ಕಳೆದ ಬಿಗ್‌ಬಾಸ್ ಸೀಸನ್ನಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು, ಬಳೆ ವಿಚಾರದಲ್ಲಿ ಅದರಲ್ಲೂ ಹೆಣ್ಣು ಮಕ್ಕಳನ್ನು ಅವಮಾನಿಸುತ್ತಿದ್ದಾರೆ, ವೈಯಕ್ತಿಕ ತೇಜೋವಧೆ ನಡೆಯುತ್ತಿದೆ ಎಂದು ಇಡೀ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಬಳೆ ವಿಚಾರದಲ್ಲಿ ನಟಿ ಸಂಗೀತಾ ಶೃಂಗೇರಿ ಮತ್ತು ನಟ ವಿನಯ್ ಗೌಡ ಮಧ್ಯೆ ಅದೆಷ್ಟು ದೊಡ್ಡ ಗಲಾಟೆ ನಡೆದಿತ್ತು ಎಂದರೆ ವಿನಯ್ ಬಹಳ ಅಗ್ರೆಶನ್‌ನಲ್ಲಿ ಆಟವಾಡುತ್ತಾರೆ. ಸ್ಪರ್ಧಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಹೊರಗಡೆ ಬಂದಾಗ ನೋಡಿಕೊಳ್ಳುತ್ತೇನೆ ಎಂದೆಲ್ಲ ದಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಇತ್ತು.
ಹಳ್ಳಿಮನೆ ಟಾಸ್ಕ್ ಒಂದರಲ್ಲಿ ಬಳೆ ವಿಚಾರದಲ್ಲಿ ವಿನಯ್ ಮಾತನಾಡಿದ ರೀತಿಗೆ ಇಡೀ ಕರ್ನಾಟಕ ವಿರೋಧ ವ್ಯಕ್ತಪಡಿಸಿತ್ತು. ಕಾರ್ತಿಕ್ ಮಹೇಶ್ ಅವರನ್ನು ಬಳೆಗಳ ರಾಜ ಎಂದು ವಿನಯ್ ಸಂಭೋದಿಸಿದ್ದರು. ಇದು ಟಾಸ್ಕ್ ಬಂದಾಗಲೂ ಮುಂದುವರೆಯಿತು. ಮಾತ್ರವಲ್ಲ ಆಗ ನಟಿ ಸಂಗೀತಾ ಶೃಂಗೇರಿ ಅದನ್ನು ವಿರೋಧಿಸಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಬಳೆಯ ಬಗ್ಗೆ ಕಮೆಂಟ್ ಮಾಡಿದ ವಿನಯ್ ಗೌಡಗೆ ಸಂಗೀತಾ ಶೃಂಗೇರಿ ಕೈ ತುಂಬಾ ಬಳೆ ಹಾಕಿ ನಾನು ಬಳೆ ಹಾಕಿಕೊಂಡಿದ್ದೇನೆ ಎಂದು ಟಕ್ಕರ್ ಕೊಟ್ಟಿದ್ದರು. ಆ ಟಾಸ್ಕ್ ಮುಗಿಯುವರೆಗೂ ಕೈ ತುಂಬಾ ಬಳೆ ಹಾಕಿ ಹೆಣ್ಣು ಮಕ್ಕಳ ಶಕ್ತಿಯನ್ನು ಬಿಂಬಿಸಿದ್ದರು. ಅಲ್ಲಿಂದ ಬಿಗ್‌ಬಾಸ್ ಅನ್ನು ಸಂಗೀತಾಳಿಗಾಗಿಯೇ ನೊಡುವವರ ಸಂಖ್ಯೆಯೂ ಹೆಚ್ಚಿತ್ತು.
ಇಷ್ಟು ಮಾತ್ರವಲ್ಲ ಆ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಬಳೆಯ ಬಗ್ಗೆ ನಟ ಸುದೀಪ್ ನಿರೂಪಕರಾಗಿ ಧ್ವನಿ ಎತ್ತಲೇ ಬೇಕೆಂದು ಸಾಮಾನ್ಯ ಜನ ಮಾತ್ರವಲ್ಲ ಚಿತ್ರರಂಗದ ಅನೇಕ ನಟಿಯರು ಕೂಡ ಈ ಬಗ್ಗೆ , ಶೋ ಬಗ್ಗೆ , ವಿನಯ್ ವರ್ತನೆ ಬಗ್ಗೆ ಪ್ರಶ್ನಿಸುವಂತೆ ಆಗ್ರಹಿಸಿದ್ದರು.
ಅದರಂತೆ ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯಿತಿ ಬಂದಾಗ ನಿರೂಪಕರಾಗಿ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡರು. ಮಾತ್ರವಲ್ಲ ಬಲಹೀನತೆಯಲ್ಲ ಎಂದು ಕಿಚ್ಚನ ಚಪ್ಪಾಳೆಯನ್ನು ಸುದೀಪ್ ಬಳೆಗೆ ಕೊಟ್ಟಿದ್ದರು. ಬಳೆಯ ಹಿಂದಿನ ಶಕ್ತಿಗೆ ಈ ಚಪ್ಪಾಳೆ ಎಂದಿದ್ದರು. ಬಳೆ ಒಂದು ಬಲದ ಸಂಕೇತ ಎಂದಿದ್ದರು. ಅಂದರೆ ಅಲ್ಲಿ ಸಂಗೀತಾಗೂ ಕೊಟ್ಟಂತಾಯ್ತು. ಹೆಣ್ಣು ಮಕ್ಕಳ ಶಕ್ತಿ ಬಳೆಗೂ ಕೊಟ್ಟಂತಾಯ್ತು.
ಯಾವಾಗ ಕಿಚ್ಚನ ಚಪ್ಪಾಳೆ ಹೆಣ್ಣು ಮಕ್ಕಳ ಶಕ್ತಿ, ಬಲಶಾಲಿಯಾದ ಬಳೆಗೆ ನೀಡಿದರೋ ಅನೇಕ ನಟಿಯರು ಸುದೀಪ್ ಅವರ ಗೌರವಕ್ಕೆ ತಲೆಬಾಗಿದರು. ಸ್ಟೇಟಸ್ ಹಾಕಿ ಸಂಭ್ರಮಿಸಿದರು . ಇದು ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಒಂದು ವಸ್ತುವಿಗೆ ಸಿಕ್ಕ ಮೊದಲ ಗೌರವವಾಗಿತ್ತು.
ಯಾವಾಗ ಕಿಚ್ಚನ ಚಪ್ಪಾಳೆ ಹೆಣ್ಣು ಮಕ್ಕಳ ಶಕ್ತಿ, ಬಲಶಾಲಿಯಾದ ಬಳೆಗೆ ನೀಡಿದರೋ ಅನೇಕ ನಟಿಯರು ಸುದೀಪ್ ಅವರ ಗೌರವಕ್ಕೆ ತಲೆಬಾಗಿದರು. ಸ್ಟೇಟಸ್ ಹಾಕಿ ಸಂಭ್ರಮಿಸಿದರು . ಇದು ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಒಂದು ವಸ್ತುವಿಗೆ ಸಿಕ್ಕ ಮೊದಲ ಗೌರವವಾಗಿತ್ತು.