Bigg Boss Kannada:‌ ಯಾರಿಗೂ ಕಾಣದ 'ಕಿಲಾಡಿ' ಗಿಲ್ಲಿ ನಟನ ಡಬಲ್‌ ಗೇಮ್ ಬಿಚ್ಚಿಟ್ಟ ಮಾಳು ನಿಪನಾಳ! ಏನದು?

Published : Dec 30, 2025, 11:08 AM ISTUpdated : Dec 30, 2025, 11:11 AM IST

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ ಶೋನಲ್ಲಿ ಗಿಲ್ಲಿ ನಟ, ಒನ್‌ ಮ್ಯಾನ್‌ ಶೋ ಆಗಿ ಗುರುತಿಸಿಕೊಂಡಿದ್ದಾರೆ. ಇವರೇ ವಿನ್ನರ್‌ ಆಗ್ತಾರೆ ಎಂದು ಬಹುತೇಕರು ಹೇಳುತ್ತಿದ್ದಾರೆ. ದೊಡ್ಮನೆಯಿಂದ ಹೊರಬಂದಿರುವ ಮಾಳು ನಿಪನಾಳ ಅವರು ನಾನೇ ವಿನ್ನರ್‌ ಆಗುತ್ತಿದ್ದೆ ಎಂದಿದ್ದಾರೆ.

PREV
15
ನಾನೇ ನಂಬರ್‌ 1 ಬರುತ್ತಿದ್ದೆ

ಬಿಗ್‌ ಬಾಸ್‌ ಮನೆಯಿಂದ ಹೊರಬಂದಿರುವ ಮಾಳುಗೆ ಬಹಳ ಬೇಸರ ಆಗಿದೆಯಂತೆ. Asianet Suvarna News ಜೊತೆಗಿನ ಸಂದರ್ಶನದಲ್ಲಿ “Expect the Unexpected ಎನ್ನುವಂತೆ ನಾನು ಹೊರಗಡೆ ಬಂದಿದ್ದೇನೆ, ನಾನು ಅಲ್ಲಿ ಇದ್ದಿದ್ದರೆ ಟಾಪ್‌ 5 ಒಳಗಡೆ ನಾನೇ ನಂಬರ್‌ 1 ಬರುತ್ತಿದ್ದೆ” ಎಂದು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

25
ಸ್ಪಂದನಾ ಹೊರಗಡೆ ಇರಬೇಕಿತ್ತು

ಗಿಲ್ಲಿ ನಟ ಮನೆ ಕೆಲಸ ಮಾಡಿಲ್ಲ, ಟಾಸ್ಕ್‌ ಆಡಿಲ್ಲ, ಬೇರೆಯವರನ್ನು ಕಾಮಿಡಿ ಮಾಡ್ತಾನೆ ಅಷ್ಟೇ. ಸ್ಪಂದನಾಗಿಂತ ನಾನೇ ಮೇಲಿನ ಸ್ಥಾನದಲ್ಲಿದ್ದೆ. ಸ್ಪಂದನಾ ದೊಡ್ಮನೆಯಲ್ಲಿ ಏನೂ ಮಾಡಿಲ್ಲ. ಸ್ಪಂದನಾ ಹೊರಗಡೆ ಇರಬೇಕಿತ್ತು, ನಾನು ಒಳಗಡೆ ಇರಬೇಕಿತ್ತು ಎಂದು ಮಾಳು ನಿಪನಾಳ ಅವರು ಹೇಳಿದ್ದಾರೆ.

35
ಮೊದಲು ಯಾರು ಹೇಗೆ ಅಂತ ನೋಡ್ತಾನೆ

ಗಿಲ್ಲಿ ನಟ ಬೇರೆಯವರನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾನೆ. ಅವನು ಇಲ್ಲಿಯವರೆಗೆ ಸಾಕಷ್ಟು ರಿಯಾಲಿಟಿ ಶೋ ಮಾಡಿಕೊಂಡು ಬಂದಿದ್ದಾನೆ. ಮೊದಲು ಯಾರು ಟ್ರಿಗರ್‌ ಆಗ್ತಾರೆ ಎಂದು ನೋಡಿಕೊಳ್ತಾನೆ, ಆಮೇಲೆ ಅವನು ಅವರ ಬಗ್ಗೆ ಕಾಮಿಡಿ ಮಾಡ್ತಾನೆ, ಈ ವಿಚಾರದಲ್ಲಿ ಅವನು ಕಿಲಾಡಿ ಎಂದು ಮಾಳು ನಿಪನಾಳ ಅವರು ಹೇಳಿದ್ದಾರೆ.

45
ನಾನು ಟ್ರಿಗರ್‌ ಆಗಲ್ಲ ಅಂತ ಗೊತ್ತಿದೆ

ಗಿಲ್ಲಿ ನಟ ಆರಂಭದಲ್ಲಿ ಅಶ್ವಿನಿ ಗೌಡ, ರಿಷಾ ಗೌಡ, ಧ್ರುವಂತ್‌, ರಾಶಿಕಾ ಶೆಟ್ಟಿ ಜೊತೆ ಜಗಳ ಆಡಿದ್ದನು, ಆಮೇಲೆ ಚೈತ್ರಾ ಕುಂದಾಪುರ ಜೊತೆ ಜಗಳ ಆಡಿದ್ದಾನೆ. ನನ್ನ ಜೊತೆ ಅವನು ಜಗಳ ಆಡಿದ್ರೆ ಏನೂ ನಡೆಯೋದಿಲ್ಲ, ನಾನು ಟ್ರಿಗರ್‌ ಆಗೋದಿಲ್ಲ ಎನ್ನೋದು ಗೊತ್ತಿದ್ದೇ ನನ್ನ ತಂಟೆಗೆ ಬರಲಿಲ್ಲ ಎಂದು ಮಾಳು ನಿಪನಾಳ ಹೇಳಿದ್ದಾರೆ.

55
ಗಿಲ್ಲಿ ಗೆದ್ದರೂ ನಾನು ಒಪ್ಪೋದಿಲ್ಲ

ಗಿಲ್ಲಿ ನಟ ಮನೆ ಕೆಲಸ ಮಾಡದೆಯೇ ಕ್ಯಾಪ್ಟನ್‌ ಆಗಿದ್ದಾನೆ, ಕ್ಯಾಪ್ಟನ್‌ ಆದ್ಮೇಲೆ ಮನೆ ಕೆಲಸ ಮಾಡೋದು ಇರೋದಿಲ್ಲ ಎಂದು ನಾನು, ರಘು ಅವರು ಕಾಮಿಡಿ ಮಾಡಿದ್ದುಂಟು. ಗಿಲ್ಲಿ ನಟ ಟ್ರೋಫಿ ಗೆದ್ದರೂ ಕೂಡ ನಾನು ಅದನ್ನು ಒಪ್ಪೋದಿಲ್ಲ. ಗಿಲ್ಲಿ ನಟ ಅವರ ವ್ಯಕ್ತಿತ್ವೇ ಇಲ್ಲ, ಹೇಗೆ ಬಿಗ್‌ ಬಾಸ್‌ ಗೆಲ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories