ಇನಿಯನ ಜೊತೆ ಕಾರ್ ಖರೀದಿಸಿದ ಬಿಗ್‌ಬಾಸ್ ಖ್ಯಾತಿಯ ಕಿರುತೆರೆ ನಟಿ

First Published Jun 22, 2024, 4:27 PM IST

ತೆಲಗು ಬಿಗ್‌ಬಾಸ್ ಸ್ಪರ್ಧಿಯಾಗಿದ್ದ, ಕನ್ನಡತಿ ಕಿರುತೆರೆ ನಟಿ ಶೋಭಾ ಶೆಟ್ಟಿ ಹೊಸ ಕಾರ್ ಖರೀದಿ ಮಾಡಿದ್ದಾರೆ. 

ಕನ್ನಡ ಕಿರುತೆರೆಯ ನಟಿಯಾಗಿರುವ ಶೋಭಾ ಶೆಟ್ಟಿ ಬಿಗ್‌ಬಾಸ್-7ರಲ್ಲಿ ಭಾಗವಹಿಸಿದ ಬಳಿಕ ತೆಲಗು ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ತಮ್ಮದೇ ಶೋ ಆರಂಭಿಸಿದ್ದಾರೆ. 

ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ತೆಲಗು ರಿಯಾಲಿಟಿ ಶೋ ಆಗಿದ್ದರೂ ಸಿಕ್ಕ ಸಮಯದಲ್ಲಿ ಕನ್ನಡ ಮಾತನಾಡೋದನ್ನು ಶೋಭಾ ಶೆಟ್ಟಿ ಮರೆಯುತ್ತಿರಲಿಲ್ಲ

ಇದೀಗ ಶೋಭಾ ಶೆಟ್ಟಿ ಹೊಸ ಕಾರ್ ಖರೀದಿ ಮಾಡಿಕೊಂಡಿದ್ದು, ಫೋಟೋಗಳು ವೈರಲ್ ಆಗುತ್ತಿವೆ. ಕಾರ್ ಖರೀದಿಸುವ ವೇಳೆ ಶೋಭಾ ಶೆಟ್ಟಿ ಜೊತೆಯಲ್ಲಿ ಯಶವಂತ್ ಇದ್ದರು. 

ಶೋಭಾ ಶೆಟ್ಟಿ ಮತ್ತು ಯಶವಂತ್ ಜೊತೆಯಾಗಿ Beast XUV700 ಕಾರ್ ಖರೀದಿ ಮಾಡಿದ್ದಾರೆ. ಕಾರ್‌ನಲ್ಲಿ ಕುಳಿತು ಇಬ್ಬರು ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಶೋಭಾ ಮತ್ತು ಯಶವಂತ್ ಜೊತೆಯಲ್ಲಿ ಆಪ್ತ ಸ್ನೇಹಿತರ ಬಳಗ ಇತ್ತು.

ಬಿಗ್‌ಬಾಸ್‌ನಲ್ಲಿದ್ದಾಗಲೇ ಯಶವಂತ್ ಜೊತೆಗಿನ ತಮ್ಮ ರಿಲೇಶನ್ ಬಗ್ಗೆ ಶೋಭಾ ಹೇಳಿಕೊಂಡಿದ್ದರು. ಶೋನಿಂದ ಹೊರ ಬರುತ್ತಿದ್ದಂತೆ ಗೆಳೆಯನ ಜೊತೆ ಶೋಭಾ ರಿಂಗ್ ಬದಲಿಸಿಕೊಂಡಿದ್ದರು.

ನಿಶ್ಚಿತಾರ್ಥದ ಬೆನ್ನೆಲ್ಲೇ ಶೋಭಾ ಶೆಟ್ಟಿ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದರು. ಕನಸಿನ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೋಭಾ ಶೆಟ್ಟಿ ಹಂಚಿಕೊಂಡು ಕನಸು ನನಸು ಆಗಿದೆ ಎಂದು ಬರೆದುಕೊಂಡಿದ್ದಾರು. ಹೊಸ ಜೀವನ, ಹೊಸ ಮನೆ ಮತ್ತು ಹೊಸ ಆರಂಭ ಎಂದು ಶೋಭಾ ಶೆಟ್ಟಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು.

ಸುಮನ್ ಟಿವಿಯಲ್ಲಿ ಕಾಫಿ ವಿಥ್ ಶೋಭಾ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ವಿಶೇಷ ಸಂದರ್ಶನ ನಡೆಸಲಾಗುತ್ತದೆ

Latest Videos

click me!