ನನ್ನ ದುಡ್ಡೆಲ್ಲ ಹೊಡ್ಕೊಂಡು ಹೋದ; ಮೈಸೂರಿನ ಮಾಜಿ ಪತಿ ಕೃತ್ಯದ ಬಗ್ಗೆ ಇಂಚಿಂಚೂ ಬಿಚ್ಚಿಟ್ಟ Rakhi Sawant

Published : May 27, 2026, 04:00 PM IST

Bigg Boss Rakhi Sawant On Husband Adil Khan Durrani: ಬಿಗ್‌ ಬಾಸ್‌ ಶೋ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ನಗಿಸುವ ರಾಖಿ ಸಾವಂತ್‌ ಅವರು ಮೈಸೂರಿನ ಆದಿಲ್‌ ಖಾನ್‌ ಬಗ್ಗೆ ಭಾರತಿ ಟಿವಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾಜಿ ಪತಿ ಬಗ್ಗೆ ಆರೋಪ ಮಾಡಿದ್ದಾರೆ. 

PREV
15
ಹಣ ಲೂಠಿ ಹೊಡೆದರು!

Bigg Boss Rakhi Sawant On Husband Adil Khan: “ನನ್ನ ಮದುವೆ ಆಗೋಕೆ ಬಂದವನು ನನ್ನನ್ನು ಲೂಠಿ ಮಾಡಿದನು. ನಾನು ಎಷ್ಟು ಹಣವನ್ನು ಸೇವ್‌ ಮಾಡಿದ್ದೀನೋ ಅದನ್ನೆಲ್ಲ ಲೂಠಿ ಹೊಡೆದರು. ನಾನು ಸಿಕ್ಕಾಪಟ್ಟೆ ಮಾತನಾಡುತ್ತೀನಿ ಎಂದು ನಾನು ಅತ್ತರೂ ಕೂಡ, ಜನರು ಸೀರಿಯಸ್‌ ಆಗಿ ತಗೊಳೋದಿಲ್ಲ. ನಾನು ಅತ್ತರೂ ಕೂಡ ಜನರು ನಗುತ್ತಾರೆ” ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

25
ನನ್ನ ತಾಯಿ ಮದುವೆ ಆಗು ಎಂದರು!

“ಮುಸ್ಲಿಂ ಹುಡುಗನನ್ನು ನಾನು ಮದುವೆ ಆಗು ಅಂತ ತಾಯಿ ಹೇಳುತ್ತಿದ್ದಳು. ನಾನು ಮದುವೆ ಆದರೆ ನಿನ್ನ ಕಥೆ ಏನು ಎಂದು ನಾನು ತಾಯಿಗೆ ಹೇಳಿದೆ. ನಾನು ರೆಸ್ಟೋರೆಂಟ್‌ ಅಥವಾ ಇನ್ನು ಯಾವುದಾದರೂ ಜಾಗಕ್ಕೆ ಹೋಗಿ ಮದುವೆ ಆಗು ಅಂತ ಯಾರನ್ನಾದರೂ ಕೇಳಬೇಕಾ? ನನ್ನ ಫ್ರೆಂಡ್‌ ಒಬ್ಬನಿದ್ದನು, ಅವನೇ ನನ್ನ ಎಕ್ಸ್.‌ ನನ್ನನ್ನು ಭೇಟಿಯಾಗಿ ನನ್ನ ಹಣವನ್ನೆಲ್ಲ ಹಾಳು ಮಾಡಿದ” ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

