ಇಬ್ಬರು ಪತ್ನಿಯರೊಂದಿಗೆ ಬಿಗ್‌ಬಾಸ್‌ ಮನೆಗೆ ಬಂದ ಅರ್ಮಾನ್ ಮಲೀಕ್ ಯಾರು? ಏನು ಈತನ ಕಹಾನಿ?

First Published | Jun 22, 2024, 5:15 PM IST

ಹಿಂದಿಯ ಬಿಗ್‌ಬಾಸ್‌ ಓಟಿಟಿ ಆರಂಭವಾಗಿದ್ದು, ಇಬ್ಬರು ಪತ್ನಿಯರ ಜೊತೆಯಲ್ಲಿ ಯುಟ್ಯೂಬರ್ ಅರ್ಮಾನ್ ಮಲೀಕ್ ಸ್ಪರ್ಧಿಯಾಗಿ ಬಂದಿದ್ದಾರೆ.

ಹೈದರಬಾದ್ ಮೂಲದ ಅರ್ಮಾನ್ ಮಲೀಕ್ ಓರ್ವ ಯುಟ್ಯೂಬರ್ ಆಗಿದ್ದು, 14 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿದ್ದು ಫ್ಯಾಮಿಲಿ ಕಂಟೆಂಟ್ ವಿಡಿಯೋ ಮಾಡುತ್ತಿರುತ್ತಾರೆ.  ಅರ್ಮಾನ್ ಇಬ್ಬರೂ ಪತ್ನಿಯರ ಜೊತೆಯಲ್ಲಿದ್ದಾರೆ.

2022ರಲ್ಲಿ ಇಬ್ಬರು ಪತ್ನಿಯರು ಏಕಕಾಲದಲ್ಲಿ ಗರ್ಭಿಣಿಯಾಗಿರುವ ಫೋಟೋವನ್ನು ಅರ್ಮಾನ್ ಮಲೀಕ್ ಹಂಚಿಕೊಂಡಿದ್ದರು. ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿತ್ತು. ಕಳೆದ ಎರಡು ವರ್ಷದಲ್ಲಿ ಅರ್ಮಾನ್ ಮಲೀಕ್ ಸೋಶಿಯಲ್ ಮೀಡಿಯಾದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

Tap to resize

ಈ ಮೊದಲು ಖಾಸಗಿ ಬ್ಯಾಂಕ್‌ವೊಂದರಲ್ಲಿ ಅರ್ಮಾನ್ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಎಂಬವರನ್ನು ಪ್ರೀತಿಸಿ ಅರ್ಮಾನ್ ಮದುವೆಯಾಗುತ್ತಾರೆ. ಅರ್ಮಾನ್ ಮತ್ತು ಪಾಯಲ್ ದಂಪತಿಗೆ ಚಿರಾಯ್ ಎಂಬ ಮಗನಿದ್ದಾನೆ.

ಚೆನ್ನಾಗಿ ಸಂಸಾರ ನಡೆಸುತ್ತಿರುವಾಗಲೇ ಅರ್ಮಾನ್‌ಗೆ ಪತ್ನಿ ಪಾಯಲ್ ಗೆಳತಿ ಕೃತಿಕಾಳ ಪರಿಚಯವಾಗಿದೆ. ಇಬ್ಬರ ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. ಕೃತಿಕಾ ಮೇಲಿನ ಪ್ರೀತಿಯನ್ನು ಪತ್ನಿ ಪಾಯಲ್ ಬಳಿ ಅರ್ಮಾನ್ ಹೇಳಿಕೊಂಡಿದ್ದರು. 

ಗಂಡನ ಪ್ರೀತಿಗೆ ಒಪ್ಪಿಗೆ ನೀಡಿದ ಪಾಯಲ್, ಇಬ್ಬರ ಮದುವೆಯನ್ನು ಮಾಡಿಸಿದ್ದರು. ಮದುವೆ ಬಳಿಕ ಪಾಯಲ್ ಪೋಷಕರು ಮಗಳನ್ನು ಕರೆದುಕೊಂಡು ಹೋಗಿದ್ದರು. ಪಾಯಲ್ ದೂರ ಆಗಿದ್ದರಿಂದ ಅರ್ಮಾನ್ ಖಿನ್ನತೆಗೆ ಜಾರಿದ್ದರು. ಅತ್ತ ಪಾಯಲ್‌ಗೆ ಆಕೆಯ ಪೋಷಕರು ಕಿರುಕುಳ ನೀಡುತ್ತಿರುವ ವಿಷಯ ತಿಳಿದ ಅರ್ಮಾನ್ ಪತ್ನಿಯನ್ನು ಕರೆದುಕೊಂಡು ಬಂದಿದ್ದರು. ಅಂದಿನಿಂದ ಅರ್ಮಾನ್ ಜೊತೆಯಲ್ಲಿ ಪಾಯಲ್ ಮತ್ತು ಕೃತಿಕಾ ಜೀವನ ನಡೆಸುತ್ತಿದ್ದಾರೆ.

ಇಬ್ಬರು ಪತ್ನಿಯರು ಗರ್ಭಿಣಿಯಾಗಿರುವ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದ ಅರ್ಮಾನ್ ಮೈ ಫ್ಯಾಮಿಲಿ ಎಂದು ಬರೆದುಕೊಂಡಿದ್ದರು. ಈ ಫೋಟೋಗೆ ತರೇಹವಾರಿ ಕಮೆಂಟ್‌ಗಳು ಬಂದಿದ್ದವು. ಆದ್ರೆ ಇದ್ಯಾವುದಕ್ಕೂ ಅರ್ಮಾನ್ ತಲೆ ಕೆಡಿಸಿಕೊಂಡಿರಲಿಲ್ಲ.

ಸ್ಪರ್ಧೆಯಲ್ಲಿ ಗೆಲ್ಲಬೇಕೆಂದ್ರೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ಇದೊಂದು ಒಳ್ಳೆಯ ಅವಕಾಶವಾಗಿದ್ದು, ಕುಟುಂಬಸ್ಥರ ಜೊತೆಗೆ ಹೋಗುತ್ತಿದ್ದೇನೆ. ಟಾಪ್ 5ರ ಸ್ಥಾನಕ್ಕೆ ತಲುಪುವ ರೀತಿಯಲ್ಲಿ ಆಟ ಆಡುತ್ತೇವೆ ಎಂದು ಅರ್ಮಾನ್ ಮಲೀಕ್ ಹೇಳಿಕೊಂಡಿದ್ದಾರೆ. 

Latest Videos

click me!