ತನಗೂ, ತಾಯಿಗೂ ಡೈಮಂಡ್‌ ಖರೀದಿ ಮಾಡಿದ Bigg Boss ಧನುಶ್ರೀ! ಇದರ ಸೀಕ್ರೇಟ್‌ ಬಿಚ್ಚಿಟ್ಟ ಕನ್ನಡ ಯುಟ್ಯೂಬರ್!‌

Published : Aug 15, 2025, 01:35 PM IST

ಬಿಗ್‌ ಬಾಸ್‌ ಕನ್ನಡ 8 ಸ್ಪರ್ಧಿ ಧನುಶ್ರೀ ( Bigg Boss Dhanushree ) ಆಗಾಗ ಶಾಪಿಂಗ್‌ ಮಾಡುತ್ತಲೇ ಇರುತ್ತಾರೆ. ತಮ್ಮ ಯುಟ್ಯೂಬ್‌ ಚಾನೆಲ್‌ಗೋಸ್ಕರ Daily Vlogs ಮಾಡೋ ಅವರು ಏನೇ ತಗೊಂಡ್ರೂ, ಬಾಡಿಗೆ ಮನೆ ಹುಡುಕಿದ್ರೂ ಕೂಡ ಅದನ್ನು ವಿಡಿಯೋದಲ್ಲಿ ಹೇಳಿಕೊಳ್ತಾರೆ. ಈಗ ಅವರು ವಜ್ರ ಖರೀದಿಸಿದ್ದಾರಂತೆ. 

PREV
15

ಜಿಮ್‌ ವರ್ಕೌಟ್‌, ಶಾಪಿಂಗ್‌, ಮನೆ ಎಂದು ವಿಡಿಯೋ ಮಾಡುವ ಅವರೀಗ ಚಿನ್ನದ ಬಳೆ ಕಥೆ ಹೇಳಿದ್ದಾರೆ. ಪ್ರತಿ ತಿಂಗಳು 30000 ರೂಪಾಯಿ ಸಂಬಳ ಬರುತ್ತಿದ್ದಾಗಲೇ ಅವರು ಹಣ ಉಳಿತಾಯ ಮಾಡಿ, ಆ ಹಣದಿಂದ ಬಂಗಾರದ ಬಳೆ ಖರೀದಿಸಿದ್ದರು.

25

ಈಗ ಆ ಬಳೆ ತುಂಡಾಗೋ ಸ್ಥಿತಿಯಲ್ಲಿದೆ. ಹೀಗಾಗಿ ಆ ಬಳೆಯನ್ನು ಮಾರಿದ್ದಾರೆ. ಮಾರಿದ ಹಣದಲ್ಲಿ ಎರಡು ವಜ್ರದ ಉಂಗುರ ಖರೀದಿ ಮಾಡಿದ್ದಾರೆ. ವಜ್ರದ ಉಂಗುರಗಳು ತುಂಬ ಇಷ್ಟವಾಗಿದ್ದಕ್ಕೆ, ತಾಯಿಗೆ, ಹಾಗೂ ತನಗೆ ಒಂದೊಂದು ಉಂಗುರ ಖರೀದಿ ಮಾಡಿದ್ದಾರೆ.

35

ಧನುಶ್ರೀ ಅವರದ್ದೇ ಆದ ಸಣ್ಣ ಶಾಪ್‌ ಕೂಡ ಇದೆ. ಇದರ ಜೊತೆಗೆ ಅವರು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಯುಟ್ಯೂಬ್‌ ವಿಡಿಯೋ ಕೂಡ ಮಾಡುತ್ತಾರೆ. ಈ ಎಲ್ಲ ಮೂಲಗಳಿಂದ ಅವರ ಆದಾಯ ಬರುತ್ತಿದೆ.

45

ಧನುಶ್ರೀ ಅವರ ಒಂದು ಉಂಗುರಕ್ಕೆ 180000 ರೂಪಾಯಿ ಆಗಿದೆ. ವಜ್ರ ಯಾವತ್ತಿದ್ರೂ ವಜ್ರವೇ. ಹೀಗಾಗಿ ದುಬಾರಿ. ಇದು ಧನುಶ್ರೀ ಅವರ ಜೀವನದ ಮೊದಲ ಡೈಮೆಂಡ್‌ ಶಾಪಿಂಗ್‌ ಅಂತೆ. ತುಂಬ ಇಷ್ಟ ಪಟ್ಟು ಅವರು ಆ ಉಂಗುರಗಳನ್ನು ಖರೀದಿ ಮಾಡಿದ್ದಾರಂತೆ.

55

ಯುಟ್ಯೂಬ್‌, ಸೋಶಿಯಲ್‌ ಮೀಡಿಯಾದಿಂದಲೇ ಇಷ್ಟೊಂದು ಹಣ ಸಂಪಾದನೆ ಮಾಡಬಹುದು ಎಂದು ಅನೇಕರು ಆಶ್ಚರ್ಯಪಟ್ಟಿದ್ದಾರೆ. 9 To 5 ಜಾಬ್‌ಗಿಂತ ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡಬಹುದು.

Read more Photos on
click me!

Recommended Stories