ಅಪ್ಪನಿಗೆ ಅವಮಾನ ಮಾಡಿದ ಅಪೇಕ್ಷಾಗೆ ಭೂಮಿಕಾಳಿಂದ ಕಪಾಳ ಮೋಕ್ಷ... ಇನ್ನು ನಾಲ್ಕು ಬಾರಿಸಿ ಎಂದ ವೀಕ್ಷಕರು

First Published | Nov 11, 2024, 5:02 PM IST

ಅಪ್ಪನನ್ನ ಜಿಪುಣ ಎಂದು ಅವಮಾನ ಮಾಡಿದ ಅಪೇಕ್ಷಾಗೆ ಭೂಮಿಕಾ ಕಪಾಳ ಮೋಕ್ಷ ಮಾಡಿದ್ದು, ಇನ್ನೂ ಎರಡು ಬಾರಿಸು ಅಂತ ವೀಕ್ಷಕರು ಬೆಂಬಲ ಸೂಚಿಸಿದ್ದಾರೆ. 
 

ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಭೂಮಿಕಾ ತಂಗಿ ಅಪೇಕ್ಷಾ ಮದುವೆಯಾದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅಕ್ಕ ಅಂದ್ರೆ ಪ್ರಾಣಾನೇ ಬಿಡ್ತಿದ್ದ ಅಪೇಕ್ಷಾಗೆ ಈಗ ಅಕ್ಕ ಅಂದ್ರೇನೆ ಆಗಲ್ಲ. ಪ್ರತಿ ಮಾತಿಗೂ ಅಕ್ಕನನ್ನು ಹಂಗಿಸುವ ಅಪೇಕ್ಷಾ ಗುಣವನ್ನು ಪ್ರೇಕ್ಷಕರು ಇಷ್ಟ ಪಡ್ತಾನೆ ಇಲ್ಲ. 
 

ಇಲ್ಲಿವರೆಗೂ ತನ್ನನ್ನು ಪ್ರತಿ ಮಾತಿಗೂ ಕೀಳಾಗಿ ಕಾಣುತ್ತಿದ್ದ, ಅವಮಾನಿಸುತ್ತಿದ್ದ ಅಪೇಕ್ಷಾಳನ್ನು ಭೂಮಿಕಾ ಯಾವುದೇ ಕಾರಣಕ್ಕೂ ನೋಯಿಸೋದಕ್ಕೂ ಹೋಗಿಲ್ಲ, ಆಕೆಗೆ ಪ್ರತಿ ಉತ್ತರ ಕೊಡೋದಕ್ಕೂ ಹೋಗಿಲ್ಲ. ಪರಿಸ್ಥಿತಿ ಇದನ್ನೆಲ್ಲಾ ಮಾಡಿಸಿದೆ ಅಂತ ಸುಮ್ಮನಿದ್ಲು. 
 

Tap to resize

ಆದರೆ ಈ ಸಲ ಮಾತ್ರ ಅಪೇಕ್ಷಾ ತಮ್ಮನ್ನು ಕಷ್ಟಪಟ್ಟು ಸಾಕಿ ಸಲಹಿದ ಅಪ್ಪನ ಕುರಿತು ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿ, ಭೂಮಿಕಾಗೆ ಸಹಿಸೋಕೆ ಆಗದೇ ಅಪೇಕ್ಷಾ ಕೆನ್ನೆಗೆ ಬಾರಿಸಿದ್ದಾಳೆ. ಅಪೇಕ್ಷಾ ಅಹಂಕಾರದ ಮಾತುಗಳನ್ನು ಕೇಳಿ, ಭೂಮಿಕಾ ಕೂಡ ನೊಂದಿದ್ದಾರೆ. 
 

ಅಪೇಕ್ಷಾ ಮಾಡಿದ ಶಾಪಿಂಗ್ ನೋಡಿ, ಶಾಕುಂತಲಾ ಅಣ್ಣ ನೀನು ತವರು ಮನೇಲಿದ್ರೂ ಇದೇ ರೀತಿ ಶಾಪಿಂಗ್ ಮಾಡ್ತಿದ್ಯಾ ಅಂತ ಕೇಳಿದ್ದಾರೆ. ಅದಕ್ಕೆ ಅಪೇಕ್ಷಾ ಅಪ್ಪಂದು ತೀರಾ ಮಿಡಲ್ ಕ್ಲಾಸ್ ಮೆಂಟಾಲಿಟಿ ಒಂದೊಂದು ರೂಪಾಯಿ ಖರ್ಚು ಮಾಡೋಕು ತುಂಬಾನೆ ಯೋಚನೆ ಮಾಡೋರು, ಬೋರಿಂಗ್ ಕ್ಯಾರೆಕ್ಟರ್ ಅಂತಾಳೆ ಅಪ್ಪಿ. 
 

ಅಪ್ಪನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನ ಕೇಳಿ ಅಪೇಕ್ಷಾ ಬಳಿ ಬರುವ ಭೂಮಿಕಾ, ಏನಂತ ಮಾತಾಡ್ತೀಯಾ ಅಪ್ಪಿ ಅಂದಾಗ, ಆಕೆ ಅಪ್ಪ ಯಾವತ್ತಾದ್ರೂ ನಮ್ಮ ಕೈಗೆ ಹಣ ಕೊಟ್ಟು ಖುಷಿಯಾಗಿರು ಅಂತ ಹೇಳಿದ್ದಾರ? ಅಂತಹ ಜಿಪುಣ ನಮ್ ಅಪ್ಪ ಅಂತಾಳೆ, ಇದನ್ನ ಕೇಳಿ ಭೂಮಿಕಾ ತಾಳ್ಮೆಯ ಕಟ್ಟೆ ಹೊಡೆದು ಅಪೇಕ್ಷಾಗೆ ಕೆನ್ನೆಗೆ ಭಾರಿಸ್ತಾಳೆ. 
 

ಅಪೇಕ್ಷಾ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿದ ಭೂಮಿಕಾ ನಡೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅಪೇಕ್ಷ ಪರಿಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಲಿ ಕೊಡೆ ಹಿಡಿತಾನಂತೆ ಹಂಗೆ ಆಗಿದೆ ಅಂತಿದ್ದಾರೆ. ಅಷ್ಟೇ ಅಲ್ಲ ಇನ್ನೂ ನಾಲ್ಕು ಬಾರಿಸಿ ಎಲ್ಲವೂ ಸರಿ ಆಗುತ್ತೆ ಅಂದಿದ್ದಾರೆ. 
 

ಒಬ್ಬರಂತೂ ಕಾಮೆಂಟ್ ಮಾಡಿ ಅಲ್ಪನಿಗೆ ಅರ್ಧ ರಾತ್ರೀಲಿ ಐಶ್ವರ್ಯ ಬಂದ್ರೆ ಹೀಗೆ ಆಗೋದು. ಆದ್ರೂ ಅಪೇಕ್ಷಾ ಮಿತಿ ಮೀರಿ ಮಾತಾಡಿ ಬಿಟ್ಲು. ಅಪ್ಪನ ಮನೆಯಲ್ಲಿ ಕಷ್ಟ ಬಂದ್ರು ಅತ್ತೆ ಮನೇಲಿ ತೋರಿಸಿ ಕೊಳ್ಳದೆ ಚನಾಗಿರೋ ಹೆಣ್ಮಕ್ಕಳ ಮದ್ಯ, ಅಪೇಕ್ಷಾ ತರ ರಿಯಲ್ ಲೈಫ್ ಅಲ್ಲಿ ಯಾರು ಆಗ್ದೇ ಇರ್ಲಿ ಎಂದು ಬೇಡಿಕೊಂಡಿದ್ದಾರೆ. 
 

Latest Videos

click me!