ನೀ ಗುಲಾಬಿಯೊಳಗೋ, ನಿನ್ನೊಳು ಗುಲಾಬಿಯೋ- ಬಿಗ್‌ ಬಾಸ್ ನಿವೇದಿತಾ ಗೌಡ ಈಗಿನ ವಯಸ್ಸೆಷ್ಟು?

Published : Mar 07, 2025, 01:07 PM ISTUpdated : Mar 07, 2025, 01:30 PM IST

'ಬಿಗ್‌ ಬಾಸ್‌ ಕನ್ನಡ ಸೀಸನ್‌ 5' ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಿವೇದಿತಾ ಗೌಡ ಈಗ ಸಖತ್‌ ಪಾಪುಲರ್.‌ ಸೋಶಿಯಲ್‌ ಮೀಡಿಯಾದಲ್ಲಿ ನಿತ್ಯ ಹಸಿಬಿಸಿ ಫೋಟೋ, ವಿಡಿಯೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುವ ಈ ಗೊಂಬೆ ಈಗ ಪಕ್ಕಾ ಗೊಂಬೆ ಥರ ರೆಡಿಯಾಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ. 

PREV
15
ನೀ ಗುಲಾಬಿಯೊಳಗೋ, ನಿನ್ನೊಳು ಗುಲಾಬಿಯೋ- ಬಿಗ್‌ ಬಾಸ್ ನಿವೇದಿತಾ ಗೌಡ ಈಗಿನ ವಯಸ್ಸೆಷ್ಟು?

ನಿವೇದಿತಾ ಗೌಡ ಅವರು ನಿತ್ಯವೂ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್!‌ 

25

ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ಶೋನಲ್ಲಿ ನಿವೇದಿತಾ ಗೌಡ ಭಾಗವಹಿಸುವಾಗ  ಅವರಿಗೆ ವಯಸ್ಸು 20 ಕೂಡ ಆಗಿರಲಿಲ್ಲ. ಅಷ್ಟು ಚಿಕ್ಕ ವಯಸ್ಸಿಗೆ ದೊಡ್ಡ ರಿಯಾಲಿಟಿ ಶೋನಲ್ಲಿ ಭಾಗಿಯಾದರು. 

35

ಬಿಗ್‌ ಬಾಸ್‌ ಶೋಗೂ ಮುನ್ನ ಟಿಕ್‌ ಟಾಕ್‌ ಮಾಡುತ್ತ ನಿವೇದಿತಾ ಗೌಡ ಜನಪ್ರಿಯತೆ ಪಡೆದಿದ್ದರು. ಈ ಜನಪ್ರಿಯತೆಯಿಂದಲೇ ಬಿಗ್‌ ಬಾಸ್‌ ಶೋ ಸಿಕ್ಕಿತ್ತು.  

45

ನಿವೇದಿತಾ ಗೌಡ ಅವರು ಬಿಗ್‌ ಬಾಸ್‌ ಸಹಸ್ಪರ್ಧಿ ಚಂದನ್‌ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ಹೊಂದಾಣಿಕೆ ಸಮಸ್ಯೆಯಿಂದ ಈ ಜೋಡಿ ಡಿವೋರ್ಸ್‌ ಪಡೆದಿದೆ. 

55

ಸದ್ಯ ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.ಈಗ ಅವರು ʼಬಾಯ್ಸ್‌ v/s ಗರ್ಲ್ಸ್ʼ‌ ಶೋ ಸ್ಪರ್ಧಿ ಕೂಡ ಹೌದು. ಈಗ ಅವರಿಗೆ 26 ವರ್ಷ ವಯಸ್ಸಂತೆ. 1998ರಲ್ಲಿ ಜನಿಸಿದರು ಎನ್ನಲಾಗಿದೆ.  

click me!

Recommended Stories