Bigg Boss Kannada 11: ರಜತ್‌ಗೆ ಸುದೀಪ್ ಕ್ಲಾಸ್, ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮಂಜು!

First Published | Nov 23, 2024, 11:46 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ರಜತ್, ಸುರೇಶ್ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಕಿಚ್ಚನ ಚಪ್ಪಾಳಿ ಈ ವಾರ ಉಗ್ರಂ ಮಂಜುಗೆ ಸಂದಿದೆ.

ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುರೇಶ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ರಜತ್‌ ಗೆ ಕ್ಲಾಸ್‌ ತೆಗೆದುಕೊಂಡರು. ಅಂದು ಬಳಸಿದ ಮಾತುಗಳನ್ನು ಈಗ ಇಲ್ಲಿ ನನ್ನ ಎದುರು ಬಳಸಿ ನೋಡೋಣ. ಕೋಪದಲ್ಲಿದ್ದಾಗ ಇದೇ ಭಾಷೆ ಬಳಸುವೆ ಅನ್ನುತ್ತೀರಿ, ಈ ಮನೆಯಲ್ಲಿ ಕೋಪ ಬರುವ ಸನ್ನಿವೇಶ ಸಾಕಷ್ಟು ಬರುತ್ತವೆ, ಆಗೆಲ್ಲ ಹೀಗೆಯೇ ಮಾತನಾಡುತ್ತೀರಾ ಎಂದು ರಜತ್‌ ಗೆ ಬುದ್ಧಿವಾದ ಹೇಳಿದರು. 
 

ಬಿಗ್​ ಬಾಸ್​ ಕನ್ನಡ 11 ರಲ್ಲಿ ಇಬ್ಬರು  ವೈಲ್ಡ್​ ಕಾರ್ಡ್ ಎಂಟ್ರಿ ಬಳಿಕ ಮನೆಯ ಆಟ ಬದಲಾಗಿದೆ. ಶೋಭಾ ಶೆಟ್ಟಿ ಅವರು ಉಗ್ರಂ ಮಂಜು ಅವರಿಗೆ ನೀಡಿದ ಟಕ್ಕರ್‌ ಗೆ ತುಂಬಾ ಸ್ಟ್ರಾಂಗ್ ಸ್ಪರ್ಧಿ ಎಂದು ವೀಕ್ಷಕರು ಅಭಿಪ್ರಾಯ ಪಟ್ಟರು. ಇದೆಲ್ಲದರ ನಡುವೆ ಮತ್ತೊಬ್ಬ ವೈಲ್ಡ್​ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್‌ ಟಾಸ್ಕ್​ ವೇಳೆ ಸುರೇಶ್ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದರು. ಇದಕ್ಕೆ ವೀಕೆಂಡ್‌ ನಲ್ಲಿ ಸುದೀಪ್‌ ಪ್ರಶ್ನಿಸಬೇಕೆಂದು ಒತ್ತಾಯ ಕೇಳಿಬಂದಿತ್ತು. ಅದರಂತೆ ರಜತ್‌ ಗೆ ಸುದೀಪ್‌ ಕ್ಲಾಸ್ ತೆಗೆದುಕೊಂಡಿದ್ದಾರೆ.

Tap to resize

ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ ಎಂದು ಕ್ಷಮೆ ಕೇಳಿ ಮತ್ತೆ ರಿಪೀಟ್ ಆಗುವುದಿಲ್ಲ ಎಂದರು.  ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಈ ರೀತಿಯ ಸಿಲ್ಲಿ ಕಾರಣಕ್ಕೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಹೊರ ಹೋಗಬೇಡಿ. ಎಂದು ಎಲ್ಲರಿಗೂ ಕಿಚ್ಚ ಎಚ್ಚರಿಕೆ ಕೂಡ ನೀಡಿದರು. ಹೊರಗಡೆಯಿಂದ ಮನೆಗೆ ಬಂದ ರಜತ್, ‘ಶೋ ಟಿಆರ್​ಪಿ ಚೆನ್ನಾಗಿದೆ  ಎಂದಿದ್ದರು. 

ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ ಎಂದು ಕ್ಷಮೆ ಕೇಳಿ ಮತ್ತೆ ರಿಪೀಟ್ ಆಗುವುದಿಲ್ಲ ಎಂದರು.  ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಈ ರೀತಿಯ ಸಿಲ್ಲಿ ಕಾರಣಕ್ಕೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಹೊರ ಹೋಗಬೇಡಿ. ಎಂದು ಎಲ್ಲರಿಗೂ ಕಿಚ್ಚ ಎಚ್ಚರಿಕೆ ಕೂಡ ನೀಡಿದರು. ಇದಕ್ಕೆ ಕೋಪ ವ್ಯಕ್ತಪಡಿಸಿದ ಕಿಚ್ಚ ಹೊರಗಡೆಯದ್ದು ಒಳಗೆ ಹೇಳಲಿ ಎಂದು ಕಳಿಸಿಕೊಟ್ಟಿದ್ದಾ ? ಅದಕ್ಕೆ ರಜತ್ ಮತ್ತೊಮ್ಮೆ ರಿಪೀಟ್ ಮಾಡಲ್ಲ ಎಂದರು. ಅದಕ್ಕೆ ಸುದೀಪ್, ಮತ್ತೆ ಹಾಗೆ ಮಾಡಿದರೆ ಬಾಗಿಲು ತೆಗೆದು ಹೊರಗೆ ಕಳಿಸುತ್ತೇನೆ. ಬಾಗಿಲಿನ ಒಂದು ಕೀ ನನ್ನ ಹತ್ತಿರ ಇದೆ’ ಎಂದರು.
 

 ಕಳಪೆ ಕೊಟ್ಟಾಗಲೂ ರಜತ್‌ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ಹುಡುಗಿಯರ ಕೈ ಕೈ ಹಿಡಿದುಕೊಂಡು ಓಡಾಡಿದಂತೆ ಅಲ್ಲ. ಎಂದಿದ್ರು. ಇದನ್ನು ನಾನು ಶಿಶಿರ್‌ ಹೇಳಿದ್ದು  ಸುದೀಪ್ ಮುಂದೆಯೇ ರಜತ್ ನೇರವಾಗಿ ಹೇಳಿದ್ರು. ಈ ಮಾತು ಹೇಳಿ ಐಶ್ವರ್ಯಾ ಶಾಕ್ ಆದ್ರು. ಕಳಪೆ ಕೊಡೋಕು ಕಾರಣವಿದೆ ಎಂದು ಐಶ್ವರ್ಯಾ ತಿರುಗೇಟು ಕೊಟ್ರು. ಸುದೀಪ್‌ ಕೂಡ ರಜತ್‌ ಗೆ ನೀವು ಮಾತುಗಳು ಆಡದಿದ್ದಿದ್ದರೆ ಕಳಪೆಗೆ ತೆಗೆದುಕೊಂಡ ಕಾರಣ ಬೇರೆ ಇರುತ್ತಿತ್ತು. ಗೇಮ್‌ ಬೇರೆತರ ಇರುತ್ತಿತ್ತು ಎಂದರು.

 ಶನಿವಾರದ ಎಪಿಸೋಡ್​ನಲ್ಲಿ ವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆಯನ್ನು ಮಂಜು ಅವರಿಗೆ ನೀಡಿದ್ದಾರೆ. ಪ್ರಸ್ತುತ ಮನೆಯ ಕ್ಯಾಪ್ಟನ್‌ ಆಗಿದ್ದು, ಟಾಸ್ಕ್​ನಲ್ಲಿ ಉಗ್ರಂ ಮಂಜು ಗೇಮ್ ಚೇಂಜರ್‌ ಆಗಿದ್ದಾರೆ. ಪ್ರತಿ ವಾರದ ಟಾಸ್ಕ್‌ಗಳಲ್ಲಿ ಗೇಮ್‌ ಚೇಂಜರ್‌ ಆಗಿ ಎಲ್ಲರಿಗೂ ಬಿಸಿ ಮುಟ್ಟಿಸ್ತಾ ಇದ್ದಾರೆ. 

BBK211

ಅಳತೆ ಕಳುಹಿಸಿ ನಮ್ಮ ಡಿಸೈನರ್‌ ಕಡೆಯಿಂದ ಬಟ್ಟೆ ಕಳುಹಿಸುತ್ತೇನೆ ಎಂದು ಸುದೀಪ್‌ ಕಳೆದವಾರ ಬಿಬಿಕೆ ಮನೆಯ ಹನುಂತಗೆ ಹೇಳಿದ್ದರು. ಅದರಂತೆ ಕಿಚ್ಚ ಅವರು ಹನುಮಂತಗೆ ಬಟ್ಟೆ , ಚಪ್ಪಲಿ ಸೇರಿ ಹಲವು ಬಗೆಯ ಬಟ್ಟೆಗಳನ್ನು ಕಳುಹಿಸಿದ್ದು, ಇಂದ ಹನುಮಂತ ಜುಬ್ಬಾ ಧರಿಸಿದ್ದರು.

Latest Videos

click me!