ಹಾಗೆ ನೋಡಬೇಡ್ರಪ್ಪ, ನಾಚಿಕೆ ಆಗ್ತದೆ ಎನ್ನುತ್ತಲೇ ರಾಘು ಜೊತೆ Bigg Boss ರಕ್ಷಿತಾ ಶೆಟ್ಟಿ ಸಕತ್​ ಸ್ಟೆಪ್​

Published : Apr 03, 2026, 01:52 PM IST

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ' ಖ್ಯಾತಿಯ ರಾಘವೇಂದ್ರ ಅವರು 'ಸೇವಂತಿಯೇ ಸೇವಂತಿಯೇ' ಹಾಡಿಗೆ ಜೊತೆಯಾಗಿ ಡಾನ್ಸ್ ಮಾಡಿದ್ದಾರೆ. ಸ್ತ್ರೀವೇಷದಿಂದಲೇ ಪರಿಚಿತರಾದ ರಾಘವೇಂದ್ರ ಅವರು ತಮ್ಮ ನಿಜ ವೇಷದಲ್ಲಿ ಕಾಣಿಸಿಕೊಂಡಿದ್ದು, ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ

PREV
16
ಮಂಗಳೂರು ಪುಟ್ಟಿ

Bigg Boss ರಕ್ಷಿತಾ ಶೆಟ್ಟಿ ಹವಾ ಇನ್ನೂ ನಿಂತಿಲ್ಲ. ಬಿಗ್​ಬಾಸ್​ನಿಂದ ಸಾಷಕ್ಟು ಖ್ಯಾತಿ ಗಳಿಸಿ, ಎಲ್ಲರ ಮನಸ್ಸನ್ನು ಗೆದ್ದಿರೋ ಮಂಗಳೂರು ಪುಟ್ಟಿ, ಇದೀಗ ಡಾನ್ಸ್​ ಒಂದಕ್ಕೆ ಭರ್ಜರಿ ಸ್ಟೆಪ್​ ಹಾಕುವ ಮೂಲಕ ಹೆಸರು ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

26
'ಮಜಾ ಭಾರತ' ಖ್ಯಾತಿಯ ರಾಘು

'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ, ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿದ್ದಾರೆ. ಅವರ ಜೊತೆ ಇದೀಗ ರಕ್ಷಿತಾ ಶೆಟ್ಟಿ ರೀಲ್ಸ್​ ಮಾಡಿದ್ದಾರೆ.

36
ನಾಚಿಗೆ ಆಗತ್ತೆ

ಮೇಕಪ್​ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲ ಸಿಬ್ಬಂದಿ ರಕ್ಷಿತಾ ಅವರನ್ನು ನೋಡಿದಾಗ, ಎಲ್ಲರೂ ಹೀಗೆ ನೋಡಬೇಡಿ. ನನಗೆ ನಾಚಿಕೆ ಆಗುತ್ತದೆ ಎಂದು ತಮಾಷೆ ಮಾಡಿ ಎಲ್ಲರನ್ನೂ ನಗಿಸಿದ್ದಾರೆ ರಕ್ಷಿತಾ.

46
ಫೆವರೆಟ್​ ಸಾಂಗ್​

ಆ ಬಳಿಕ ಮೇಕಪ್​ ಮಾಡಿಕೊಂಡು, ಇವತ್ತು ನಾನು ನನ್ನ ಫೆವರೆಟ್​ ಸಾಂಗ್​ಗೆ ಸ್ಟೆಪ್​ ಹಾಕುತ್ತಿದ್ದೇನೆ ಎಂದಿದ್ದಾರೆ. ರಾಘವೇಂದ್ರ ಅವರು ಕೂಡ, ರಕ್ಷಿತಾ ಅವರು ತಮ್ಮ ಫೆವರೆಟ್​ ಸಾಂಗ್​ ಬೇಕು ಎಂದು ಕೇಳಿದ್ದರು. ಅದಕ್ಕಾಗಿ ಅವರಿಗಾಗಿ ಈ ರೀಲ್ಸ್​ ಎಂದಿದ್ದಾರೆ.

56
ಸೇವಂತಿಯೇ ಸೇವಂತಿಯೇ

ಬಳಿಕ ರಕ್ಷಿತಾ ಮತ್ತು ರಾಘವೇಂದ್ರ ಅವರು, ಸೇವಂತಿಯೇ ಸೇವಂತಿಯೇ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

66
ರಿಯಲ್​ ವೇಷದಲ್ಲಿ ರಾಘು

ರಾಘವೇಂದ್ರ ಎನ್ನೋಕ್ಕಿಂತ ರಾಗಿಣಿ ಎಂದೇ ಫೇಮಸ್​ ಆದವರು 'ಮಜಾ ಭಾರತ' ಖ್ಯಾತಿಯ ನಟ. ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್​ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್​ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ. ಆದರೆ ಇದೀಗ ರಕ್ಷಿತಾ ಜೊತೆ ರಿಯಲ್​ ವೇಷದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories