ದರ್ಶನ್ ಸರ್‌ನ ಅಣ್ಣನ ರೂಪದಲ್ಲಿ ಕಂಡೆ ಆದ್ರೆ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಬಿಗ್ ಬಾಸ್ ಇಶಾನಿ ಪೋಸ್ಟ್‌ ವೈರಲ್

First Published | Jun 22, 2024, 10:23 AM IST

ನ್ಯಾಯದ ಪರ ಧ್ವನಿ ಎತ್ತಿದ ಇಶಾನಿ. ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ ನೋಡಿ ಎಲ್ಲರೂ ಶಾಕ್....

ಬಿಗ್ ಬಾಸ್ ಸೀಸನ್ 10ರ ರ್ಯಾಪರ್ ಇಶಾನಿ ಮತ್ತು ನಟ ದರ್ಶನ್ ಒಳ್ಳೆ ಬಾಂಧವ್ಯ ಹೊಂದಿದ್ದಾರೆ, ಅಣ್ಣ ತಂಗಿ ರೀತಿಯಲ್ಲಿದ್ದಾರೆ. 

ಇತ್ತೀಚಿಗೆ ದರ್ಶನ್‌ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಜೊತೆ ಅಣ್ಣ ತಂಗಿ ಬಾಂಧವ್ಯ ಆಚರಿಸಿದ್ದರು. ಈಗ ಅದೇ ಫೋಟೋ ಅಪ್ಲೋಡ್ ಮಾಡಿ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಬರೆದುಕೊಂಡಿದ್ದಾರೆ.

Tap to resize

'ನಿಜಕ್ಕೂ ಇದು ಅಘಾತಕಾರಿ ಸುದ್ದಿ. ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ'

ತನ್ನನ್ನು ನಂಬಿದ ಒಂದು ಹೆಣ್ಣುಜೀವದ ಶ್ರೇಯೋಭಿಲಾಷಿಯಾಗಿ ಅವರು ಮಾಡಿದ ಕೆಲಸ ಸೂಕ್ತವೆ ಎಂದು ಅನಿಸಿದರೂ ಸಹ, ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗಾರಿಗೂ ಸಹ ಅಧಿಕಾರವಿಲ್ಲ.

ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅದುವರೆಗೂ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ.ಕಾಲಾಯ ತಸ್ಮೈ ನಮಃ. ಎಂದು ಇಶಾನಿ ಬರೆದುಕೊಂಡಿದ್ದಾರೆ.

s

ಈಗಷ್ಟೆ ಇಂಡಸ್ಟ್ರಿಗೆ ಕಾಲಿಡುತ್ತಿರುವ ಪ್ರತಿಭೆ ನೀವು ಯಾಕೆ ಸುಮ್ಮನೆ ಈ ಘಟನೆ ಬಗ್ಗೆ ಮಾತನಾಡಿ ಟ್ರೋಲ್‌ಗೆ ಗುರಿಯಾಗುತ್ತೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos

click me!