ಆಡು ಮುಟ್ಟದ ಸೊಪ್ಪಿಲ್ಲ, ಕಿಶನ್ ಜೊತೆ ಡ್ಯಾನ್ಸ್ ಆಡದ ಹುಡುಗಿ ಇಲ್ಲ; ರೊಮ್ಯಾನ್ಸ್‌ ನೋಡಿ ಕಾಲೆಳೆದ ನೆಟ್ಟಿಗರು!

First Published | Nov 11, 2024, 5:24 PM IST

ವೈರಲ್ ಅಯ್ತು ಕಿಶನ್ -ಶ್ವೇತಾ ಡ್ಯಾನ್ಸ್‌ ವಿಡಿಯೋ.....ಹಾಟ್‌ನೆಟ್‌ಗೆ ಫಿದಾ ಆಗಿ ಕಾಮೆಂಟ್ ಮಾಡಿದವರು ಸಾವಿರಾರು ಮಂದಿ.....

ಹಿಂದಿ ಮತ್ತು ಕನ್ನಡ ಕಿರುತೆರೆ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಕಿಶನ್ ಖ್ಯಾತ ಪಡೆದದ್ದು ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋಯಿಂದ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಶನ್ ಆಗಾಗ ಜನಪ್ರಿಯ ನಟಿ, ಮಾಡಲ್ ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳ ಜೊತೆ ಡ್ಯಾನ್ಸ್‌ ವಿಡಿಯೋ ಕ್ರಿಯೇಟ್ ಮಾಡುತ್ತಾರೆ.

Tap to resize

ಇದೀಗ ಹಿಂದಿ ಹಾಡೊಂದಕ್ಕೆ ಕಿಶನ್ ಮತ್ತು ಶ್ವೇತಾ ಶ್ರದ್ಧ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ. ಈಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 ಸಾಮಾನ್ಯವಾಗಿ ಕಿಶನ್ ಯಾವುದೇ ಹುಡುಗಿಯ ಜೊತೆ ಡ್ಯಾನ್ಸ್ ಮಾಡಿದ್ದರು ಸಖತ್ ಟ್ರೋಲ್ ಮಾಡುತ್ತಾರೆ. ನೆಗೆಟಿವ್ ಕಾಮೆಂಟ್‌ಗಳಿಗೆ ಈ ಹಿಂದೆಯೇ ಉತ್ತರ ಕೊಟ್ಟಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ ಕಿಶನ್ ಜೊತೆ ಡ್ಯಾನ್ಸ್ ಆಡದ ಹುಡುಗಿ ಇಲ್ಲ, ಎಲ್ಲೋ ಒಳ್ಳೆ ಮಚ್ಚೆ ಇದೆ ಗುರು ನಿಂಗೆ, ಅಣ್ಣಂಗೆ ಹೆಣ್ಣಿನ ಮಚ್ಚೆ ಜಾಸ್ತಿ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

 ಚಿಕ್ಕಮಗಳೂರಿನ ಕಿಶನ್ ತಮ್ಮ 8ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ಆ ನೋವಿನಿಂದ ಹೊರ ಬರಲು ನೃತ್ಯ ತರಬೇತಿ ಪಡೆದರು. 

Latest Videos

click me!