ಕ್ಯಾಪ್ಶನ್ ನೋಡ್ಬೇಡಿ, ನನ್ನನ್ನು ನೋಡಿ… ಎಂದ ಕಿರುತೆರೆಯ ಬ್ಯೂಟಿ ಅಂದಕ್ಕೆ ಸೋತ ಜನ

Published : Jul 16, 2024, 04:15 PM IST

ಕರಿಮಣಿ ಧಾರಾವಾಹಿಯಲ್ಲಿ ಸಾಹಿತ್ಯಾ ಆಗಿ ನಟಿಸುತ್ತಿರುವ ಸ್ಪಂದನಾ ಸೋಮಣ್ಣ ಹೊಸ ಸ್ಟೈಲಿಶ್ ಲುಕ್ ವೈರಲ್ ಆಗಿದೆ. 

PREV
17
ಕ್ಯಾಪ್ಶನ್ ನೋಡ್ಬೇಡಿ, ನನ್ನನ್ನು ನೋಡಿ… ಎಂದ ಕಿರುತೆರೆಯ ಬ್ಯೂಟಿ ಅಂದಕ್ಕೆ ಸೋತ ಜನ

ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆ ಎರಡರಲ್ಲೂ ಮಿಂಚುತ್ತಿರುವ ನಟಿ ಸ್ಪಂದನಾ ಸೋಮಣ್ಣ (Spandana Somanna). ಸದ್ಯ ಸೀರಿಯಲ್ ಜೊತೆಗೆ, ಕನ್ನಡ ಸಿನಿಮಾದಲ್ಲೂ ನಟಿಸುತ್ತಿರುವ ಬ್ಯುಸಿ ನಟಿ ಇವರು. ಸದ್ಯ ಇವರು ನಟಿಸಿದ ದಿಲ್ ಖುಷ್ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. 
 

27

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯಲ್ಲಿ ಅಪ್ಪಟ ಮಿಡಲ್ ಕ್ಲಾಸ್ ಹುಡುಗಿ, ಅಪ್ಪನ ಪ್ರೀತಿಯ ಮಗಳು ಸಾಹಿತ್ಯ ಆಗಿ ನಟಿಸುತ್ತಿರುವ ನಟಿ ಸ್ಪಂದನಾ. ತಮ್ಮ ಮುಗ್ಧ ಅಭಿನಯದಿಂದಲೇ ಸಾಕಷ್ಟು ಜನ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 
 

37

ಈ ಹಿಂದೆ ಗೃಹಪ್ರವೇಶ ಸೀರಿಯಲ್ ಸ್ಪಂದನಾ ನಟಿಸಿದ್ದರು, ಆದ್ರೆ ಸೀರಿಯಲ್ ಹೆಚ್ಚು ಸಮಯ ಓಡಲೇ ಇಲ್ಲ. ಗೃಹಪ್ರವೇಶ ಮುಗಿದ ಸ್ವಲ್ಪ ಸಮಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಸೀರಿಯಲ್ ಕರಿಮಣಿ (Karimani Serial) ಮೂಲಕ ಸ್ಪಂದನಾ ವಾಪಾಸ್ ಆಗಿದ್ದರು. ಸೀರಿಯಲ್ ಕಥೆ, ನಾಯಕಿಯ ನಟನೆ ಎಲ್ಲವೂ ವೀಕ್ಷಕರಿಗೆ ಇಷ್ಟವಾಗಿದ್ದು, ಸೀರಿಯಲ್ ಕೂಡ ಜನಪ್ರಿಯತೆ ಪಡೆದಿದೆ. 
 

47

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಾಹಿತ್ಯಾ ಆಲಿಯಾಸ್ ಸ್ಪಂದನಾ ಸೋಮಣ್ಣ, ರೀಲ್ ಗಿಂತ ರಿಯಲ್ ಲೈಫಲ್ಲಿ ತುಂಬಾನೆ ಮಾಡರ್ನ್ ಆಗಿದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳನ್ನ ನೋಡಿದ್ರೇನೆ ಗೊತ್ತಾಗುತ್ತೆ ಸ್ಪಂದನಾ ಸ್ಟೈಲಿಶ್ ನಟಿ ಎಂದು. 
 

57

ಇತ್ತೀಚೆಗೆ ಸ್ಪಂದನಾ ಒಂದಿಷ್ಟು ಫೋಟೋ ಸೀರಿಸ್, ವಿಡಿಯೋಗಳನ್ನು ಹಂಚಿಕೊಂಡಿದ್ದು, ಮಿನಿ ಬ್ಲ್ಯಾಕ್ ಆಂಡ್ ರೆಡ್ ಡ್ರೆಸಲ್ಲಿ ನಟಿ ತುಂಬಾ ಮುದ್ದಾಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮ್ ಅಪ್ ಬೈ ಅನ್ವಿತಾ ಮೇಕಪ್ ಮತ್ತು ಅರುಣ್ ಕುಮಾರ್ ಪೋಟ್ರೈಟ್ ಫೋಟೋಗ್ರಾಫಿಯಲ್ಲಿ ನಟಿ ಸಖತ್ ಸ್ಟೈಲಿಸ್ ಕಾಣಿಸಿಕೊಂಡಿದ್ದಾರೆ. 
 

67

ಕೆಂಪು ಬಣ್ಣದ ಬೋ ರೀತಿಯ ಆಫ್ ಶೋಲ್ಡರ್ ಟಾಪ್ ಜೊತೆ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಧರಿಸಿರುವ ಸ್ಪಂದನಾ ಕ್ಯಾಪ್ಶನ್ ನೋಡಬೇಡಿ, ನನ್ನನ್ನೇ ನೋಡಿ ( Don’t look at the caption look at me) ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 
 

77

ಅಭಿಮಾನಿಗಳು ತಮ್ಮ ಫೇವರಿಟ್ ನಟಿಯ ಫೋಟೋಗೆ ಮೆಚ್ಚುಗೆಯ ಮಳೆಯನ್ನೇ ಹರಿಸಿದ್ದಾರೆ. ನಿಮ್ಮಂತಹ ಸುಂದರಿ ಇದ್ರೆ ಕ್ಯಾಪ್ಶನ್ ಯಾರ್ ನೋಡ್ತಾರೆ ಅಂದಿದ್ದಾರೆ, ಅಲ್ಲದೇ ಸಿಝಲಿಂಗ್ ಬ್ಯೂಟಿ, ಬಾರ್ಬಿ ಡಾಲ್, ನೀವು ಮತ್ತು ನಿಮ್ಮ ನಗು ಎರಡು ತುಂಬಾನೆ ಆಕರ್ಷಕವಾಗಿವೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories