ಸ್ವೀಟ್ ಕ್ರೇವ್ ತೀರಿಸಿದ್ದ ಸೂರಜ್, ಆತ್ಮೀಯ ಗೆಳೆಯನಿಗೆ ಬೆಸ್ಟ್ ಕುಕ್ ಪಟ್ಟ ನೀಡಿದ ರಾಶಿಕಾ

Published : Jan 16, 2026, 04:49 PM IST

Bigg Boss Kannada 12 : ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರೂ ರಾಶಿಕಾ ಬಾಯಲ್ಲಿ ಸೂರಜ್ ಹೆಸರೇ ಕೇಳಿ ಬರ್ತಿದೆ. ಸೂರಜ್ ಗೆ ರಾಶಿಕಾ ಬೆಸ್ಟ್ ಕುಕ್ ಪಟ್ಟ ನೀಡಿದ್ದಾರೆ. ಯಾಕೆ ಗೊತ್ತಾ?

PREV
17
ಲವ್ ಬರ್ಡ್ಸ್

ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಅಂತಾನೇ ಪ್ರಸಿದ್ಧಿ ಪಡೆದವರು ರಾಶಿಕಾ ಹಾಗೂ ಸೂರಜ್. ಇಬ್ಬರೂ ಫಿನಾಲೆ ತಲುಪೋಕೆ ಸಾಧ್ಯ ಆಗ್ಲಿಲ್ಲ. ಸೂರಜ್ ಮೊದಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರೆ ರಾಶಿಕಾ ಕೊನೆಯ ವಾರದಲ್ಲಿ ಹೊರಗೆ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆಗೆ ಬಂದ ಸೂರಜ್, ಕೆಲವೇ ದಿನಗಳಲ್ಲಿ ರಾಶಿಕಾಗೆ ಹತ್ತಿರವಾಗಿದ್ದರು. ಇಬ್ಬರ ಬಾಂಡಿಂಗ್ ಚೆನ್ನಾಗಿತ್ತು. ಸೂರಜ್ ಹಾಗೂ ರಾಶಿಕಾ ನೋಡಿ ಜನ ಲವ್ ಬರ್ಡ್ಸ್ ಅಂತಾನೆ ಹೆಸರಿಟ್ಟಿದ್ದರು.

27
ಸೂರಜ್ ಹೊಗಳಿದ ರಾಶಿಕಾ

ರಾಶಿಕಾ, ಸೂರಜ್ ಪರ ಯಾವಾಗ್ಲೂ ನಿಂತಿದ್ದಾರೆ. ಟಾಸ್ಕ್ ಬಂದ್ರೆ ಎದುರಾಳಿ ಮಣಿಸಲು ಸದಾ ಸಿದ್ಧರಾಗುವ ರಾಶಿಕಾ ಉಳಿದ ಟೈಂನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಸೂರಜ್ ಜೊತೆ. ಟಾಸ್ಕ್ ವಿಷ್ಯ ಇರಲಿ ಫ್ರೆಂಡ್ಶಿಪ್ ವಿಷ್ಯ ಇರಲಿ ಸೂರಜ್ ಹೆಸರು ಬಂದೇ ಬರ್ತಿತ್ತು. ಈಗ ಮತ್ತೆ ಸೂರಜ್ ಬಗ್ಗೆ ರಾಶಿಕಾ ಮಾತನಾಡಿದ್ದಾರೆ.

37
ಸೂರಜ್ ಒಳ್ಳೆ ಕುಕ್

ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ರಾಶಿಕಾಗೆ ಬಿಗ್ ಬಾಸ್ ಮನೆಯಲ್ಲಿ ಯಾರು ಬೆಸ್ಟ್ ಕುಕ್ ಅಂತ ಕೇಳಲಾಗಿದೆ. ಅದಕ್ಕೆ ರಾಶಿಕಾ ರಘು ಹಾಗೂ ಸೂರಜ್ ಹೆಸರನ್ನು ಹೇಳಿದ್ದಾರೆ. ಈ ಹಿಂದೆ ಜಾಹ್ನವಿ ಕೂಡ ಬೆಸ್ಟ್ ಕುಕ್ ಅಂತ ಬಂದಾಗ ಸೂರಜ್ ಹೆಸರನ್ನು ಹೇಳಿದ್ದರು. ಈಗ ರಾಶಿಕಾ ಸೂರಜ್ ಅಂದಿದ್ದಲ್ಲದೆ ಅದಕ್ಕೆ ಕಾರಣವನ್ನೂ ಹೇಳಿದ್ದಾರೆ.

47
ರಾಶಿಕಾರಿಗೆ ಸ್ಪೇಷಲ್ ಡಿಶ್

ರಾಶಿಕಾ ಅವರಿಗೆ ಸ್ವೀಟ್ ಅಂದ್ರೆ ತುಂಬಾ ಇಷ್ಟವಂತೆ. ಸ್ವೀಟ್ ತಿನ್ನೋ ಆಸೆ ಆದಾಗ ಸೂರಜ್ ಸಹಾಯ ಮಾಡಿದ್ದಾರೆ. ಚಪಾತಿಗೆ ಸಕ್ಕರೆ ಹಾಗೋದ್ರಿಂದ ಹಿಡಿದು ಹೊಸ ಹೊಸ ಪ್ರಯೋಗ ಮಾಡಿದ್ದಾರೆ. ಅದೆಲ್ಲವೂ ಚೆನ್ನಾಗಿತ್ತು ಅಂತ ರಾಶಿಕಾ ಹೇಳಿದ್ದಾರೆ.

57
ಸ್ವಲ್ಪದರಲ್ಲಿ ಮಿಸ್

ಟಾಸ್ಕ್ ಕಿಂಗ್ ಅಂದ್ರೆ ರಾಶಿಕಾ. ಇದು ಎಲ್ಲರಿಗೂ ತಿಳಿದಿರೋ ವಿಷ್ಯ. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗ್ತಿದೆ ಅಂದಾಗ ರಾಶಿಕಾ ಜಗಳಕ್ಕೂ ಸಿದ್ಧ. ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಬಿಟ್ಟು ಎಲ್ಲರ ಜೊತೆ ರಾಶಿಕಾ ಮಾತನಾಡಿದ್ದಾರೆ. ಸೂರಜ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಖತ್ ಆಕ್ಟಿವ್ ಆಗಿದ್ದ ರಾಶಿಕಾ, ಫಿನಾಲೆಗೆ ಬರ್ತಾರೆ ಎನ್ನುವ ನಿರೀಕ್ಷೆ ಅನೇಕರಿಗಿತ್ತು. ಆದ್ರೆ ರಾಶಿಕಾ ಸ್ವಲ್ಪದರಲ್ಲಿಯೇ ಫಿನಾಲೆ ಮಿಸ್ ಮಾಡಿಕೊಂಡ್ರು. ಬಿಗ್ ಬಾಸ್ ಕನ್ನಡ 12ರ ಶೋನ ಕೊನೆ ವೀಕೆಂಡ್ ನಲ್ಲಿ ರಾಶಿಕಾ ಮನೆಯಿಂದ ಹೊರಗೆ ಬರಬೇಕಾಯ್ತು.

67
ರಾಶಿಕಾ ಬ್ಯುಸಿ

ಸದ್ಯ ಬಿಗ್ ಬಾಸ್ ಹ್ಯಾಂಗೋವರ್ ನಲ್ಲಿ ರಾಶಿಕಾ ಇದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಗ್ರ್ಯಾಂಡ್ ವೆಲ್ ಕಂ ಸಿಕ್ಕಿದೆ. ಅನೇಕ ಮಾಧ್ಯಮಗಳ ಜೊತೆ ಬಿಗ್ ಬಾಸ್ ಅನುಭವ ಹಂಚಿಕೊಳ್ತಿದ್ದಾರೆ. ಸೀರಿಯಲ್ ಗಿಂತ ಸಿನಿಮಾ ಮೇಲೆ ರಾಶಿಕಾ ಫೋಕಸ್ ಇದೆ.

77
ಸೀರಿಯಲ್ ಹೀರೋ ಆಗಿ ಬರ್ತಿದ್ದಾರೆ ಸೂರಜ್

ಬಿಗ್ ಬಾಸ್ ಮನೆಗೆ ಹೋದ್ಮೇಲೆ ಸೂರಜ್ ಲಕ್ ಬದಲಾಗಿದೆ. ಮನೆಯಿಂದ ಹೊರಗೆ ಬರ್ತಿದ್ದಂತೆ ಸೀರಿಯಲ್ ಅವರ ಕೈ ಸೇರಿದೆ. ಸೂರಜ್, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿರುವ ಹೊಸ ಸೀರಿಯಲ್ ಪವಿತ್ರ ಬಂಧನದಲ್ಲಿ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಅವಕಾಶ ಸಿಕ್ಕಿದ್ರೆ ಸೂರಜ್ ಜೊತೆ ನಾಯಕಿಯಾಗಿ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ರಾಶಿಕಾ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸೂರಜ್ ಭೇಟಿ ಮಾಡ್ತೇನೆ ಎಂದಿದ್ದ ರಾಶಿಕಾ, ಸೂರಜ್ ಭೇಟಿ ಮಾಡಿ, ಸೀರಿಯಲ್ ಗೆ ಶುಭಕೋರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories