ಬಿಗ್ ಬಾಸ್ ನ ಆನೆ ವಿನಯ್ ಗೌಡ ಈಗ ಪತ್ನಿ ಜೊತೆ ರಾಜಾ ರಾಣಿಯಲ್ಲಿ: ಪತಿ ಸೀಕ್ರೆಟ್ ತಿಳಿಸಿದ ಅಕ್ಷತಾ

First Published | Jun 5, 2024, 5:40 PM IST

ಬಿಗ್ ಬಾಸ್ ಸೀಸನ್ 10 ರಲ್ಲಿ ಆನೆ ಎಂದೇ ಖ್ಯಾತಿ ಪಡೆದ ವಿನಯ್ ಗೌಡ ಇದೀಗ ಮತ್ತೊಂದು ರಿಯಾಲಿಟಿ ಶೋ ಮೂಲಕ, ಮನರಂಜನೆ ನೀಡೋದಕ್ಕೆ ರೆಡಿಯಾಗ್ತಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigg Boss season 10) ರಲ್ಲಿ ಸಖತ್ ಫೈಟ್ ನೀಡಿ, ಆನೆ ಎಂದೆ ಖ್ಯಾತಿ ಪಡೆದಿದ್ದ ವಿನಯ್ ಗೌಡ ಇದೀಗ ತಮ್ಮ ಪತ್ನಿ ಜೊತೆ ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. 
 

ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ರಾಜಾ ರಾಣಿ ರೀಲೋಡೆಡ್ (Raja Rani reloaded) ಎನ್ನುವ ಕಪಲ್ಸ್ ರಿಯಾಲಿಟಿ ಶೋದಲ್ಲಿ ಪತ್ನಿ ಅಕ್ಷತಾ ಗೌಡ ಜೊತೆ ವಿನಯ್ ಗೌಡ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಇವರಿಬ್ಬರ ಪ್ರೋಮೋ ರಿಲೀಸ್ ಆಗಿದೆ. 
 

Tap to resize

ರಾಜಾ ರಾಣಿ ರೀಲೋಡೆಡ್ ಶೋ ಇದೇ ಜೂನ್ 8 ರಿಂದ ಆರಂಭವಾಗಲಿದೆ. ಈ ಶೋನಲ್ಲಿ ಹಲವು ಜನ ಸೆಲೆಬ್ರಿಟಿ ಕಪಲ್ಸ್ ಭಾಗವಹಿಸಲಿದ್ದಾರೆ. ಅವರಲ್ಲಿ ವಿನಯ್ ಗೌಡ ಮತ್ತು ಅಕ್ಷತಾ ದಂಪತಿ ಸಹ ಒಬ್ಬರು. ಇಬ್ಬರು ಮಸ್ತ್ ಡ್ಯಾನ್ಸ್ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 
 

ಈ ಕಾರ್ಯಕ್ರಮದಲ್ಲಿ ಪತ್ನಿ ಅಕ್ಷತಾ ಅವರು ವಿನಯ್ ಗೌಡ (Vinay Gowda) ಅವರ ಸೀಕ್ರೇಟ್ಸ್ ತೆರೆದಿಟ್ಟಿದ್ದಾರೆ. ನಿರೂಪಕಿ ಅನುಪಮಾ ಗೌಡ, ವಿನಯ್ ಬಿಗ್ ಬಾಸ್ ಮನೆಯಲ್ಲಿ ಆನೆಯಾಗಿದ್ರು, ಮನೆಯಲ್ಲಿ ಹೇಗೆ ಎಂದು ಕೇಳಿದಾಗ, ವಿನಯ್ ಮನೆಯಲ್ಲಿ ಆನೆ ಗೀನೆಗೆ ಬೆಲೇನೆ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅಕ್ಷತಾ ಮನೆಯಲ್ಲಿ ಇವ್ರನ್ನ ಬೆಂಡೆತ್ತೋಕೆ ನಾನು ಬೇಕೆ ಬೇಕು ಎಂದಿದ್ದಾರೆ.
 

ಮನೆಯ ಕೆಲಸದ ವಿಷಯ ಬಂದಾಗ ವಿನಯ್ ಆನೆನಾ? ಇಲಿನಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಕ್ಷತಾ (Akshatha). ವಿನಯ್ ಝೀರೋ ಏನೂ ಅಂದ್ರೆ ಏನೂ ಮಾಡೋದೆ ಇಲ್ಲ ಎಂದಿದ್ದಾರೆ. ಅದಕ್ಕೆ ವಿನಯ್ ಹಿಂತಿರುಗಿ ಹೋಗುವಂತೆ ನಟಿಸಿ, ತೆಗಿರೋ ಬಾಗಿಲು ಎಂದು ಹೋಗೋ ಪ್ರೋಮೋ ಸದ್ಯ ಸದ್ದು ಮಾಡ್ತಿದೆ. 
 

ವಿನಯ್ ಮತ್ತು ಅಕ್ಷತಾ ಗೌಡ ದಂಪತಿ ಬಾಲ್ಯ ಸ್ನೇಹಿತರು, ಇವರು ಜೊತೆಯಾಗಿ ಬೆಳೆದು, ಪ್ರೀತಿ ಮಾಡಿ ಮದುವೆಯಾಗಿದ್ದಾರೆ. ಇವರಿಬ್ಬರಿಗೆ 11 ವರ್ಷದ ಮಗ ಕೂಡ ಇದ್ದಾರೆ. ಇಬ್ಬರು ಜೊತೆಯಾಗಿ ಈ ಹಿಂದೆಯೂ ಕಪಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇಬ್ಬರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ (Social media) ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಿರುತ್ತಾರೆ. 
 

ಇನ್ನು ರಾಜಾ ರಾಣಿ ರೀಲೋಡೆಡ್ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ (Srujan Lokesh), ತಾರಾ ಅನುರಾಧ ಮತ್ತು ಅದಿತಿ ಪ್ರಭುದೇವ ಈ ಮೂವರು ಜಡ್ಜ್ ಗಳಾಗಿ ಭಾಗವಹಿಸಲಿದ್ದಾರೆ. ಅನುಪಮಾ ಗೌಡ ನಿರೂಪಕಿಯಾಗಿ ಮತ್ತೆ ಬಂದಿದ್ದಾರೆ. ವಿನಯ್ ಮತ್ತು ಅಕ್ಷತಾ ಜೋಡಿಯನ್ನು ರಾಜಾ ರಾಣಿಯಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 
 

Latest Videos

click me!