ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಮೋಕ್ಷಿತಾ ಪೈ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ್ದಾರೆ.
ಆರಂಭದಲ್ಲಿ ಸಖತ್ ಸೈಲೆಂಟ್ ಆಗಿದ್ದ ಮೋಕ್ಷಿತಾ ಬಾಟಮ್ 2 ಸ್ಥಾನಕ್ಕೆ ಬರುತ್ತಿದ್ದಂತೆ ಖಡಕ್ ಅವತಾರ ತೋರಿಸಲು ಶುರು ಮಾಡಿದ್ದರು. ಆಟ ಶುರು ಮಾಡಿದ ಮೇಲೆ ಮೋಕ್ಷಿತಾ ವೀಕ್ಷಕರಿಗೆ ಇಷ್ಟವಾಗಲು ಶುರುವಾದರು.
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಸದಾ ಸಿಂಪಲ್ ಡ್ರೆಸ್‌ಗಳನ್ನು ಧರಿಸುತ್ತಾರೆ ಇದುವರೆಗೂ ಎಕ್ಸ್ ಫೋಸ್ ಅಥವಾ ಮೈ ಕೈ ಕಾಣುವ ಬಟ್ಟೆಗಳನ್ನು ಧರಿಸುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಹೀಗಾಗಿ ಮೋಕ್ಷಿತಾ ಫ್ಯಾನ್ ಪೇಜ್‌ನಲ್ಲಿ ಸುಮಾರು 100 ದಿನಗಳಿಂದ ಮೋಕ್ಷಿತಾ ಧರಿಸಿರುವ ಸಿಂಪಲ್ ಡ್ರೆಸ್‌ಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಸರಳ ಸುಂದರಿ ಅನ್ನೋ ಕಿರೀಟ ಕೂಡ ನೀಡಿದ್ದಾರೆ.
ಉಗ್ರಂ ಮಂಜು ಮತ್ತು ಗೌತಮಿ ಜಾದವ್ ತಂಡದಲ್ಲಿ ಮೋಕ್ಷಿತಾ ಪೈ ಇದ್ದಾಗ ಜನರ ಕಣ್ಣಿಗೆ ಅಷ್ಟಾಗಿ ಬೀಳುತ್ತಿರಲಿಲ್ಲ. ಟೀಂ ಟೀಂ ಎಂದು ಇತರ ಸ್ಪರ್ಧಿಗಳು ಇವರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಹೊರ ಬಂದ ಮೇಲೆ ಗಮನ ಸೆಳೆಯುತ್ತಿದ್ದಾರೆ.
ಯಾವಾಗ ಈ ಟೀಂನಿಂದ ಮೋಕ್ಷಿತಾ ಹೊರ ಬಂದು ಒಂಟಿಯಾಗಿ ಆಟವಾಡಲು ಶುರು ಮಾಡಿದ್ದರು ಅಲ್ಲಿಂದ ಸೇಫ್ ಝೋನ್‌ನಲ್ಲಿ ಇರುವ ಆರಂಭಿಸಿದ್ದರು. ಶಿಶಿರ್ ಮತ್ತು ಐಶ್ವರ್ಯ ಜೊತೆಗಿದ್ದ ಮೋಕ್ಷಿತಾ ಈಗ ಚೈತ್ರಾ ಕುಂದಾಪುರ ಮತ್ತು ಭವ್ಯಾ ಜೊತೆ ಕೈ ಜೋಡಿಸಿದ್ದಾರೆ.
ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಮೋಕ್ಷಿತಾ ಮತ್ತು ಭವ್ಯಾ ಗೌಡ ಸಖತ್ ಆಟವಾಡಿದ್ದಾರೆ. ಇವರಿಬ್ಬರು ಕೈ ಜೋಡಿಸಿ ಉಗ್ರಂ ಮಂಜು ಮತ್ತು ಗೌತಮಿಯನ್ನು ಸೋಲಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಜೈ ಕಾರ ಹೆಚ್ಚಾಗಿದೆ.