Annayya Serial: ಅಣ್ಣಯ್ಯ ಧಾರಾವಾಹಿ ಸದ್ಯ ರೋಚಕ ಘಟ್ಟದಲ್ಲಿದೆ. ಇಲ್ಲಿವರೆಗೆ ತಂಗಿಯರ ಜೀವನದ ಬಗ್ಗೆ ತಿಳಿದುಕೊಳ್ಳುವಲ್ಲಿ ಎಡವಿದ್ದ ಶಿವಣ್ಣನ ಮುಂದೆ ಇದೀಗ ಜಿಮ್ ಸೀನಾನ ನಿಜವಾದ ರೂಪ ಬಯಲಾಗಿದೆ. ಇದು ಗೊತ್ತಾದ ಮೇಲೆ ಸೀನಾನ ಸುಮ್ಮನೆ ಬಿಡ್ತಾನ ಶಿವಣ್ಣ? ಏನಾಗಲಿದೆ ಮುಂದೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಣ್ಣಯ್ಯ, ಇದೀಗ ರೋಚಕ ಹಂತವನ್ನು ತಲುಪಿದೆ. ತಂಗಿಯರ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ, ತಾನು ತಂಗಿಯರಿಗಾಗಿ ಮಾಡಿದ್ದೆಲ್ಲವೂ ಸರಿಯಾಗಿಯೇ ಎಂದು ತಿಳಿದುಕೊಂಡಿದ್ದ ಶಿವಣ್ಣನ ಎದುರು ಜಿಮ್ ಸೀನಾನ ನಿಜ ರೂಪ ಬಯಲಾಗಿದೆ. ಮುಂದೇನು ಮಾಡ್ತಾನೆ ಶಿವಣ್ಣ ಎನ್ನುವ ಕುತೂಹಲ ಇದೀಗ ವೀಕ್ಷಕರಲ್ಲಿ ಹೆಚ್ಚಾಗಿದೆ.
26
ಏನಾಗ್ತಿದೆ ಅಣ್ಣಯ್ಯ ಧಾರಾವಾಹಿಯಲ್ಲಿ?
ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋದಲ್ಲಿ ತೋರಿಸಿರುವಂತೆ ಪಾರು ರಾತ್ರಿ ವೇಳೆ ಇದ್ದಕ್ಕಿದ್ದಂತೆ ಕೆಟ್ಟ ಕನಸು ಕಂಡು ಬೆಚ್ಚಿ ಬಿದ್ದು ಎದ್ದೇಳುತ್ತಾಳೆ. ಶೀಘ್ರದಲ್ಲಿ ಏನೋ ಕೆಟ್ಟದ್ದು ನಡೆಯಲಿದೆ ಎನ್ನುವ ಭೀಟಿ ಪಾರುಗೆ ಕಾಡೋದಕ್ಕೆ ಶುರುವಾಗಿದೆ. ಶಿವಣ್ಣ ಪಾರುನ ಸಮಾಧಾನ ಮಾಡುತ್ತಾ, ಏನೋ ಕೆಟ್ಟ ಕನಸು ಅಷ್ಟೇ ಹರಕೆ ತೀರಿದ ಮೇಲೆ ಎಲ್ಲಾ ಸರಿಯಾಗುತ್ತೆ ಎನ್ನುತ್ತಾನೆ.
36
ಶಿವಣ್ಣನ ಕಣ್ಣೆದುರು ಸೀನಾ-ಪಿಂಕಿ
ದೇವಸ್ಥಾನದಲ್ಲಿ ಶಿವಣ್ಣ ಹರಕೆ ತೀರಿಸಲು ತಲೆ ಮೇಲೆ ಕಳಸ ಹೊತ್ತು, ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಿದ್ದಾನೆ. ಇನ್ನೊಂದೆಡೆ ಪಿಂಕಿ ಮತ್ತು ಸೀನಾ ದೇವಸ್ಥಾನದಲ್ಲಿ ಲವ್ವಿ ಡವ್ವಿ ಮಾಡುತ್ತಿದ್ದಾರೆ. ಇದನ್ನು ನೋಡಿ, ಪಾರು ಶಿವು ಕಣ್ಣಿಗೆ ಇವರು ಬೀಳದಿರಲಿ ಎಂದು ಪ್ರಾರ್ಥಿಸುತ್ತಾಳೆ. ಶಿವಣ್ಣ ನನ್ನ ತಂಗಿಯರ ಮದುವೆ ಕನಸು ನನಸಾಗಿಸಿಬಿಟ್ಟೆ, ಅವರ ಸಂಸಾರನೂ ಹೀಗೆ ಬೆಳೆಯುವಂತೆ ಮಾಡು ಎಂದು ಪ್ರಾರ್ಥಿಸಿ ಕಣ್ಣು ಬಿಡುವಾದ ಸೀನಾ-ಪಿಂಕಿ ಜೊತೆಯಾಗಿ ಕಣ್ಣೆದುರು ಪ್ರತ್ಯಕ್ಷ.
ಸೀನಾ- ಪಿಂಕಿಯನ್ನು ಜೊತೆಯಾಗಿ ನೋಡಿ ಶಾಕ್ ಆದ ಶಿವು, ಗುಂಡು ಮುಖವನ್ನು ನೋಡಿದಾಗ, ಆಕೆ ನಿಜವೆಂದು ಹೇಳುತ್ತಾಳೆ. ಇದರಿಂದ ರೊಚ್ಚಿಗೆದ್ದ ಶಿವು, ಸೀನಾನನ್ನು ಎತ್ತಿ ಬಿಸಾಕಿ, ನನ್ನ ತಂಗಿ ಜೀವನಕ್ಕೆ ಕೊಳ್ಳಿ ಇಟ್ಟೆ ಅಲ್ವ? ನಿನ್ನ ಸುಮ್ನೆ ಬಿಡೋದೆ ಇಲ್ಲ ಎನ್ನುತ್ತಾನೆ. ಕುಸಿದು ಬಿದ್ದು ಕಣ್ಣಿರಿಡುತ್ತಾನೆ ಶಿವು. ಹಾಗಿದ್ರೆ ಮುಂದೆ ಶಿವು ನಿರ್ಧಾರ ಏನಾಗಬಹುದು?
56
ಶಿವು -ಪಾರು ಅಭಿನಯಕ್ಕೆ ಭಾರಿ ಮೆಚ್ಚುಗೆ
ಪ್ರೊಮೋ ನೋಡಿ ಖುಷಿ ಪಟ್ಟಿರುವ ವೀಕ್ಷಕರು ಶಿವು ಅಭಿನಯಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಶ್ ಉತ್ತಯ್ಯ ನಟ ಭಯಂಕರ, ಇವರು ಎಂತಹುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸುತ್ತಾರೆ. ನಮ್ಮ ಶಿವಣ್ಣ ಅಭಿನಯ ಅಂದ್ರೆ ಸುಮ್ನೆ ಅಲ್ಲ next level. ಪಾರು ಅಂತೂ ಸೂಪರ್. ಪಾರು ಮತ್ತು ಶಿವು ಇಬ್ಬರದ್ದೂ ಬೆಂಕಿ ಅಭಿನಯ ಎಂದು ಹಾಡಿ ಹೊಗಳಿದ್ದಾರೆ ಜನ.
66
ಯಾರೆಲ್ಲಾ ನಟಿಸುತ್ತಿದ್ದಾರೆ?
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನಾಗಿ ವಿಕಾಶ್ ಉತ್ತಯ್ಯ ಪಾರು ಆಗಿ ನಿಶಾ ರವಿಕೃಷ್ಣನ್, ಇದಲ್ಲದೇ ನಾಗೇಂದ್ರ ಶಾ, ನಾಗಶ್ರೀ ಬೇಗರ್, ಅಂಕಿತಾ ಗೌಡ, ರಾಘವಿ, ಪ್ರತೀಕ್ಷ ಶ್ರೀನಾಥ್, ಸುಶ್ಮಿತ್ ಜೈನ್ ಸೇರಿ ಹಲವಾರು ಹಿರಿಯ-ಕಿರಿಯ ನಟ ನಟಿಯರು ನಟಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.