Bigg Boss: ಮೊಟ್ಟೆಗಾಗಿ ನಿದ್ದೆಗೆಟ್ಟ ಕಾವ್ಯಾ- ಕಾವ್ಯಾರ ಮೊಟ್ಟೆ ಬಾತ್​ರೂಮ್​ ಕೊಂಡೊಯ್ದ ರಜತ್​ ಹೀಗೇ ಮಾಡೋದಾ?

Published : Dec 20, 2025, 07:40 PM IST

ಬಿಗ್‌ಬಾಸ್ ಮನೆಯಲ್ಲಿ ರಜತ್, ಕಾವ್ಯಾ ಶೈವ ಅವರ ಹೆಸರಿದ್ದ ಮೊಟ್ಟೆಯನ್ನು ಬಚ್ಚಿಟ್ಟಿದ್ದಾರೆ. ಸಿಕ್ಕಿಬೀಳುವ ಭಯದಿಂದ, ಮೊಟ್ಟೆಯ ಮೇಲಿದ್ದ ಅಕ್ಷರವನ್ನು ಅಳಿಸಲು ಎಂಜಲು ಬಳಸಿ, ಉಗುರಿನಿಂದ ಕೆರೆದಿದ್ದಾರೆ. ಈ ವಿಚಾರ ತಿಳಿದ ಕಾವ್ಯಾ, ಅಸಹ್ಯಪಟ್ಟು ಆ ಮೊಟ್ಟೆ ಬೇಡವೆಂದಿದ್ದಾರೆ.

PREV
16
ಒಂದು ಮೊಟ್ಟೆ ಕಥೆ

ಬಿಗ್​ಬಾಸ್​ (Bigg Boss)ನಲ್ಲಿ ಒಂದು ಮೊಟ್ಟೆ ಕಥೆ ಆಗಿದೆ. ಅದರ ಬಗ್ಗೆ ರಜತ್​ ಧನುಷ್​ಗೆ ವಿವರಿಸಿದ್ದು, ಇದನ್ನು ಕೇಳಿ ಕಾವ್ಯಾ ಶೈವ ಥೂ ಎಂದು ಹೇಳಿದ್ದಾರೆ.

26
ಮೊಟ್ಟೆ ಮೇಲೆ ಹೆಸರು

ಅಷ್ಟಕ್ಕೂ ರಜತ್​ ಹೇಳಿದ್ದೇನೆಂದರೆ, ಎರಡು ಮೊಟ್ಟೆ ತರಲು ಹೇಳಿದ್ರೆ, ಅವನು ಎರಡು ಮೊಟ್ಟೆ ತಂದು ಕೊಟ್ಟ. ಆದ್ರೆ ನೋಡಿದ್ರೆ ಒಂದರ ಮೇಲೆ ಕಾವ್ಯಾ ಕೆ ಎಂದು ಬರೆದಿದ್ದಳು. ಅಲ್ಲಿ ತನ್ನ ಹೆಸರನ್ನು ಬರೆದು ಅದು ತನ್ನ ಮೊಟ್ಟೆ ಎಂದು ಗುರುತಿಸಿಕೊಂಡಿದ್ದಳು ಎಂದಿದ್ದಾರೆ.

36
ಎರಡು ಮೊಟ್ಟೆ

ಆದರೆ ಮೊಟ್ಟೆ ಕಾಣದೇ ಕಾವ್ಯಾ ಎಲ್ಲಾ ಕಡೆ ಹುಡುಕಾಡಿ ನನ್ನ ಹತ್ತಿರ ಬಂದು ಎರಡು ಮೊಟ್ಟೆ ತಗೊಂಡಿದ್ರಾ ಎಂದು ಕೇಳಿದಳು. ಆದ್ರೆ ನಾನು ಇಲ್ಲ ನನ್ನ ಬಳಿ ಒಂದೇ ಮೊಟ್ಟೆ ಇರೋದು ಎಂದು ಇನ್ನೊಂದು ಮೊಟ್ಟೆಯನ್ನು ಅಡಗಿಸಿಇಟ್ಟೆ. ಕಾವ್ಯಾ ಮೊಟ್ಟೆ ಕಾಣದೇ ಎಲ್ಲಾ ಕಡೆ ಹುಡುಕಿದಳು ಎಂದಿದ್ದಾರೆ ರಜತ್​.

46
ನಿದ್ದೆ ಮಾಡಲು ಬಿಟ್ಟಿಲ್ಲ

ಮೊಟ್ಟೆಯನ್ನು ಹುಡುಕುವಲ್ಲಿ ನನಗೆ ರಾತ್ರಿಯೆಲ್ಲಾ ನಿದ್ದೆ ಮಾಡಲು ಬಿಟ್ಟಿಲ್ಲ ಎಂದಿದ್ದಾರೆ ಕಾವ್ಯಾ. ಕೊನೆಗೆ ರಜತ್​, ಕಾವ್ಯಾಗೆ ನನ್ನ ಮೇಲೆ ಡೌಟ್​ ಬಂದು, ಮೊಟ್ಟೆ ತೋರಿಸು ಎಂದಳು. ಅದಕ್ಕೆ ನಾನು ಮೊಟ್ಟೆ ತೋರಿಸಿದ್ದರೆ ಲಾಕ್​ ಆಗಿ ಬಿಡ್ತೇನೆ ಎಂದು ಕೆ ಅಕ್ಷರವನ್ನು ಅಳಿಸಲು ನೋಡಿದೆ. ಆದರೆ ಅಲ್ಲಿ ನೀರು ಇರದ ಕಾರಣ ಎಂಜಲು ಹಾಕಿ ತಿಕ್ಕಿದೆ, ಹೋಗಲಿಲ್ಲ ಎಂದು ವಿವರಿಸಿದ್ದಾರೆ ಧನುಷ್​.

56
ಉಗುರಿನಿಂದ ತೆಗೆದೆ

ಟಿಶ್ಯೂ ಪೇಪರ್​ನಿಂದ ಒರೆಸಿದರೂ ಹೋಗಲಿಲ್ಲ. ಬಾತ್​ರೂಮ್​ಗೆ ಹೋಗಿ ಹ್ಯಾಂಡ್​ವಾಷ್​ ಸೋಪ್​ ಹಾಕಿ ಉಜ್ಜಿದೆ ಆದರೂ ಅಕ್ಷರ ಹೋಗಲಿಲ್ಲ. ಬಳಿಕ ಬಾತ್​ರೂಮ್​ಗೆ ಹೋಗಿ ನೀಟಾಗಿ ಅಲ್ಲಿ ಕುಳಿತುಕೊಂಡು ಉಗುರಿನಿಂದ ಕೆರೆದು ಕೆರೆದು ಅಂತೂ ಅಕ್ಷರ ಹೋಗಿಸಿದೆ ಎಂದಿದ್ದಾರೆ.

66
ವ್ಯಾಕ್​ ಎಂದ ಕಾವ್ಯಾ

ಇದನ್ನು ಕೇಳುತ್ತಿದ್ದಂತೆಯೇ ಕಾವ್ಯಾ ಥೂ ವ್ಯಾಕ್​ ನನಗೆ ಆ ಮೊಟ್ಟೆ ಬೇಡಪ್ಪಾ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories