Bigg Boss Kannada 12: ಕರ್ಮ ರಿಟರ್ನ್ ಎಂದ ಗಿಲ್ಲಿಗೆ ಇದು ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ

Published : Nov 19, 2025, 09:07 AM IST

ಈ ವಾರ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ರಘು, ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಕಳೆದ ವಾರ ರಘು ಅವರನ್ನು ಕಾರಣವಿಲ್ಲದೆ ನಾಮಿನೇಟ್ ಮಾಡಿದ್ದಕ್ಕೆ ಇದು 'ಕರ್ಮ ರಿಟರ್ನ್' ಎಂದು ವಿಶ್ಲೇಷಿಸಲಾಗಿದ್ದು, ರಕ್ಷಿತಾ ಕೂಡ ತಮ್ಮ ತಪ್ಪಿನಿಂದ ಇದು ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

PREV
15
ರಕ್ಷಿತಾ ಶೆಟ್ಟಿ ನಾಮಿನೇಟ್

ಈ ವಾರ ಮನೆಯಿಂದ ಹೊರಗೆ ಹೋಗಲು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ರಘು ಆಯ್ಕೆಯಂತೆ ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದು, ಇದನ್ನು ನೋಡಿದ ಗಿಲ್ಲಿ ನಟ, ಕರ್ಮ ರಿಟರ್ನ್ ಎಂದು ವಿಶ್ಲೇಷಣೆ ಮಾಡಿದರು. ಗಿಲ್ಲಿ ನಟ ವಿಶ್ಲೇಷಣೆಗೆ ಇದು ನನಗೆ ಆಗಬೇಕು ಎಂದು ರಕ್ಷಿತಾ ಶೆಟ್ಟಿ ಪ್ರತಿಕ್ರಿಯಿಸಿದ್ದರು.

25
ರಘು

ಕಳೆದ ವಾರ ರಕ್ಷಿತಾ ಶೆಟ್ಟಿ ತೆಗೆದುಕೊಂಡ ನಿರ್ಧಾರದಿಂದಲೇ ರಘು ನಾಮಿನೇಟ್ ಆಗಿದ್ದರು. ತಾನೇಕೆ ರಘು ಅವರನ್ನು ನಾಮಿನೇಟ್ ಮಾಡಿದೆ ಎಂಬುದಕ್ಕೆ ಕಾರಣ ನೀಡಲು ರಕ್ಷಿತಾ ಶೆಟ್ಟಿ ಸಂಪೂರ್ಣವಾಗಿ ವಿಫಲವಾಗಿದ್ದರು. ನಂತರ ತನ್ನಿಂದ ತಪ್ಪಾಗಿದೆ ಎಂದು ರಕ್ಷಿತಾ ಶೆಟ್ಟಿ ಒಪ್ಪಿಕೊಂಡಿದ್ದರು. ವೀಕೆಂಡ್ ಸಂಚಿಕೆಯಲ್ಲಿಯೂ ಸುದೀಪ್ ಮುಂದೆ ರಕ್ಷಿತಾ ತಪ್ಪಾಗಿದೆ ಎಂದು ಹೇಳಿದ್ದರು.

35
ನಾಮಿನೇಷನ್ ಪ್ರಕ್ರಿಯೆ

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯರ ಆಯ್ಕೆಯನುಸಾರ ಧ್ರುವಂತ್, ಮಾಳು, ಸ್ಪಂದನಾ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ ಮತ್ತು ಅಭಿಷೇಕ್ ನಾಮಿನೇಟ್ ಆಗಿದ್ದರು. ಮೂಲ ನಿಯಮ ಉಲ್ಲಂಘನೆ ಹಿನ್ನೆಲೆ ಅಶ್ವಿನಿ ಗೌಡ ಮತ್ತು ಜಾನ್ವಿ ನಾಮಿನೇಟ್ ಆಗಿದ್ದರು. ನಂತರ ಕ್ಯಾಪ್ಟನ್ ರಘು ಆಯ್ಕೆಯಂತೆ ರಕ್ಷಿತಾ ಶೆಟ್ಟಿ ನಾಮಿನೇಟ್ ಆದರು.

45
ಎಚ್ಚರಿಕೆ ಇದಾಗಿದೆ

ರಕ್ಷಿತಾ ಶೆಟ್ಟಿಯವರನ್ನು ನಾಮಿನೇಟ್ ಮಾಡಿದ ರಘು, ಈ ಹಿಂದೆ ಕಾರಣವಿಲ್ಲದೇ ತಮ್ಮನ್ನು ನಾಮಿನೇಷನ್ ಮಾಡಿದ್ದರ ಕುರಿತ ಕಾರಣಗಳನ್ನು ನೀಡಿದರು. ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕರ್ಮ ರಿಟರ್ನ್ ಎಂದು ಗಿಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ, ಇದು ನನಗೆ ಆಗಬೇಕಿತ್ತು ಮತ್ತು ಮುಂದೆ ನಾಮಿನೇಷನ್ ಮಾಡುವಾಗ ಸರಿಯಾಗಿ ಮಾಡಬೇಕೆಂಬ ಎಚ್ಚರಿಕೆ ಇದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BBK 12: ರಕ್ಷಿತಾ ವಿಚಾರದಲ್ಲಿ ಅಣಕ ಮಾಡಿದ್ದ ಧ್ರುವಂತ್‌ಗೆ ತಿರುಗಿಸಿಕೊಟ್ಟ ಕರ್ಮ; ವೀಕ್ಷಕರು ಖುಷ್

55
ರಕ್ಷಿತಾ ಆಟ

ತನ್ನ ತಪ್ಪಿಗೆ ನಾಮಿನೇಟ್ ಆಗಿದ್ದೇನೆ ಎಂದು ರಕ್ಷಿತಾ ಶೆಟ್ಟಿ ಹೇಳಿರುವ ಮಾತುಗಳು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದರಿಂದ ಮತ್ತೊಮ್ಮೆ ರಕ್ಷಿತಾ ಶೆಟ್ಟಿ ಅವರನ್ನು ಉಳಿಸೋಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಡ್ರಮ್ ಟಾಸ್ಕ್‌ನಲ್ಲಿಯೂ ರಕ್ಷಿತಾ ಆಟ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: BBK 12: ಇದು ಕಿಚ್ಚು ಅಲ್ಲಾ, ಜ್ವಾಲೆ; ಕಾಮನ್‌ಸೆನ್ಸ್‌ ಅನ್ನೋದನ್ನು ಮರೆತ್ರಾ ಬಿಗ್‌ಬಾಸ್ ಸ್ಪರ್ಧಿಗಳು

Read more Photos on
click me!

Recommended Stories