ನನಗೆ ವಿರಾಟ್‌ ಕೊಹ್ಲಿಯಂಥ ಹುಡುಗನೇ ಬೇಕು; ಯಜುವೇಂದ್ರ ಚಾಹಲ್‌ ಬೇಡ; ಮುಖಕ್ಕೆ ಹೊಡೆದಂತೆ ಹೇಳಿದ Bigg Boss ಸ್ಪರ್ಧಿ

Published : Apr 21, 2026, 05:14 PM IST

ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್‌ ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್‌ ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 

PREV
13
ಒಟ್ಟಿಗೆ ಊಟ ಮಾಡಿದ್ರೆ ಡೇಟಿಂಗ್‌ ಅಲ್ಲ!

ಇತ್ತೀಚೆಗೆ ಚಹಲ್, ಶೆಫಾಲಿ ಒಟ್ಟಿಗಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಶೆಫಾಲಿ ಅವರು, "ಯಾರೋ ಇಬ್ಬರು ಒಟ್ಟಿಗೆ ಊಟ ಮಾಡಿದರೆ ಅದು ಡೇಟಿಂಗ್ ಅಲ್ಲ, ಜನರು ಇಂಥ ಆಲೋಚನೆಗಳಿಂದ ಹೊರಬರಬೇಕು" ಎಂದು ಹೇಳಿದ್ದಾರೆ.

23
ಮಿಕ್ಸ್‌ ಮಾಡಬೇಡಿ

ನಾನು ಕ್ರೀಡಾ ನಿರೂಪಕಿ, ಹೀಗಾಗಿ ನಾನು ಕ್ರಿಕೆಟಿಗರೊಂದಿಗೆ ಕಾಣಿಸಿಕೊಳ್ಳುವುದು ಸಹಜ. ನನ್ನ ವೃತ್ತಿ ಜೀವನ ಬೇರೆ, ವೈಯಕ್ತಿಕ ಜೀವನ ಬೇರೆ. ಇದನ್ನು ಮಿಕ್ಸ್‌ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

33
ವಿರಾಟ್‌ ಕೊಹ್ಲಿಯಂಥ ಹುಡುಗ ಬೇಕು

"ಅನುಷ್ಕಾ ಶರ್ಮಾ ಮೇಲೆ ವಿರಾಟ್ ಕೊಹ್ಲಿ ಪ್ರೀತಿ, ಕಾಳಜಿಯನ್ನು ನೋಡಿದರೆ ಖುಷಿಯಾಗುತ್ತದೆ. ಎಷ್ಟೇ ಕೆಲಸ ಇದ್ದರೂ ಕೂಡ ಅವರು ತಮ್ಮ ಪತ್ನಿಗೆ ಟೈಮ್‌ ಕೊಡ್ತಾರೆ. ನನಗೂ ಕೂಡ ಅದೇ ಥರ ಕಾಳಜಿ ತೋರುವ ವ್ಯಕ್ತಿ ಬೇಕು” ಎಂದು ಹೇಳಿದ್ದಾರೆ. 

ನಾನು ಈಗ ಕರಿಯರ್‌ ಕಡೆಗೆ ಗಮನ ಕೊಡ್ತೀನಿ ಎಂದು ಶೆಫಾಲಿ ಹೇಳಿದ್ದಾರೆ. ಇನ್ನು ಶೆಫಾಲಿ ನಟಿಸಿರುವ ಕೆಲ ಸಿನಿಮಾಗಳು ರಿಲೀಸ್‌ ಆಗಬೇಕಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories