ಬಿಗ್ ಬಾಸ್ ಕನ್ನಡ ಸೀಸನ್ 13ರ ಬಗ್ಗೆ ಕುತೂಹಲ ಜಾಸ್ತಿ ಆಗಿದೆ. ಜನಸಾಮಾನ್ಯರಿಗೆ ಈ ಬಾರಿ ಬಿಗ್ ಬಾಸ್ ಗೆ ಹೋಗೋ ಅವಕಾಶ ಸಿಕ್ತಿದೆ. ಈ ಮಧ್ಯೆ ರಕ್ಷಿತಾ ಮತ್ತೆ ಬಿಗ್ ಬಾಸ್ ಗೆ ಬರ್ತಾರೆ ಎನ್ನುವ ಗುಸುಗುಸು ಇದೆ. ರಕ್ಷಿತಾ ಬಿಗ್ ಬಾಸ್ ಬಗ್ಗೆ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಪ್ ಹಿಡಿದಿದ್ದು ಗಿಲ್ಲಿಯಾದ್ರೂ ರಕ್ಷಿತಾ ಎಲ್ಲರ ಮನಸ್ಸು ಗೆಲ್ಲೋದ್ರಲ್ಲಿ ಯಶಸ್ವಿಯಾಗಿದ್ರು. ಯಾವುದೇ ಸೀರಿಯಲ್, ಸಿನಿಮಾದಲ್ಲಿ ಕಾಣಿಸಿಕೊಳ್ದೆ ರೀಲ್ಸ್ ಮೂಲಕ ಪ್ರಸಿದ್ಧಿ ಪಡೆದು ಬಿಗ್ ಬಾಸ್ ಕೊನೆಯವರೆಗೂ ಇದ್ದು, ರನ್ನರ್ ಅಪ್ ಆಗೋದು ಸಾಮಾನ್ಯದ ಮಾತಲ್ಲ. ಬಿಗ್ ಬಾಸ್ ನಂತ್ರ ತಮ್ಮ ಕೆಲ್ಸದಲ್ಲಿ ಬ್ಯುಸಿ ಆಗಿರುವ ರಕ್ಷಿತಾ ಮತ್ತೆ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.
24
ಬಿಗ್ ಬಾಸ್ ಬಗ್ಗೆ ರಕ್ಷಿತಾ ಹೇಳಿದ್ದೇನು?
ಈ ಬಾರಿ ಕಲರ್ಸ್ ಕನ್ನಡ, ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳಲು ಜನಸಾಮಾನ್ಯರಿಗೆ ಅವಕಾಶ ನೀಡ್ತಿದೆ. ಈ ಅವಕಾಶವನ್ನು ಮಿಸ್ ಮಾಡ್ಕೊಳ್ಬೇಡಿ ಅಂತ ರಕ್ಷಿತಾ, ಫ್ಯಾನ್ಸ್ ಗೆ ಹೇಳಿದ್ದಾರೆ. ನಾಳೆ ಲಾಸ್ಟ್ ಡೇ ಇರೋದ್ರಿಂದ ಇಂದೇ ವಿಡಿಯೋ ಪೋಸ್ಟ್ ಮಾಡಿ, ನಿಮಗೆ ಟ್ಯಾಲೆಂಟ್ ಇದ್ರೆ ಅವಕಾಶ ಸಿಕ್ಕೇ ಸಿಗುತ್ತೆ ಅಂತ ರಕ್ಷಿತಾ ಭರವಸೆ ನೀಡಿದ್ದಾರೆ.
34
ಬಿಗ್ ಬಾಸ್ ಗೆ ಮತ್ತೆ ಬರ್ತಾರಾ ರಕ್ಷಿತಾ?
ಬಿಗ್ ಬಾಸ್ 12ರ ಶೋನಲ್ಲಿ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟೆಂಟ್ ಗೆ ಅವಕಾಶ ಸಿಕ್ಕಿತ್ತು. ಅದೇ ರೀತಿ ರಕ್ಷಿತಾಗೂ ಬಿಗ್ ಬಾಸ್ ಸೀಸನ್ 13ರಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ರಕ್ಷಿತಾ ಮತ್ತೆ ಬಿಗ್ಬಾಸ್ ಗೆ ಬರ್ಲಿ ಎನ್ನುವ ಆಸೆ ಅನೇಕರಿಗಿದೆ. ಸದ್ಯ ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ಸ್ಪರ್ಧಿಯಾಗಿದ್ದು, ಅವರು ಬಿಗ್ ಬಾಸ್ ಗೆ ಬರ್ತಾರಾ ಕಾದು ನೋಡ್ಬೇಕಿದೆ.
ಇನ್ನು ಬಿಗ್ ಬಾಸ್ ಸೀಸನ್ 13ರ ಆಡಿಷನ್ ಗೆ ಎಲ್ಲ ತಯಾರಿ ನಡೆಯುತ್ತಿದೆ. ಜೂನ್ 21 ವಿಡಿಯೋ ಪೋಸ್ಟ್ ಮಾಡಲು ಕೊನೆ ದಿನ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲು ಆಸಕ್ತಿ ಇರುವವರು ಸಣ್ಣ ವಿಡಿಯೋ ಮಾಡಿ ಅದನ್ನು ಮೇಲ್ ಮಾಡ್ಬೇಕು. ಅಲ್ಲಿ ಸೆಲೆಕ್ಟ್ ಆದವರಿಗೆ ಆಡಿಷನ್ ನಲ್ಲಿ ಅವಕಾಶ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.