35
ಅವನು ಡ್ರಾಮಾ ಗಂಡ ಆಗಿದ್ದ

“ನನ್ನ ಜೀವನ ಚೆನ್ನಾಗಿ ಆಯ್ತು, ಸೆಟಲ್‌ ಆಯ್ತು ಎಂದುಕೊಂಡೆ.‌ ನನ್ನ ಜೀವನ ಹಾಳಾಯ್ತು. ಒಂದು ಆಪ್‌ನಲ್ಲಿ ನನಗೆ ರಿತೇಶ್ ಪರಿಚಯ ಆದ, ಆಪ್‌ನಲ್ಲಿ ನಾನು ಕೋಟಿಗಟ್ಟಲೇ ಹಣ ದುಡಿದೆ. ಮುಂದಿನ ಜನ್ಮದಲ್ಲಿ ನನಗೆ ತಂದೆ-ತಾಯಿ ಸಿಗೋದೇ ಬೇಡ, ನನ್ನನ್ನು ಏಲಿಯನ್‌ ಆದರೆ ಸಾಕು, ರಿತೇಶ್‌ ನನಗೆ ತುಂಬ ಸಹಾಯ ಮಾಡಿದ್ದಾನೆ. ಬಿಗ್‌ ಬಾಸ್‌ಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳಿದನು. ನಾನು ನನ್ನ ಪತಿ ಎಂದು ಬಿಗ್‌ಬಾಸ್‌ ಶೋಗೆ ಹೋದೆ, ಸಲ್ಮಾನ್‌ ಖಾನ್‌ ಅವರು ನಮ್ಮಿಬ್ಬರಿಗೂ ಬೈದರು. ರಾಕೇಶ್‌ ಪತ್ನಿ ಮೀಡಿಯಾದಲ್ಲಿ ರಾಖಿ ನನ್ನ ಪತಿಯನ್ನು ಕರೆದುಕೊಂಡು ಹೋದಳು ಎಂದು ಹೇಳಿದಳು. ಈಗ ರಾಕೇಶ್‌ಗೂ ಡಿವೋರ್ಸ್‌ ಆಗಿದೆ, ನನ್ನಿಂದಲೇ ಡಿವೋರ್ಸ್‌ ಆಗಿದೆ" ಎಂದು ರಾಖಿ ಸಾವಂತ್‌ ಅವರು ಹೇಳಿದ್ದಾರೆ.

45
ಮೈಸೂರಿಗೆ ಬಂದು ಜಗಳ ಆಡಿದ್ರು

ಅಂದಹಾಗೆ ಮೈಸೂರು ಮೂಲದ ಆದಿಲ್‌ ಖಾನ್‌ ಜೊತೆ ರಾಖಿ ಸಾವಂತ್‌ ಅವರು ಸಾಕಷ್ಟು ಓಡಾಟ ಮಾಡಿದ್ದರು. ಆದಿಲ್‌ಗೂ ರಾಖಿಗೂ ಸಿಕ್ಕಾಪಟ್ಟೆ ವಯಸ್ಸಿನ ಅಂತರ ಇತ್ತು. ಆರಂಭದಲ್ಲಿ ಆದಿಲ್‌ ಅವರೇ ರಾಖಿಗೆ ಕಾರ್‌ ಗಿಫ್ಟ್‌ ಮಾಡಿದ್ದಾರೆ, ಗೋಲ್ಡ್‌ ಮೊಬೈಲ್‌ ಗಿಫ್ಟ್‌ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ಬಳಿಕ ಇವರಿಬ್ಬರ ಮಧ್ಯೆ ಮನಸ್ತಾಪ ಆಗಿದ್ದು, ಆದಿಲ್‌ ಅವರು ಡಿವೋರ್ಸ್‌ ನೀಡಿದ್ದಾರೆ. ರಾಖಿ ಸಾವಂತ್‌ ಅವರು ಮೈಸೂರಿನ ಆದಿಲ್‌ ಮನೆಗೆ ಬಂದು ಕೂಡ ಜಗಳ ಆಡಿದ್ದರು.

55
ಊಟ ತಿಂಡಿ ಬಗ್ಗೆ ಕೇಳೋರೂ ಇಲ್ಲ!

“ತಾಯಿ ಇದ್ದರೆ ನನ್ನ ಆರೋಗ್ಯದ ಬಗ್ಗೆ ಕೇಳುತ್ತಿದ್ದಳು, ಊಟ ಆಯ್ತಾ ಎಂದು ಕೇಳುತ್ತಿದ್ದಳು. ಈಗ ನಾನು ಮನೆಯಲ್ಲಿ ಒಬ್ಬಳೇ ಆಗಿದ್ದು, ಯಾರೂ ಏನೂ ಕೇಳೋವವರಿಲ್ಲ. ಪದೇ ಪದೇ ಜೈಲಿಗೆ ಹೋಗುತ್ತಿದ್ದೆ. ದುಬೈನಲ್ಲಿ ಬದುಕುತ್ತಿದ್ದೆ, ನಾನು ಭಾರತದಿಂದ ದೂರ ಆಗಿದ್ದೇನೆ ಎಂದು ಅನಿಸಿತು” ಎಂದು ರಾಖಿ ಸಾವಂತ್‌ ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories