Bigg Boss Kannada Season 12 Raghu: ಬಿಗ್ ಬಾಸ್ ಮನೆಯಲ್ಲಿ ರಾಘವೇಂದ್ರ ಹೊಂಡದಕೇರಿ ಅಲಿಯಾಸ್ ರಘು ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ಇವರ ಪತ್ನಿ ಗ್ರೀಷ್ಮಾ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.
ಬಿಗ್ ಬಾಸ್ ಮನೆಯಲ್ಲಿ ರಾಘವೇಂದ್ರ ಹೊಂಡದಕೇರಿ ಅಲಿಯಾಸ್ ರಘು ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ಇವರ ಪತ್ನಿ ಗ್ರೀಷ್ಮಾ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.
28
ಸಿನಿಮಾದಲ್ಲಿ ನಟನೆ
ರಾಘವೇಂದ್ರ ಹೊಂಡದಕೇರಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕೂಡ ನಟಿಸಿದ್ದರು. ಕೆಲವೇ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿರುವ ಅವರಿಗೆ ಹೊಸ ಹೊಸ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆಯಂತೆ.
38
ಮಾಡೆಲ್
ಅಂದಹಾಗೆ ರಾಘವೇಂದ್ರ ಹೊಂಡದಕೇರಿ ಪತ್ನಿ ಕೂಡ ಮಾಡೆಲ್ ಎನ್ನೋದು ಅನೇಕರಿಗೆ ಗೊತ್ತೇ ಇಲ್ಲ. ಯಾವ ಹೀರೋಯಿನ್‌ಗೆ ಕಮ್ಮಿ ಇಲ್ಲ ಎನ್ನುವಂತೆ ಫಿಟ್‌ನೆಸ್ ಮೆಂಟೇನ್ ಮಾಡಿದ್ದಾರೆ.
ರಾಘವೇಂದ್ರ ಹೊಂಡದಕೇರಿ ಪತ್ನಿ ಗ್ರೀಷ್ಮಾ ಗೌಡ ಅವರು ಮಾಡೆಲ್ ಆಗಿ ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಎನ್ನುವಂತೆ ಅವರು ಫಿಟ್‌ನೆಸ್ ಹೊಂದಿದ್ದಾರೆ.
58
ಟ್ರೇನಿಂಗ್ ಕೊಡ್ತಾರೆ
ರಾಘವೇಂದ್ರ ಹೊಂಡದಕೇರಿ ಅವರದ್ದೇ ಆದ ಜಿಮ್ ಇದೆ. ಅಲ್ಲಿ ರಾಘವೇಂದ್ರ ಪತ್ನಿ ಗ್ರೀಷ್ಮಾ ಅವರು ಫಿಟ್‌ನೆಸ್ ಟ್ರೇನಿಂಗ್ ಕೊಡುತ್ತಾರೆ. ಚಂದನ್ ಶೆಟ್ಟಿ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಕೂಡ ಇಲ್ಲಿ ಟ್ರೇನಿಂಗ್ ಪಡೆದು, ತೂಕ ಇಳಿಸಿಕೊಂಡಿದ್ದಾರೆ, ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ.
68
ಗೇಮ್‌ನಲ್ಲಿ ಮುಂದೆ
ಗ್ರೀಷ್ಮಾ ಅವರು ಈಗ ಚಿತ್ರರಂಗದಲ್ಲಿ ನಡೆಯುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅಥವಾ ಇನ್ಯಾವುದೇ ಆಟವಿದ್ದಾಗಲೂ ಕೂಡ, ಅಲ್ಲಿ ಭಾಗವಹಿಸುತ್ತಾರೆ.
78
ಜಿಮ್ ನೋಡಿಕೊಳ್ತಾರೆ
ರಘು ಈಗ ಬಿಗ್ ಬಾಸ್ ಮನೆಯಲ್ಲಿ ಇರೋದರಿಂದ ಗ್ರೀಷ್ಮಾ ಅವರು ಜಿಮ್ ನೋಡಿಕೊಳ್ಳುತ್ತಿದ್ದಾರೆ. “ನನ್ನ ಹೆಂಡ್ತಿ ಎಲ್ಲಿ ಜಿಮ್ ಮಾರುತ್ತಾಳೋ ಏನೋ” ಎಂದು ರಘು ಅವರು ಒಮ್ಮೆ ಕಾಮಿಡಿ ಮಾಡಿದ್ದರು.
88
ದರ್ಶನ್ ಅಂದ್ರೆ ಇಷ್ಟ
ಅಂದಹಾಗೆ ನಟ ದರ್ಶನ್ ಎಂದರೆ ಗ್ರೀಷ್ಮಾಗೆ ತುಂಬ ಇಷ್ಟ. ದರ್ಶನ್ ಜೊತೆ ತೆಗೆಸಿಕೊಂಡ ಅನೇಕ ಫೋಟೋಗಳು ಗ್ರೀಷ್ಮಾ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿವೆ.