PHOTOS: ವೈಭವದಿಂದ ನಡೆದ ʼಬಿಗ್‌ ಬಾಸ್ʼ‌ ರಂಜಿತ್‌, ಮಾನಸಾ ಗೌಡ ನಿಶ್ಚಿತಾರ್ಥ!

Published : Mar 06, 2025, 04:49 PM ISTUpdated : Mar 06, 2025, 04:56 PM IST

 ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ಭಾಗವಹಿಸಿದ್ದ ರಂಜಿತ್‌ ಅವರು ಪ್ರೀತಿಸಿದ ಹುಡುಗಿ ಮಾನಸಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಎಂಗೇಜ್‌ಮೆಂಟ್‌ ಫೋಟೋಗಳು ಇಲ್ಲಿವೆ. 

PREV
15
PHOTOS: ವೈಭವದಿಂದ ನಡೆದ ʼಬಿಗ್‌ ಬಾಸ್ʼ‌ ರಂಜಿತ್‌, ಮಾನಸಾ ಗೌಡ ನಿಶ್ಚಿತಾರ್ಥ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿ ರಂಜಿತ್‌ ಕುಮಾರ್‌ ಅವರು ಮಾನಸಾ ಗೌಡ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

25

ಮಾನಸಾ ಗೌಡ ಹಾಗೂ ರಂಜಿತ್‌ ಅವರು ಪ್ರೀತಿಸಿದ್ದರು. ಈ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಮದುವೆ ಆಗಲಿದೆ. 

35

ರಂಜಿತ್‌ ಹಾಗೂ ಮಾನಸಾ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಗ್‌ ಬಾಸ್‌ ಸೀಸನ್‌ 11 ಸ್ಪರ್ಧಿಗಳು ಆಗಮಿಸಿದ್ದರು. 

45

ಬಂಗಾರದ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಮಿಂಚಿದ್ದಾರೆ. ಮಾನಸಾ ಗೌಡ ಅವರು ಫ್ಯಾಷನ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 

55

ಮಾನಸಾ ಗೌಡ ಅವರು ಫ್ಯಾಷನ್‌ ಡಿಸೈನರ್‌, ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇವರದ್ದೇ ಆದ ಬ್ಯೂಟಿಕ್‌ ಕೂಡ ಇದೆ. ಒಟ್ಟಿನಲ್ಲಿ ಇವರು ಉದ್ಯಮಿ ಕೂಡ ಹೌದು. 

Read more Photos on
click me!

Recommended Stories