ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಬಂದಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಬಾಯ್ತಪ್ಪಿ ಸತ್ಯವನ್ನು ಹೇಳಿದ್ದಾರೆ. ಈ ಸೀಕ್ರೆಟ್ ಟಾಸ್ಕ್‌ನ ಭಾಗವಾಗಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರನ್ನು ಗುರಿ ಮಾಡಲಾಗಿದ್ದು, ಮನೆಯಲ್ಲಿ ಹೊಸ ಸಂಘರ್ಷಗಳು ಹುಟ್ಟಿಕೊಂಡಿವೆ.
ಬಿಗ್‌ಬಾಸ್ ಮನೆಯಲ್ಲಿ ಮಾಜಿ ಮತ್ತು ಹಾಲಿ ಸ್ಪರ್ಧಿಗಳ ನಡುವೆ ಆಟ ನಡೆಯುತ್ತಿದೆ. ಅತಿಥಿಗಳಾಗಿ ಬಂದಿರುವ ಮಾಜಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ಸೀಕ್ರೆಟ್ ಟಾಸ್ಕ್ ನೀಡಿದ್ದಾರಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಚೈತ್ರಾ ಕುಂದಾಪುರ ಹೇಳಿದ ಮಾತು. ತ್ರಿವಿಕ್ರಮ್ ಜೊತೆ ಮಾತನಾಡುವ ಸಂದರ್ಭದಲ್ಲಿ ಚೈತ್ರಾ ಈ ಮಾತುಗಳನ್ನಾಡಿದ್ದಾರೆ.
25
ಗಿಲ್ಲಿ ನಟ ಟಾರ್ಗೆಟ್
ಐವರು ಮಾಜಿ ಸ್ಪರ್ಧಿಗಳು ಗಿಲ್ಲಿ ನಟ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಬಹುಶಃ ಹಾಗಾಗಿಯೇ ಗಿಲ್ಲಿ ನಟ ಮಾತುಗಳನ್ನು ಕಡಿಮೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಮತ್ತೊಂದೆಡೆ, ತಲೆಯಲ್ಲಿ ಬುದ್ದಿಯಿಲ್ಲಾ ಕ್ಷಮಿಸಿ ಎಂದು ಹೇಳಲು ಅಶ್ವಿನಿ ಗೌಡ ಒಪ್ಪಿಲ್ಲ. ಯಾರನ್ನು ಕೇಳಿ ಕಾವ್ಯಾ ಈ ಮಾತು ನೀಡಿದರು ಎಂದು ಕ್ಯಾಪ್ಟನ್ ಅಭಿಷೇಕ್‌ಗೆ ಅಶ್ವಿನಿ ಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ.
35
ಚೈತ್ರಾ ಕುಂದಾಪುರ ಪ್ರಶ್ನೆ
ಮನೆಯ 12 ಸದಸ್ಯರು ಕ್ಷಮೆ ಕೇಳಿದ್ರೆ ಒಬ್ಬರು ಮಾತ್ರ ಯಾಕೆ ಒಪ್ಪಿಕೊಳ್ಳುತ್ತಿಲ್ಲ. ನಿನ್ನೆ ಪಾಯಿಂಟ್ಸ್ ಕೊಡಲ್ಲ ಅಂದಾಗ ಇಡೀ ಮನೆ ಗಿಲ್ಲಿ ವಿರುದ್ಧ ನಿಂತಿತ್ತು. ಇದೀಗ ಅಶ್ವಿನಿ ಗೌಡ ವಿರುದ್ಧ ನಿಂತುಕೊಳ್ಳಲಿ ಎಂದು ಚೈತ್ರಾ ಕುಂದಾಪುರ ಹೇಳುತ್ತಾರೆ. ಮುಂದುವರಿದು ಮಾತನಾಡಿದ ಚೈತ್ರಾ ಕುಂದಾಪುರ, ಮನೆಯಲ್ಲಿರೋರ ಸದಸ್ಯರ ಒಗ್ಗಟ್ಟನ್ನು ಪರೀಕ್ಷೆ ಮಾಡಲು ನಾವು ಬಂದಿದ್ದೇವೆ ಎಂದು ಬಾಯ್ತಪ್ಪಿ ಹೇಳುತ್ತಾರೆ. 56 ದಿನವಾದ್ರೂ ಇವರಲ್ಲಿ ಒಗ್ಗಟ್ಟು ಇಲ್ಲವಾ ಎಂದು ಚೈತ್ರಾ ಕುಂದಾಪುರ ಪ್ರಶ್ನೆ ಮಾಡುತ್ತಾರೆ.
ಚೈತ್ರಾ ಕುಂದಾಪುರ ಅವರ ಮಾತುಗಳನ್ನು ಕೇಳಿದ ವೀಕ್ಷಕರು, ಒಗ್ಗಟ್ಟು ಪರೀಕ್ಷೆ ಮಾಡಲು ಬಂದಿರಬಹುದು ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಶಿಲಾ ಬಾಲಿಕೆ ಹೆಸರು ಗೊತ್ತಿಲ್ಲದಿದ್ದರೆ ಕಾವ್ಯಾ ತಮಗೆ ಬುದ್ದಿ ಇಲ್ಲ ಅಂತ ಹೇಳಬಹುದಿತ್ತು. ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಂದ ಹೇಳಿಸುತ್ತೇನೆ ಅಂದಿದ್ದು ತಪ್ಪು. ಮುಂದೆ ಇದು ಪುನಾರವರ್ತನೆ ಆಗಬಾರದು ಎಂದು ಕ್ಯಾಪ್ಟನ್‌ಗೆ ಅಶ್ವಿನಿ ಗೌಡ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಒಂದಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಪಾಯಿಂಟ್ಸ್ ಗಾಗಿ ಅತಿಥಿಗಳಿಗೆ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಗಿಲ್ಲಿ ನಟ ಸೈಲೆಂಟ್ ಆಗಿರೋದು ಅಶ್ವಿನಿ ಅವರಿಗೆ ಇಷ್ಟವಾಗಿಲ್ಲ. ಕೂಲ್ ಆಗಿರು, ಏನಾದ್ರು ಹಿಂಸೆ ಅನ್ನಿಸಿದ್ರೆ ಕರೆಯುವಂತೆ ಅಶ್ವಿನಿ ಗೌಡ ಸಲಹೆಯನ್ನು ನೀಡಿದ್ದಾರೆ.