Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರು ಜೊತೆಗಿರೋದು ಹೊರಗಡೆ ಥರ ಕಾಣ್ತಿದೆ, ಜನರು ತಪ್ಪು ತಿಳಿದುಕೊಳ್ತಾರೆ ಎಂದು ಸೂರಜ್, ರಾಶಿಕಾ ಶೆಟ್ಟಿ ಬೇರೆ ಬೇರೆಯಾಗಿದ್ದಾರೆ. ಆದರೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹಾಗಾದರೆ ಟ್ವಿಸ್ಟ್ ಏನು?
ರಿಷಾ ಗೌಡ ಬಳಿ ಸೂರಜ್ ಸಿಂಗ್ ಬಗ್ಗೆ ಮಾತನಾಡಿದ್ದ ರಾಶಿಕಾ ಶೆಟ್ಟಿ ಅವರು, “ಅವನು ಆಡಿದ್ದು ನೋಡಿ ಆಶ್ಚರ್ಯ ಆಯ್ತು, ಅವನಲ್ಲದ ಅವನು ಕಾಣಿಸಿದ, ಯಾಕೆ ಹೀಗೆ ಆಡಿದ್ನೋ ಏನೋ” ಎಂದು ಹೇಳಿದ್ದಾರೆ.
25
ಜಾಹ್ನವಿ ಹತ್ರ ರಾಶಿಕಾ ಹೇಳಿದ್ದೇನು?
“ಹೊರಗಡೆ ಜನರು ತಪ್ಪು ತಿಳಿದುಕೊಳ್ತಾರೆ ಅಂತ ಅವನು ನನ್ನ ಜೊತೆ ಮಾತನಾಡುತ್ತಿಲ್ಲ. ಲೈಫ್‌ನಲ್ಲಿ ಎಂಥೆಂಥವರ ಮುಖವನ್ನೇ ನಾನು ನೋಡಿಲ್ಲ. ಈಗ ಇವನ ಜೊತೆ ಮಾತನಾಡದೆ ಇರೋಕೆ ಆಗಲ್ವಾ? ಈಗ ಇಡೀ ಮನೆ ಬಂದು ಏನಾಯ್ತು ಏನಾಯ್ತು ಅಂತ ಪ್ರಶ್ನೆ ಕೇಳಿದಾಗ ನನಗೆ ಉತ್ತರ ಕೊಡೋದು ಕಷ್ಟ. ನಾನು ಈ ಮನೆಯಲ್ಲಿ ಇರೋವಷ್ಟು ದಿನ ಮಾತಾಡಲ್ಲ. ಸರಿಹೋಗ್ತೀನಿ ಅಂತ ಸೂರಜ್ ಬಂದರೂ ಕೂಡ ನಾನು ದೇವರಾಣೆ ಮಾತನಾಡಲ್ಲ. ನನಗೆ ಆಗಲ್ಲ ಅಂದರೆ ಅವರ ಜೊತೆ ನಾನು ಯಾವಾಗಲೂ ಮಾತನಾಡಲ್ಲ” ಎಂದು ರಾಶಿಕಾ, ಜಾಹ್ನವಿ ಮಾತನಾಡಿಕೊಂಡಿದ್ದಾರೆ.
35
ಜಾಹ್ನವಿ, ಸೂರಜ್ ಬಳಿ ಹೇಳಿದ್ದೇನು?
ಅದಾದ ಬಳಿಕ ಜಾಹ್ನವಿ ಅವರು ಸೂರಜ್ ಸಿಂಗ್ ಜೊತೆ ಮಾತನಾಡಿದ್ದಾರೆ. “ನಿಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಯಾರು ಏನೇ ಹೇಳಿದರೂ ನಾವಿಬ್ಬರು ಮಾತಾಡ್ತೀವಿ ಅಂತ ಮಾತಾಡ್ತಿದ್ರಿ. ಹೊರಗಡೆ ಬೇರೆ ಥರ ಕಾಣಸ್ತಿದೆ ಅಂತ ಹೋದ ವಾರ ಗೊತ್ತಾದ್ಮೇಲೆ ಮಾತಾಡೋಕೆ ನಿಲ್ಲಿಸಿದ್ರಿ” ಎಂದು ಜಾಹ್ನವಿ ಹೇಳಿದ್ದರು.
“ಹೊರಗಡೆ ಯಾವ ಥರ ಕಾಣಸ್ತಿದೆ ಎನ್ನೋದನ್ನು ನಾನು, ನೀನು ಮಾತನಾಡಬೇಕು ಎಂದು ಹೇಳಿದೆ. ಆಮೇಲೆ ನಾವು ಮಾತಾಡೋದನ್ನು ನಿಲ್ಲಿಸಬೇಕು ಎಂದರೆ ನಾವು ರೆಡಿ ಎಂದು ಹೇಳಿದಳು. ನನ್ನ ಮುಖ ನೋಡಿದರೂ ನೋಡಿದಂತೆ ಹೋಗ್ತಾಳೆ. ನನಗೂ ಸ್ವಾಭಿಮಾನ ಇದೆ, ಆ ಥರ ಮಾಡಿದಾಗ ಮಾತಾಡಿಸೋಕೆ ಆಗೋದಿಲ್ಲ. ಫ್ರೆಂಡ್ ಆಗಿ ಅವಳಿಗೆ ಏನೇ ಸಮಸ್ಯೆ ಬಂದರೂ ನಾನು ನಿಂತುಕೊಳ್ತೀನಿ” ಎಂದು ಸೂರಜ್ ಸಿಂಗ್ ಹೇಳಿದ್ದಾರೆ.
55
ಮತ್ತೆ ಮಾತಾಡಿದ ರಾಶಿಕಾ, ಸೂರಜ್
ಆಮೇಲೆ ಬಾತ್‌ರೂಮ್ ಏರಿಯಾದಲ್ಲಿ ಮತ್ತೆ ಸೂರಜ್ ಅವರೇ ರಾಶಿಕಾ ಬಳಿ ಮಾತನಾಡಿದ್ದಾರೆ. ಅಲ್ಲಿ ರಾಶಿಕಾ ವರಸೆ ಬದಲಾಗಿದೆ. “ನಾನು ಮಾತಾಡೋದನ್ನು ನಿಲ್ಲಿಸಿಲ್ಲ, ನೀವು ತಪ್ಪು ತಿಳಿದುಕೊಂಡಿದ್ದೀರಿ” ಎಂದು ಸೂರಜ್ ಮಾತು ಶುರು ಮಾಡಿದರು, ಆಮೇಲೆ ರಾಶಿಕಾ ಅವರು, “ಹೊರಗಡೆ ಜನರಿಗೆ ಬೇರೆ ಥರ ಅನಿಸ್ತಿದೆ ಎಂದು ಹೇಳಿದೆ, ನಾನು ಸುಮ್ಮನಾದೆ” ಎಂದಿದ್ದಾರೆ. “ನಮ್ಮಿಬ್ಬರ ಮಧ್ಯೆ ಬರೀ ಸ್ನೇಹ ಇದೆ” ಎಂದು ಸೂರಜ್ ಹೇಳಿದ್ದಾರೆ. ಹೀಗೆ ಮಾತುಕತೆ ಮುಂದುವರೆದಿದ್ದು, ಇವರಿಬ್ಬರು ನಗೋಕೆ ಆರಂಭಿಸಿದ್ದಾರೆ.