ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ Bigg Boss ಮಲ್ಲಮ್ಮನಿಗೆ ಜಡ್ಜಸ್​ ಎದುರೇ ಮತ್ತೊಂದು ಮದುವೆ ಪ್ರಸಂಗ

Published : Mar 08, 2026, 01:21 PM IST

ಬಿಗ್​ಬಾಸ್​ ಖ್ಯಾತಿಯ ಮಲ್ಲಮ್ಮ ಇದೀಗ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಸ್ಕಿಟ್​ವೊಂದರಲ್ಲಿ ಮದುಮಗಳಂತೆ ಶೃಂಗಾರಗೊಂಡಿದ್ದ ಅವರು, ತಮ್ಮ ಕಾಮಿಡಿ ಡೈಲಾಗ್​ಗಳಿಂದ ತೀರ್ಪುಗಾರರಾದ ಶೃತಿ ಮತ್ತು ಸಾಧು ಕೋಕಿಲ ಅವರನ್ನು ಬಿದ್ದು ಬಿದ್ದು ನಗುವಂತೆ ಮಾಡಿದ್ದಾರೆ.

PREV
16
ಬಿಗ್​ಬಾಸ್​ ಖ್ಯಾತಿಯ ಮಲ್ಲಮ್ಮ

ಬಿಗ್​ಬಾಸ್​ 12 (Bigg Boss 12)ರಲ್ಲಿ ಕೆಲವೇ ದಿನ ಇದ್ದರೂ ಎಲ್ಲರ ಮನಸ್ಸನ್ನು ಗೆದ್ದವರು, ಮುಗ್ಧತನದಿಂದಲೇ ಎಲ್ಲರಿಗೂ ಹತ್ತಿರವಾದವರು ಮಲ್ಲಮ್ಮ. ಬಿಗ್​ಬಾಸ್​ ಎಂದರೆ ಕಾಂಟ್ರವರ್ಸಿ ಮಾಡಿದವರಿಗಷ್ಟೇ ಅವಕಾಶ ಇರುವುದು, ಅವರಷ್ಟೇ ದೀರ್ಘ ಅವಧಿಯವರೆಗೆ ಮನೆಯಲ್ಲಿ ಇರುವುದು ಎಂಬೆಲ್ಲಾ ಮಾತುಗಳ ನಡುವೆ, ಯಾವುದೇ ಗಲಾಟೆ ಮಾಡದೇ ಬಲು ಬೇಗನೇ ಬಿಗ್​ಬಾಸ್​ನಿಂದ ಹೊರಬಂದ ಮಲ್ಲಮ್ಮ ಈಗ ಸ್ಟಾರ್​ ಸೆಲೆಬ್ರಿಟಿಯಾಗಿದ್ದಾರೆ.

26
ಮಹಿಳೆಯರಿಗೆ ಸ್ಫೂರ್ತಿ

ಅವರು ಏನು ಮಾಡಿದರೂ ಚೆಂದ ಎನ್ನುವಂತಿದೆ. ಸದಾ ಎಲ್ಲರನ್ನೂ ನಗಿಸುತ್ತಲೇ ಇರುವ ಮಲ್ಲಮ್ಮ ಇದಾಗಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪತಿಯನ್ನು ಕಳೆದುಕೊಂಡರೂ, ಬಡತನದ ನಡುವೆಯೂ ಈ ವಯಸ್ಸಿನಲ್ಲಿ ಸೋಷಿಯಲ್​ ಮೀಡಿಯಾದ ಹೀರೋ ಆಗಿ, ಬಿಗ್​ಬಾಸ್​ವರೆಗೆ ವೇದಿಕೆ ಕಲ್ಪಿಸಿಕೊಂಡ ಇವರು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ.

36
ಗಿಚ್ಚಿ ಗಿಲಿಗಿಲಿ ಷೋ

ಇದೀಗ ಕಲರ್ಸ್​ ಕನ್ನಡದ ಗಿಚ್ಚಿ ಗಿಲಿಗಿಲಿ (Gicchi Gili Gili show) ಷೋನಲ್ಲಿ ಮಲ್ಲಮ್ಮ ಮತ್ತೆ ಬಂದಿದ್ದಾರೆ. ಇವರಿಗೆ ಮದುಮಗಳಂತೆ ಶೃಂಗಾರ ಮಾಡಲಾಗಿದೆ. ಚಿಕ್ಕ ಹುಡುಗಿಯನ್ನು ಇವರ ಅಮ್ಮನ ರೀತಿ ಬಿಂಬಿಸಲಾಗಿದೆ.

46
ಮಲ್ಲಮ್ಮನಿಗೆ ಮದುವೆ

ಇಲ್ಲಿ ಮಲ್ಲಮ್ಮನಿಗೆ ಮದುವೆ ನಡೆಯುತ್ತಿದೆ. ಅವರು ಹೇಳಿದ ಡೈಲಾಗ್​ ಕೇಳಿ ಜಡ್ಜಸ್​ ಎಲ್ಲಾ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಶೃತಿ, ಸಾಧು ಕೋಕಿಲ ಅವರು ಸುಸ್ತಾಗಿ ಹೋಗಿದ್ದಾರೆ.

56
ಮದ್ವೆ ಬೇಡ

ಅಮ್ಮಾ ಇನ್ನೂ ಆರು ವರ್ಷ ಮದುವೆ ಬೇಡ ಬೇಡ ಅಂದಿದ್ದೆ. ಇಷ್ಟು ಚಿಕ್ಕ ವಯಸ್ಸಿಗೆ ಮದ್ವೆ ಮಾಡಿಸ್ತಿಯಲ್ಲ ಎಂದು ಅಮ್ಮನ ಪಾತ್ರಧಾರಿಯಾಗಿರೋ ಬಾಲಕಿಯನ್ನು ಮಲ್ಲಮ್ಮ ಪ್ರಶ್ನಿಸಿದ್ದಾರೆ. ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಬೇಡಿ ಎಂದಿದ್ದಾರೆ.

66
ನಕ್ಕು ನಗಿಸಿದ ಮಲ್ಲಮ್ಮ

ಬಳಿಕ ತಮ್ಮದೇ ಆದ ಸ್ಟೈಲ್​ನಲ್ಲಿ ಎಲ್ಲರನ್ನೂ ನಕ್ಕು ನಗಿಸಿದ್ದಾರೆ ಮಲ್ಲಮ್ಮ. ಮಲ್ಲಮ್ಮನ ಈ ಟ್ಯಾಲೆಂಟ್​ಗೂ ವೀಕ್ಷಕರು ಫಿದಾ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories