'ಈ ಟಚ್ಚಲಿ ಏನೋ ಇದೆ..' ಬಿಗ್‌ ಬಾಸ್‌ ವೇದಿಕೆಯಲ್ಲೇ ಶುರುವಾದ ಅನುಷಾ ಲವ್‌ ಸ್ಟೋರಿ, ಇವಳೆಂತಾ ಬ್ಯೂಟಿ ಗೊತ್ತಾ?

First Published | Sep 29, 2024, 9:18 PM IST

ಬಿಗ್‌ ಬಾಸ್‌ ಕನ್ನಡ 11ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾದ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್‌ ಅವರ ನಡುವಿನ ಮಾತುಕತೆಗಳು ಈಗ ಚರ್ಚೆಯ ವಿಷಯವಾಗಿದೆ. 'ಟಚ್‌' ಪ್ರೋಗ್ರಾಮ್‌ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿ ಅದ್ದೂರಿಯಾಗಿ ಆರಂಭ ಕಂಡಿದೆ. ಇದರ ಬೆನ್ನಲ್ಲಿಯೇ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳ ನಡುವೆ ಶುರುವಾಗುವ ಲವ್‌ಸ್ಟೋರಿಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ.
 

ಬಿಗ್‌ ಬಾಸ್‌ ಕನ್ನಡ್ 5 ಹಾಗೂ 6ನೇ ಸ್ಪರ್ಧಿಯಾಗಿ ಮನೆಗೆ ವೇದಿಕೆಗೆ ಕಾಲಿಟ್ಟಿದ್ದು ಉದಯೋನ್ಮುಖ ನಟಿ ಅನುಷಾ ರೈ ಹಾಗೂ ನಟ ಧರ್ಮ ಕೀರ್ತಿರಾಜ್‌.

Tap to resize

ಇವರಿಬ್ಬರ ನಡುವೆ ನಡೆದ ಮಾತುಕತೆಗಳು ಸಖತ್‌ ಚರ್ಚೆ ಆಗುತ್ತಿವೆ. ಹಿಂದೆಲ್ಲಾ ಬಿಗ್‌ ಬಾಸ್‌ ಆರಂಭವಾದ 3-4 ವಾರಗಳ ಬಳಿಕ ಲವ್‌ ಸ್ಟೋರಿ ಆರಂಭವಾಗುತ್ತಿದ್ದವು. ಆದರೆ, ಈ ಬಾರಿ ಬಿಗ್‌ ಬಾಸ್‌ ವೇದಿಕೆಯಿಂದಲೇ ಲವ್‌ ಸ್ಟೋರಿ ಆರಂಭವಾಗುವ ಲಕ್ಷಣ ಕಂಡಿದೆ.

ಅದಕ್ಕೆ ಕಾರಣವಾಗಿದ್ದು ನಿರೂಪಕ ಕಿಚ್ಚ ಸುದೀಪ್‌ ನೇತೃತ್ವದಲ್ಲಿ ನಡೆದ 'ಟಚ್‌' ಪ್ರೋಗ್ರಾಮ್‌. ವೇದಿಕೆಯಲ್ಲಿದ್ದ ಅನುಷಾ ರೈ ಕಣ್ಣು ಮುಚ್ಚಿ ಮುಂದೆ ಬರುವ ಸ್ಪರ್ಧಿ ಯಾರು ಎಂದು ಗುರುತಿಸುವಂತೆ ಹೇಳಿದ್ದರು. ಆದರೆ, ಧರ್ಮ ಕೀರ್ತಿರಾಜ್‌ ಕೈಹಿಡಿದ ಅನುಷಾ ರೈ, ಇದು ಗಂಡೋ? ಹೆಣ್ಣೋ? ಎಂದು ಪ್ರಶ್ನೆ ಮಾಡಿದ್ದರು. ಈ ಸಂದರ್ಭವೇ ಇವರಿಬ್ಬರ ನಡುವೆ ಕುಚ್‌ ಕುಚ್‌ ಆರಂಭಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಇನ್ನು ಅನುಷಾ ರೈ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಬೆನ್ನಲ್ಲಿಯೇ ಇವರು ಯಾರು ಅನ್ನೋದರ ಬಗ್ಗೆಯೇ ಚರ್ಚೆ ಆರಂಭವಾಗಿದೆ. ಬಹುತೇಕ ಕನ್ನಡದ ಪ್ರೇಕ್ಷಕರಿಗೆ ಈಕೆ ಯಾರು ಅನ್ನೋದೇ ಗೊತ್ತಿಲ್ಲ.

ಅನುಷಾ ರೈ ಮೂಲತಃ ತುಮಕೂರಿನವರು. ಕೆಲವು ಕನ್ನಡ ಚಿತ್ರಗಳಲ್ಲದೆ ತಮಿಳಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೆ, ದರ್ಶನ್‌ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಅವರು ಕಿಚ್ಚ ಸುದೀಪ್‌ ಅವರೊಂದಿಗೂ ಫೋಟೋ ತೆಗೆಸಿಕೊಂಡಿದ್ದರು. ಬೆಂಗಳೂರಿನ ಆಚಾರ್ಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾರೆ.

2017ರಲ್ಲಿ ಸಂದೀಪ್‌ ನಗಲೀಕರ್‌ ನಿರ್ದೇಶನದ ಮಹಾನುಭಾವರು ಸಿನಿಮಾದ ಮೂಲಕ ಅನುಷಾ ರೈ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು.ಅದಾದ ಬಳಿಕ ಹಲವು ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು.

ಸೋಶಿಯಲ್‌ ಮೀಡಿಯಾದಲ್ಲೂ ಉತ್ತಮ ಫಾಲೋವರ್‌ಗಳನ್ನು ಹೊಂದಿರುವ ಅನುಷಾ ರೈ ಪ್ರಯಾಣದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಇವರಿಗೆ 1 ಲಕ್ಷದ 20 ಸಾವಿರ ಮಂದಿ ಫಾಲೋವರ್‌ಗಳಿದ್ದಾರೆ.

Latest Videos

click me!