ಇದು ರಕ್ಷಿತಾ ಶೆಟ್ಟಿ ಪವಾಡ: Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​

Published : Feb 05, 2026, 01:49 PM IST

ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಕರಿಬಸಪ್ಪ ಅವರು ಬಿಗ್ ಬಾಸ್ ನಂತರವೂ ಟ್ರೆಂಡಿಂಗ್‌ನಲ್ಲಿದ್ದಾರೆ. ಇದಕ್ಕೆ ಕಾರಣ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ . ಈ ತಮಾಷೆಯ ಘಟನೆಗಾಗಿ ಮತ್ತು ತನ್ನನ್ನು ಟ್ರೆಂಡಿಂಗ್‌ನಲ್ಲಿಟ್ಟಿದ್ದಕ್ಕಾಗಿ ಕರಿಬಸಪ್ಪ ರಕ್ಷಿತಾಗೆ ಧನ್ಯವಾದ ತಿಳಿಸಿದ್ದಾರೆ.

PREV
16
ಬಾಡಿ ಬಿಲ್ಡರ್​ ಕರಿಬಸಪ್ಪ

ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟು (ಬಾಡಿ ಬಿಲ್ಡರ್) ಕರಿಬಸಪ್ಪ ಅವರು, ಬಿಗ್​ಬಾಸ್​ ಮನೆಗೆ ಪ್ರವೇಶಿಸಿ ಕೆಲವೇ ದಿನಗಳಲ್ಲಿ ಮನೆಯಿಂದ ಹೊರಕ್ಕೆ ಬಂದಿದ್ದರು. ದೇಹದಾಢ್ಯತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಕರಿಬಸಪ್ಪ ಕೆಲವೇ ದಿನ ಇದ್ದರೂ ಇದೀಗ ಬಿಗ್​ಬಾಸ್​ ಕರಿಬಸಪ್ಪ ಎಂದೇ ಪ್ರಸಿದ್ಧಿ ಹೊಂದಿದ್ದಾರೆ.

26
ಕೆಲವೇ ದಿನವಿದ್ದ ಕರಿಬಸಪ್ಪ

ಇದಾಗಲೇ ಜನಪ್ರಿಯತೆ ಪಡೆದುಕೊಂಡಿದ್ದರೂ, ಬಿಗ್​ಬಾಸ್​ನಲ್ಲಿ ಕೆಲವೇ ದಿನ ಇದ್ದ ಹಿನ್ನೆಲೆಯಲ್ಲಿ ಜನರು ಅವರನ್ನು ಅಷ್ಟಾಗಿ ಬಿಗ್​ಬಾಸ್​ ಕರಿಬಸಪ್ಪ ಎಂದು ಗುರುತಿಸುತ್ತಿಲ್ಲ. ಇದಕ್ಕೆ ಕಾರಣ, ಇದಕ್ಕಿಂತಲೂ ದೊಡ್ಡ ಮಟ್ಟದ ಹೆಸರು ಅವರು ಬಾಡಿ ಬಿಲ್ಡಿಂಗ್​ ಕ್ಷೇತ್ರದಲ್ಲಿ ಮಾಡಿದ್ದಾರೆ.

36
ರಕ್ಷಿತಾ ಶೆಟ್ಟಿ ಹವಾ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿರುವ ಕರಿಬಸಪ್ಪ ಅವರನ್ನು ಈಗಲೂ ಜನ ಬಿಗ್​ಬಾಸ್​​ ಹೆಸರಿನಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಿರುವ ಹಿಂದೆ ಇರೋದು ಮಂಗಳೂರು ಪುಟ್ಟಿ, ಬಿಗ್​ಬಾಸ್​ 12ರ ಮೊದಲ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ (Bigg Boss Rakshita Shetty).

46
ರಕ್ಷಿತಾಗೆ ಥ್ಯಾಂಕ್ಸ್​

ಅದಕ್ಕಾಗಿಯೇ ಕರಿಬಸಪ್ಪ ಅವರು ವಿಶೇಷ ವಿಡಿಯೋ ಶೇರ್​ ಮಾಡಿ ರಕ್ಷಿತಾ ಶೆಟ್ಟಿ ಅವರಿಗೆ ಕರಿಬಸಪ್ಪ ಅವರು ಧನ್ಯವಾದ ಸಲ್ಲಿಸಿದ್ದಾರೆ. ನನ್ನ ತಂಗಿಯಿಂದ ನಾನು ಈಗಲೂ ಟ್ರೆಂಡಿಂಗ್​ನಲ್ಲಿ ಇದ್ದೇನೆ ಎಂದಿದ್ದಾರೆ.

56
ರಕ್ಷಿತಾ ಶೆಟ್ಟಿ ಹೇಳಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಮಾಧ್ಯಮವೊಂದರ ಸಂದರ್ಶನದ ವೇಳೆ, ಕರಿಬಸಪ್ಪ ಅವರ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ ಎಂದು ಪ್ರಶ್ನಿಸಿದಾಗ, 'ಕರಿಬಸೊಪ್ಪು ಅವರು...' ಎಂದಿದ್ದರು ರಕ್ಷಿತಾ ಶೆಟ್ಟಿ. ಇದರ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೆಂಡ್​ ಆಗೋಯ್ತು.

66
ಕರಿಬಸೊಪ್ಪು ಆದ ಕರಿಬಸಪ್ಪ

ಇದಾದ ಮೇಲೆ ಕರಿಬಸಪ್ಪ ಅವರನ್ನು ಕೂಡ ಎಲ್ಲರೂ ಕರಿಬಸೊಪ್ಪು ಎಂದೇ ಕರೆಯತೊಡಗಿದ್ದರಂತೆ. ಅದಕ್ಕಾಗಿಯೇ ಈ ಮೂಲಕ ಇನ್ನೂ ಎಲ್ಲರೂ ನನ್ನ ಹೆಸರು ಕರೆಯುವಂತೆ ಮಾಡಿರುವೆ ತಂಗಿ ಎಂದು ಧನ್ಯವಾದ ಸಲ್ಲಿಸಿದ್ದ ಕರಿಬಸಪ್ಪನವರು. ಈ ವಿಡಿಯೋದಲ್ಲಿ ಸರಿಯಾಗಿ ಒಮ್ಮೆ ಹೆಸರು ಹೇಳು ಎಂದಾಗಲೂ ರಕ್ಷಿತಾ ಅವರು, ಕರಿಬಸಪ್ಪೋ ಎಂದು ಬೇರೆ ರೀತಿ ಹೇಳುವ ಮೂಲಕ ಮತ್ತೊಂದು ಟ್ರೆಂಡ್​ ಸೃಷ್ಟಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories