ಕಿರುತೆರೆ ನಟಿ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡಗೆ ಜು. 26 ಜನ್ಮದಿನ ಸಂಭ್ರಮ. ಒಂದು ಕಾಲದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದ ಚಂದನ್ ಕುಮಾರ್ ಮಧ್ಯರಾತ್ರಿಯೇ ಕವಿತಾ ಗೌಡ ಮನೆಗೆ ತೆರಳಿ ವಿಶ್ ಮಾಡಿದ್ದಾರೆ. ಲಕ್ಷ್ಮಿ ಬಾರಮ್ಮದ ಚಂದು ಪಾತ್ರಕ್ಕೆ ಚಂದನ್ ಬಣ್ಣ ಹಚ್ಚಿದ್ದರೆ, ಚಿನ್ನು ಪಾತ್ರದಲ್ಲಿ ಕವಿತಾ ಗೌಡ ಮನೆ ಮಗಳಾಗಿದ್ದರು. ಕೊರೋನಾ ಕಾರಣಕ್ಕೆ ಕವಿತಾ ಗೌಡ ಮನೆಯಲ್ಲೇ ಜನ್ಮದಿನ ಆಚರಿಸಿಕೊಂಡರು. ಸರ್ ಪ್ರೈಸ್ ವಿಸಿಟ್ ನೀಡಿದ್ದ ಕ್ಷಣಗಳನ್ನು ಚಂದನ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಕವಿತಾ ಸಹ ವಿಡಿಯೋ ಶೇರ್ ಮಾಡಿಕೊಂಡಿದ್ದು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ಶುಭಾಶಯ ತಿಳಿಸಿದ್ದು ಮತ್ತೆ ನೀವಿಬ್ಬರೂ ಜತೆಯಾಗಿ ನಟಿಸಿ ಎಂದು ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡದ ಬೇರೆ ಬೇರೆ ಸೀಸನ್ ನಲ್ಲಿ ಇಬ್ಬರು ಭಾಗವಹಿಸಿದ್ದರು. Actor Chandan kumar wishes Happy Birthday Kavitha Gowda ಕವಿತಾ ಗೌಡ ಜನ್ಮದಿನಕ್ಕೆ ಚಂದನ್ ಕುಮಾರ್ ಅದ್ಭುತ್ ಗಿಫ್ಟ್