ಕನ್ನಡ ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ 'ಕಮಲಿ' ಖ್ಯಾತಿಯ ನಟಿ ಅಮೂಲ್ಯಾ ಗೌಡ ಇದೀಗ ತೆಲುಗು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ತೆಲುಗು ಧಾರಾವಾಹಿ 'ಗುಂಡೆನಿಂದ ಗುಡಿಗಂಟಲು' ಸಹನಟನೊಂದಿಗೆ ಮನೆಯೊಳಗೆ ಮೀನಾ ಆಗಿ ಬಂದಿದ್ದಾರೆ.
ಜೀ ಕನ್ನಡ ವಾಹಿನಿ ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯಾ ಗೌಡ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದಿರುವ ಅಮೂಲ್ಯಾ ಗೌಡ, ಅಲ್ಲಿಯ ಪ್ರತಿಯೊಂದು ವಿನ್ಯಾಸ ನೋಡಿ ಅಚ್ಚರಿಗಗೊಂಡಿದ್ದಾರೆ. ಹೌದು, ಅಮೂಲ್ಯಾ ಗೌಡ ಬಿಗ್‌ಬಾಸ್ ಮನೆಯೊಳಗಿರುವ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ.
25
ಕನ್ನಡ ಬಿಗ್‌ಬಾಸ್ ಸೀಸನ್ 9ರಲ್ಲಿ ಸ್ಪರ್ಧಿ ಅಮೂಲ್ಯ ಗೌಡ
ಸೆಪ್ಟೆಂಬರ್ 6ರಂದು ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಗ್‌ಬಾಸ್ ಆರಂಭವಾಗಿದೆ. ಕನ್ನಡ ಬಿಗ್‌ಬಾಸ್‌ನಲ್ಲಿ ನಾಲ್ಕು ಕಾಮನ್ ಮ್ಯಾನ್ ಜೊತೆ 12 ಸೆಲಿಬ್ರಿಟಿಗಳು ದೊಡ್ಮನೆಯನ್ನು ಸೇರಿಕೊಂಡಿದ್ದಾರೆ. ನಟಿ ಅಮೂಲ್ಯಾ ಗೌಡ ಈ ಹಿಂದೆ ಕನ್ನಡ ಬಿಗ್‌ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿದ್ದರು. ನೂರಕ್ಕೂ ಹೆಚ್ಚು ದಿನಗಳನ್ನು ಬಿಗ್‌ಬಾಸ್ ಮನೆಯಲ್ಲಿ ಕಳೆದಿದ್ದರು.
35
ತೆಲುಗು ಬಿಗ್‌ಬಾಸ್ ಮನೆಯೊಳಗೆ ಅಮೂಲ್ಯಾ ಗೌಡ
ಇದೀಗ ತೆಲುಗು ಬಿಗ್‌ಬಾಸ್ ಮನೆಯೊಳಗೆ ಅಮೂಲ್ಯಾ ಗೌಡ ಬಂದಿದ್ದಾರೆ. ಸ್ಪರ್ಧಿಯಾಗಿಲ್ಲ, ಬದಲಾಗಿ ಬಿಗ್‌ಬಾಸ್ ಮನೆಯನ್ನು ತೋರಿಸಲು ತಮ್ಮ ಸೀರಿಯಲ್ ನಟನೊಂದಿಗೆ ಆಗಮಿಸಿದ್ದಾರೆ. ಗುಂಡೆನಿಂದ ಗುಡಿಗಂಟಲು ಧಾರಾವಾಹಿಯ ನಟ ವಿಷ್ಣುಕಾಂತ್ ಜೊತೆ ಬಿಗ್‌ಬಾಸ್ ಆಗಮಿಸಿ ಮನೆಯನ್ನು ಸುತ್ತಾಡಿ ತೆರಳಿದ್ದಾರೆ.
ಬಿಗ್‌ಬಾಸ್ ಮನೆಗೆ " ಗುಂಡೆನಿಂದ ಗುಡಿಗಂಟಲು" ಸೀರಿಯಲ್‌ನ ಮೀನಾ ಮತ್ತು ಬಾಲು ಪಾತ್ರದಲ್ಲಿಯೇ ಇಬ್ಬರು ಕಲಾವಿದರು ಆಗಮಿಸಿದ್ದು, ಮನೆಯ ಪ್ರತಿಯೊಂದು ಭಾಗವನ್ನು ವೀಕ್ಷಕರಿಗೆ ತೋರಿಸವ ಕೆಲಸವನ್ನು ಮಾಡಿದ್ದಾರೆ. ಚಿನಕುರಳಿ ಮೀನಾ, ಬಿಗ್‌ಬಾಸ್ ಮನೆಯನ್ನು ಮಾಡೆಲ್ ಹೌಸ್ ಎಂದು ತಿಳಿದು ಓಡಾಡಿದ್ದಾಳೆ. ಆನಂತರ ಇದು ಮಾಡೆಲ್ ಹೌಸ್ ಅಲ್ಲ, ಬಿಗ್‌ಬಾಸ್ ಹೌಸ್ ಎಂದು ತಿಳಿದಾಗ ಶಾಕ್ ಆಗಿದ್ದಾಳೆ.
55
ತಂತ್ರಗಾರಿಕೆ, ಆಟ, ಹೋರಾಟ
ಇದು ಬಿಗ್‌ಬಾಸ್ ಮನೆ ಇಲ್ಲಿ ತಂತ್ರಗಾರಿಕೆ, ಆಟ, ಹೋರಾಟ ಎಲ್ಲವೂ ಇರುತ್ತದೆ. ನಾನು ಇಲ್ಲಿಗೆ ಬರಲು ಇಷ್ಟವಿಲ್ಲ ಅಂದ್ರು ಕರೆದುಕೊಂಡು ಬಂದಿದ್ದೀಯಾ? ಬಾಗಿಲು ಮುಚ್ಚುವ ಮುನ್ನ ಇಲ್ಲಿಂದ ಹೋಗೋಣ ಬಾ ಎಂದು ಮೀನಾಳನ್ನು ಕರೆದುಕೊಂಡು ಬಾಲು ಹೋಗಿದ್ದಾನೆ. ನಟಿ ಅಮೂಲ್ಯಾ ಗೌಡ ಕನ್ನಡ ಜೊತೆಯಲ್ಲಿ ತೆಲಗು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.