ಬುರ್ಜ್ ಖಲೀಫಾ ಮೇಲೆ ಪತಿ ಜೊತೆ ಪೋಸ್ ನೀಡಿದ ಕಿರುತೆರೆ ನಟಿ ದೀಪಾ ಕಟ್ಟೆ!

First Published | Feb 7, 2024, 2:53 PM IST

ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟಿ ದೀಪಾ ಕಟ್ಟೆ ಸದ್ಯ ಪತಿ ಜೊತೆ ದುಬೈ ಪ್ರವಾಸದಲ್ಲಿದ್ದು, ಬುರ್ಜ್ ಖಲೀಫಾದ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ , ತುಳಸಿ ಮಗಳಾಗಿ, ತಾತನ ಓಡಿ ಹೋದೋಳೆ ಎಂದೇ ಜನಪ್ರಿಯತೆ ಪಡೆದಿರುವ ನಟಿ ದೀಪಾ ಕಟ್ಟೆ (Deepa Katte).  ಈ ಸೀರಿಯಲ್ ನಲ್ಲಿ ದೀಪಾ ಪಾತ್ರ ಕೆಟ್ಟವಳಾಗಿದ್ದರು, ಇವರ ನಟನೆಗೆ ಜನ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 

ಇದೀಗ ದೀಪಾ ಕಟ್ಟೆ ತಮ್ಮ ಪತಿ ರಕ್ಷಿತ್ ಎಡಪಡಿತ್ತಾಯ ಜೊತೆ ದುಬೈ ಟೂರ್ ಮಾಡುತ್ತಿದ್ದು, ಬುರ್ಜ್ ಖಲೀಫಾದ ಟಾಪ್ ನಲ್ಲಿ ನಿಂತು ವಿವಿಧ ಪೋಸ್ ನೀಡಿ ಫೋಟೋ ತೆಗೆಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ದಾರೆ. 

Tap to resize

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ದೀಪಾ ಕಟ್ಟೆ ಹೆಚ್ಚಾಗಿ ರೀಲ್ಸ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ, ಅಲ್ಲದೇ ಗಂಡನ ಜೊತೆಗೂ ಸಹ ಫೋಟೋ ಶೇರ್ ಮಾಡುತ್ತಿರುತ್ತಾರೆ. 

ಉಜಿರೆಯ ಹುಡುಗಿ ದೀಪಾ ಕಟ್ಟೆ ಕಳೆದ ವರ್ಷ ಮೇ ತಿಂಗಳಲ್ಲಿ ಐಟಿ ಉದ್ಯೋಗಿ ರಕ್ಷಿತ್  ಯಡಪಡಿತ್ತಾಯ ಅವರ ಜೊತೆ ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟಿದ್ದರು. ಇವರು ಕಾಲೇಜು, ಕೆಲಸದಲ್ಲಿ ಜೊತೆಯಾಗಿದ್ದವರು.

ಇದೀಗ ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿಯ ಜೊತೆ ವಿದೇಶ ಪ್ರವಾಸ ಮಾಡಿದ್ದು, ದುಬೈನಲ್ಲಿ (Dubai)ಎಲ್ಲಾ ಪ್ರವಾಸಿ ತಾಣಗಳಲ್ಲಿ ಸುತ್ತಾಡ್ತಾ ಇದ್ದಾರೆ. ಸದ್ಯಕ್ಕೆ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡಂತೆ ಕಾಣುತ್ತದೆ. 

ಇನ್ನು ಸೀರಿಯಲ್ ಬಗ್ಗೆ ಹೇಳೋದಾದ್ರೆ ವಿಲನ್, ಸಾಧು, ನಾಯಕಿ ಹೀಗೆ ಎಲ್ಲಾ ಪಾತ್ರಕ್ಕೂ ಸೈ ಎನಿಸುವ ದೀಪಾ ಈ ಹಿಂದೆ ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. 

ವೃತ್ತಿಯಲ್ಲಿ ಇಂಜಿನಿಯರ್ (engineer) ಆಗಿದ್ದ ದೀಪಾ,  ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ನಾಟಕಗಳಲ್ಲಿ ನಟಿಸುತ್ತಾ, ಬಳಿಕ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟು, ಐಟಿ ವೃತ್ತಿಗೆ ಗುಡ್ ಬೈ ಹೇಳಿ, ಸದ್ಯ ಫುಲ್ ಟೈಮ್ ನಟಿಯಾಗಿದ್ದಾರೆ. 

Latest Videos

click me!