಾ ಮತ್ತು ಕಾರ್ತಿಕ್, ನಮೃತಾ ಗೌಡ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದೆ ತಡ, ಕಾರ್ತಿಕ್ ಅವರ ಸೀಕ್ರೆಟ್ ಗರ್ಲ್ ಫ್ರೆಂಡ್ ಅನುಪಮಾ, ಅವರನ್ನೇ ಕಾರ್ತಿಕ್ ಮದುವೆಯಾಗಲಿದ್ದಾರೆ ಅಂತೆಲ್ಲಾ ಸುದ್ದಿ ಹರಡಿಸಿದ್ದವು ಸೋಶಿಯಲ್ ಮೀಡಿಯಾ. ಈ ಕುರಿತು ಕಾರ್ತಿಕ್, ಅನುಪಮಾ ಇಬ್ಬರೂ ಗರಂ ಆಗಿ, ಇನ್ನೆಷ್ಟು ಜನರ ಜೊತೆ ಮದ್ವೆ ಮಾಡಿಸ್ತೀರಿ ಅಂತಾನು ಕೇಳಿದ್ರು.