ಕೊಡಬಾರದ ಪರೀಕ್ಷೆ ಕೊಟ್ರೀ.. Bigg Boss; ಅಂದು ನಟ ರಮೇಶ್‌ ಅರವಿಂದ್‌ಗೆ ಬಂದ ಸ್ಥಿತಿ ಧನುಷ್‌ ಗೌಡಗೆ ಬಂತು,

Published : Dec 23, 2025, 02:29 PM IST

Bigg Boss Kannada Season 12 Episode: ರಮೇಶ್‌ ಅರವಿಂದ್‌, ಪ್ರೇಮಾ ಅವರ ‘ತುತ್ತಾ ಮುತ್ತಾ’ ಎನ್ನುವ ಸಿನಿಮಾವನ್ನು ನೋಡಿರಬಹುದು. ಅಲ್ಲಿ ರಮೇಶ್‌ ಅರವಿಂದ್‌ ಅವರು ಒದ್ದಾಡಿದಂತೆ, ಬಿಗ್‌ ಬಾಸ್‌ ಶೋನಲ್ಲಿ ಧನುಷ್‌ ಅವರು ಪರದಾಡುವ ಪರಿಸ್ಥಿತಿ ಬಂದಿದೆ. ಹಾಗಾದರೆ ಏನಾಯ್ತು?

PREV
16
ತುತ್ತಾ ಮುತ್ತಾ ಸಿನಿಮಾ ನೋಡಿದ್ದೀರಾ?

‘ತುತ್ತಾ ಮುತ್ತಾ’ ಸಿನಿಮಾದಲ್ಲಿ ತಂದೆಯನ್ನು ಕಳೆದುಕೊಂಡ ರಮೇಶ್‌ ಅರವಿಂದ್‌ ಯಾವಾಗಲೂ ತಾಯಿ ಜೊತೆಗೆ ಇರುತ್ತಾರೆ, ತಾಯಿ ಪ್ರೀತಿಯಲ್ಲಿ ಬೆಳೆಯುತ್ತಾರೆ. ಆಮೇಲೆ ಪ್ರೇಮಾ ಅವರ ಜೊತೆ ಮದುವೆ ಆಗುತ್ತದೆ. ಪ್ರೇಮಾ ಜೊತೆ ಇದ್ದರೆ ತಾಯಿಗೆ ಇಷ್ಟ ಆಗೋದಿಲ್ಲ, ತಾಯಿ ಜೊತೆಗೆ ಇದ್ದರೆ ಪ್ರೇಮಾಗೆ ಇಷ್ಟ ಆಗೋದಿಲ್ಲ. ತುತ್ತಾ? ಮುತ್ತಾ? ಎಂಬ ಪರಿಸ್ಥಿತಿ ಬರುವುದು.

26
ಧನುಷ್‌ ತಾಯಿ, ಪತ್ನಿ ಆಗಮನ

ಈಗ ಬಿಗ್‌ ಬಾಸ್‌ ಮನೆಯಲ್ಲಿ ಪೇರೆಂಟ್ಸ್‌ ರೌಂಡ್‌ ಇದೆ. ರಾಶಿಕಾ ಶೆಟ್ಟಿ ಅವರ ತಮ್ಮ, ತಾಯಿ ದೊಡ್ಮನೆಗೆ ಬಂದಿದ್ದು, ರಾಶಿಕಾ ಜೊತೆ ಮಾತನಾಡಿದ್ದಾರೆ, ಮಗಳನ್ನು ಕೊಂಡಾಡಿದ್ದಾರೆ, ಒಂದಿಷ್ಟು ಸಮಯವನ್ನು ಕಳೆದಿದ್ದಾರೆ. ಈಗ ಧನುಷ್‌ ತಾಯಿ, ಹೆಂಡ್ತಿ ಕೂಡ ಬಂದಿದ್ದಾರೆ.

36
ಕಣ್ಣೀರು ಹಾಕಿದ ಧನುಷ್‌ ಗೌಡ

ಧನುಷ್‌ ಅವರ ತಾಯಿ ಹಾಗೂ ಪತ್ನಿ ಕನ್ಫೆಶನ್‌ ರೂಮ್‌ನಲ್ಲಿದ್ದರು. ಅವರಲ್ಲಿ ಒಬ್ಬರನ್ನು ಧನುಷ್‌ ಆಯ್ಕೆ ಮಾಡಿಕೊಂಡರೆ, ಅವರ ಜೊತೆ ಮಾತ್ರ ಮಾತನಾಡಬಹುದು. ಈ ಕಂಡೀಶನ್‌ ಕೇಳಿ ಧನುಷ್‌ ಗೌಡ, ಸಂಜನಾ, ಹಾಗೂ ಧನುಷ್‌ ತಾಯಿ ಕೂಡ ಕಣ್ಣೀರು ಹಾಕಿದ್ದಾರೆ. ಈ ಪರಿಸ್ಥಿತಿ ಎಲ್ಲರಿಗೂ ಬೇಸರ ತಂದಿದೆ. ಅಂದು ಧನುಷ್‌ ಅವರಿಗೆ ಮನೆಯಿಂದ ಲೆಟರ್‌ ಕೂಡ ಸಿಕ್ಕಿಲಿಲ್ಲ.

46
ಧನುಷ್‌ ಆಯ್ಕೆ ಏನು?

ಧನುಷ್‌ ಅವರು ಯಾರ ಹೆಸರನ್ನು ಆಯ್ಕೆ ಮಾಡಿಕೊಳ್ತಾರೆ ಎಂಬ ಪ್ರಶ್ನೆ ಇದೆ. ಸದ್ಯ ವಾಹಿನಿಯು ಪ್ರೋಮೋವನ್ನು ರಿಲೀಸ್‌ ಮಾಡಿದ್ದು, ಧನುಷ್‌ ಆಯ್ಕೆ ಯಾರಾಗಲಿದೆ ಎಂಬ ಕುತೂಹಲವಿದೆ. ಧನುಷ್‌ ಅವರು ಪತ್ನಿಯನ್ನು ಆಯ್ಕೆ ಮಾಡಿದರೆ, ತಾಯಿಗೆ ಬೇಸರ ಆಗಬಹುದು, ತಾಯಿಯನ್ನು ಆಯ್ಕೆ ಮಾಡಿದರೆ ಪತ್ನಿಗೆ ಬೇಸರ ಆಗಬಹುದು. ಆದರೆ ಧನುಷ್‌ ಆಯ್ಕೆ ಏನು ಎಂದು ಕಾದು ನೋಡಬೇಕಿದೆ

56
ಬಿಗ್‌ ಬಾಸ್‌ ಏನ್‌ ಮಾಡ್ತಾರೆ?

ಇದು ಬಿಗ್‌ ಬಾಸ್‌ ನೀಡಿದ ಪರೀಕ್ಷೆ ಅಷ್ಟೇ. ಧನುಷ್‌ ಆಯ್ಕೆ ಮಾಡಿದ ಬಳಿಕ ಇಬ್ಬರನ್ನು ಭೇಟಿ ಮಾಡುವ ಅವಕಾಶ ನೀಡಲಾಗುವುದು. ಇನ್ನು ಈ ಪ್ರೋಮೋ ನೋಡಿ ವೀಕ್ಷಕರು ಕೂಡ ಬೇಸರ ಹೊರಹಾಕಿದ್ದಾರೆ. ಇದೆಂಥ ಪರೀಕ್ಷೆ ಎಂದು ಪ್ರಶ್ನೆ ಮಾಡಿದ್ದಾರೆ.

66
ಧನುಷ್‌ ಗೌಡ

2024 ಏಪ್ರಿಲ್‌ ತಿಂಗಳಿನಲ್ಲಿ ಸಂಬಂಧಿ ಸಂಜನಾಳ ಜೊತೆ ಧನುಷ್‌ ಗೌಡ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಈ ಮದುವೆ ನಡೆದಿತ್ತು.

ಕನ್ನಡದಲ್ಲಿ ಗೀತಾ, ನೂರು ಜನ್ಮಕೂ, ಗೌರಿ ಶಂಕರ ಧಾರಾವಾಹಿಯಲ್ಲಿ ಧನುಷ್‌ ಗೌಡ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories