ಪ್ರೀತಿಸಿ, ಮದುವೆಯಾಗಿ ಗಂಡನ ಜೊತೆ ನಿಂತು, ಚೆನ್ನೈನಲ್ಲಿ ಮನೆ ಮಾಡಿದ ಕನ್ನಡತಿ, ಕಿರುತೆರೆ ನಟಿ! Photos

Published : Dec 23, 2025, 01:15 PM IST

ಪ್ರೀತಿ ಎಂದರೆ ಶಕ್ತಿ. ಪ್ರೀತಿ ಮಾಡುವವರು ಜೊತೆಯಾಗಿ ಬೆಳೆದು ಗೆದ್ದ ಉದಾಹರಣೆ ಸಾಕಷ್ಟಿವೆ. ಈಗ ಮಂಗಳೂರಿನ ಕನ್ನಡತಿ, ನಟಿ ಶ್ರೇಯಾ ಅಂಚನ್‌ ಅವರು ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದಲ್ಲದೆ, ಹೊಸ ಮನೆಗೆ ಕಾಲಿಟ್ಟಿದ್ದಾರೆ. ಶ್ರೇಯಾ ಅಂಚನ್‌ ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ. 

PREV
16
ಕನ್ನಡ ಧಾರಾವಾಹಿಗಳಲ್ಲಿ ನಟನೆ

ನಟಿ ಶ್ರೇಯಾ ಅಂಚನ್‌ ಅವರು, ಕನ್ನಡದಲ್ಲಿ ‘ಅರಗಿಣಿ’, ‘ನಂದಿನಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಕನ್ನಡ, ತುಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದು, ಗೃಹ ಪ್ರವೇಶದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

26
ಬರಿಗೈಯಲ್ಲಿ ಚೆನ್ನೈಗೆ ಬಂದ್ರು

"ಪ್ರತಿಯೊಂದು ಕನಸಿನ ಹಾದಿಯಲ್ಲೂ ಕೈ ಕೈ ಹಿಡಿದು ನಡೆದ ನಾವು, ಇಂದು ನಮ್ಮ ಹೊಸ ಮನೆಯ ಕೀಲಿಕೈಯನ್ನು ಹಿಡಿದಿದ್ದೇವೆ. ಈ ಜರ್ನಿ ನಿಜಕ್ಕೂ ಒಂದು ಅದ್ಭುತ ಮ್ಯಾಜಿಕ್‌ ಆಗಿತ್ತು. ಬರಿಗೈಯಲ್ಲಿ ನಾವಿಬ್ಬರೂ, ನೂರಾರು ಕನಸು ಮತ್ತು ಛಲವನ್ನು ಹೊತ್ತು ಬೇರೆ ಬೇರೆ ಊರುಗಳಿಂದ ಚೆನ್ನೈಗೆ ಬಂದೆವು. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಚೆನ್ನೈನಲ್ಲಿ ಮೊದಲ ಮನೆಯ ಕೀ ಪಡೆದಿದ್ದೇವೆ. ಇದು ಮರೆಯೋಕೆ ಆಗದು” ಎಂದಿದ್ದಾರೆ.

36
ನಮ್ಮಿಬ್ಬರ ಪ್ರಾರ್ಥನೆ, ತಾಳ್ಮೆ, ಕಷ್ಟ

ಇದು ಕೇವಲ ನಮಗೆ ಮನೆಯಲ್ಲ, ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ, ದೇವರ ಆಶೀರ್ವಾದ ಕೂಡ ಹೌದು, ನಮ್ಮ ಪ್ರೀತಿಯ ಸಾಕಾರವೂ ಹೌದು. ನಾವು ನಮ್ಮ ಮೊದಲ ಮನೆಗೆ ಕಾಲಿಟ್ಟಿದ್ದೇವೆ. ನಮ್ಮಿಬ್ಬರ ಎರಡು ಹೃದಯದಲ್ಲಿ ಮೊಳಕೆಯೊಡೆದ ಕನಸು ಇಂದು ನಿಜಕ್ಕೂ ನನಸಾಗಿದೆ. ಈ ಮನೆ ಕೇವಲ ನಾಲ್ಕು ಗೋಡೆ, ಒಂದು ಮೇಲ್ಛಾವಣಿಯಲ್ಲ. ಬದಲಾಗಿ ಇದು ನಮ್ಮಿಬ್ಬರ ಪ್ರಾರ್ಥನೆ, ತಾಳ್ಮೆ, ಕಷ್ಟಗಳು , ಪ್ರತಿದಿನ ಹಂಚಿಕೊಂಡ ನಿಷ್ಕಲ್ಮಶ ಪ್ರೀತಿಯಿಂದ ಕಟ್ಟಿದ ಗೂಡಾಗಿದೆ.

46
ನಮ್ಮ ಹೃದಯಕ್ಕೆ ಭಾವನೆಗಳ ಆಳ ಗೊತ್ತಿದೆ

ಮುಂದೇನಾಗುವುದು ಎಂದು ತಿಳಿಯದಿದ್ದರೂ ಕೂಡ, ಕಷ್ಟದ ದಿನಗಳಲ್ಲಿ ಪರಸ್ಪರ ಆಸರೆಯಾಗಿ ನಿಂತಿದ್ದೇವೆ, ಸಣ್ಣ ಸಣ್ಣ ಗೆಲುವನ್ನು ಸಂಭ್ರಮಿಸಿದ್ದೇವೆ, ಈ ಜರ್ನಿ ಮೇಲೆ ನಾವು ನಂಬಿಕೆಯಿಟ್ಟಿದ್ದೇವೆ. ಈ ಭಾವನೆಯನ್ನು ಪದಗಳಲ್ಲಿ ಹೇಳುವುದು ಕಷ್ಟ. ಆದರೆ ನಮ್ಮ ಹೃದಯಕ್ಕೆ ಇದರ ಆಳ ಗೊತ್ತಿದೆ ಎಂದು ಹೇಳಿದ್ದಾರೆ.

56
ಕನಸಿನ ಮನೆಯಲ್ಲಿದ್ದೇವೆ

ನಮ್ಮನ್ನು ಹಂತ ಹಂತವಾಗಿ ಜೀವನ ಪರೀಕ್ಷಿಸಿದಾಗಲೂ, ಭರವಸೆ ಬಿಡದೆ, ನಾವಿಬ್ಬರು ಒಬ್ಬರಿಗೊಬ್ಬರು ಆಸರೆಯಾಗಿ ನಿಂತೆವು. ಮನೆಯ ಕನಸು ಕಂಡೆ, ಅದಕ್ಕಾಗಿ ಪ್ರಾರ್ಥಿಸಿ, ಕಷ್ಟಪಟ್ಟಿದ್ದೇವೆ. ಇಂದು ಆ ಕನಸಿನ ಮನೆಯೊಳಗೆ ನಾವು ನಿಂತಿದ್ದೇವೆ ಎಂದಿದ್ದಾರೆ. 

66
ಚೆನ್ನೈನಲ್ಲಿ ಮದುವೆ

ಅಂದಹಾಗೆ ಶ್ರೇಯಾ ಅಂಚನ್‌ ಅವರು ಸಿಧು ಎನ್ನುವ ನಟರನ್ನು ಮದುವೆ ಆಗಿದ್ದಾರೆ. ಸಿಧು ಅವರು ತಮಿಳು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಧು ಕೂಡ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. 2021ರಲ್ಲಿ ಚೆನ್ನೈನಲ್ಲಿ ಈ ಮದುವೆ ನಡೆದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories