ತುಂಡು ಫ್ರಾಕ್‌ನಲ್ಲಿ ಬಾರ್ಬಿ ಗರ್ಲ್‌ನಂತೆ ಮಿಂಚಿದ ನಮ್ರತಾ ಗೌಡ: ಪ್ಲೀಸ್ ಸ್ನೇಹಿತ್ ಜೊತೆ ಮಾತಾಡಿ ಅನ್ನೋದಾ ಫ್ಯಾನ್ಸ್‌!

Published : Feb 08, 2024, 11:01 AM IST

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ರು. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ.

PREV
16
ತುಂಡು ಫ್ರಾಕ್‌ನಲ್ಲಿ ಬಾರ್ಬಿ ಗರ್ಲ್‌ನಂತೆ ಮಿಂಚಿದ ನಮ್ರತಾ ಗೌಡ: ಪ್ಲೀಸ್ ಸ್ನೇಹಿತ್ ಜೊತೆ ಮಾತಾಡಿ ಅನ್ನೋದಾ ಫ್ಯಾನ್ಸ್‌!

ಬಿಗ್ ಬಾಸ್ ಮನೆಯಲ್ಲಿ 100 ದಿನಗಳನ್ನು ಕಂಪ್ಲೀಟ್ ಮಾಡಿದ ನಮ್ರತಾ ಬಳಿಕ ನಾಮಿನೇಟ್​ ಆದ್ರು. ಬಿಗ್​ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಅಭಿಮಾನಿಗಳನ್ನು ರಂಜಿಸಿದ್ರು.

26

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಪಿಂಕ್ ಫ್ರಾರ್ಕ್​ ತೊಟ್ಟು ಮಿಂಚುತ್ತಿದ್ದಾರೆ.

36

ಹಂಪಿ ಉತ್ಸವ 2024ರಲ್ಲಿ ಭಾಗಿಯಾಗಿದ್ದ ನಟಿ ನಮ್ರತಾ ಗೌಡ ವೇದಿಕೆ ಮೇಲೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ನಮ್ಮು ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.

46

ಪಿಂಕ್ ಕಲರ್ ಡ್ರೆಸ್​ನಲ್ಲಿ ನಮ್ಮು ಬಾರ್ಬಿ ಗರ್ಲ್ ತರ ಕಾಣುತ್ತಿದ್ದಾರಾ, ಸ್ನೇಹಿತ್ ಜೊತೆ ಪ್ಲೀಸ್ ಮಾತಾಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಮ್ಮು ಬ್ಯೂಟಿಫುಲ್ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ.

56

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. 

66

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ನಾಗಿಣಿ 2' ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. ಇದು ಮುಗಿಯುತ್ತಿದ್ದಂತೆ ಬಿಗ್ ಬಾಸ್‌ ಕನ್ನಡ ಸೀಸನ್ 10ಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕವಂತೂ ನಮ್ರತಾ ಪರ್ಫಾಮೆನ್ಸ್‌ಗೆ ಅನೇಕರು ಫಿದಾ ಆಗಿದ್ದಾರೆ.

Read more Photos on
click me!

Recommended Stories