ಬಿಗ್‌ಬಾಸ್‌ ಕನ್ನಡ 11: ತ್ರಿವಿಕ್ರಮ್‌ ಹೊಸ ಕ್ಯಾಪ್ಟನ್‌, 'ನಾನು ಉತ್ತಮ' ಜೈಲಿನ ಗೋಡೆ ಮೇಲೆ ಕೆತ್ತಿದ ಧನ್‌ರಾಜ್!

First Published | Nov 9, 2024, 12:44 AM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ತ್ರಿವಿಕ್ರಮ್‌ ಹೊಸ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಭವ್ಯಾ, ಸುರೇಶ್ ಮತ್ತು ಧನ್‌ರಾಜ್‌ ಕಳಪೆ ಸ್ಪರ್ಧಿಗಳೆಂದು ಆಯ್ಕೆಯಾದರು. ಐಶ್ವರ್ಯಾ ಮತ್ತು ಶಿಶಿರ್ ನಡುವಿನ ಕ್ಲೋಸ್‌ನೆಸ್ ಹೆಚ್ಚಾಗುತ್ತಿದೆ.

ಬಿಗ್‌ಬಾಸ್‌ ಕನ್ನಡ 11ರ ಕ್ಯಾಪ್ಟನ್‌ ಆಯ್ಕೆ ಮಾಡಲಾಗಿದೆ. 40 ನೇ ದಿನ ತ್ರಿವಿಕ್ರಮ್‌ ಅವರನ್ನು ಮನೆಯ ಕ್ಯಾಪ್ಟನ್‌ ಆಗಿ ನೇಮಕ ಮಾಡಲಾಗಿದೆ. ಮನೆಯ ಕ್ಯಾಪ್ಟನ್‌ ಆಗಲು ಬಿಗ್‌ಬಾಸ್‌ ಇಬ್ಬರ ಫೋಟೋಗಳನ್ನು ಇಟ್ಟು ಮಸಿ ಬಳಿಯುವ ಟಾಸ್ಕ್‌ ನೀಡಲಾಗಿತ್ತು. ಇದರಲ್ಲಿ ಮಂಜು, ಗೌತಮಿ ಹೆಚ್ಚು ಬಾರಿ ಕಪ್ಪು ಬಣ್ಣದ ಬಾಟಲ್‌ ಪಡೆದು ಭವ್ಯಾ ಅವರನ್ನೇ ಟಾರ್ಗೆಟ್‌ ಮಾಡಿ ಬಣ್ಣ ಬಳಿದರು. ಮನೆಯ ಯಾವೊಬ್ಬ ಸದಸ್ಯನೂ ತ್ರಿವಿಕ್ರಮ್‌ ಫೋಟೋದ ಮೇಲೆ ಕಪ್ಪು ಬಣ್ಣ ಬಳಿಯದೇ ಭವ್ಯಾ ಅವರನ್ನೆ ಟಾರ್ಗೆಟ್‌ ಮಾಡಿದರು.

ಮನೆಯ ಉತ್ತಮ ಮತ್ತು ಕಳಪೆ ಆಯ್ಕೆಯಲ್ಲಿ ಈ ವಾರದ ಭವ್ಯಾ ಅವರಿಗೆ 6 ಓಟುಗಳು ಲಭಿಸಿತು. ಜೊತೆಗೆ ಭವ್ಯಾ ಅವರು ಮನೆಯ ಉತ್ತಮ ಎನಿಸಿಕೊಂಡರು. ಮಿಕ್ಕಂತೆ ಮಂಜು, ಗೌತಮಿ, ಧರ್ಮ ಉತ್ತಮ ಓಟು ಪಡೆದರು. ಇನ್ನು ಮನೆಯಲ್ಲಿನ ಈ ವಾರದ ಕಳಪೆ ಸುರೇಶ್ ಮತ್ತು ಧನ್‌ರಾಜ್‌ ಅವರಿಗೆ ಲಭಿಸಿ ಜೈಲು ಸೇರಿದರು.

Tap to resize

ಕಳಪೆಗೆ ರೀಸನ್ ಕೊಡುವಾಗ ಸುರೇಶ್ ಮತ್ತು ಧನ್‌ರಾಜ್‌ ಅವರಿಗೆ ಮನೆ ಮಂದಿ ನೀಡಿದ ಕಾರಣ ವೀಕ್ಷಕರಿಗೂ ಹಿಡಿಸಲಿಲ್ಲ. ಯಾಕೆಂದರೆ ಮನೆಯಲ್ಲಿ ಅತ್ಯಂತ ಕಳಪೆ ಅವರಿಬ್ಬರೇ ಅಲ್ಲ. ಸ್ಪರ್ಧಿಗಳಿಗೆ ಕಾರಣ ಕೊಡಲು ಗೊತ್ತಿಲ್ಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 
 

ಕಳಪೆಗೆ ಕಾರಣ ಕೊಟ್ಟಾಗ ಧನ್‌ರಾಜ್‌ ಈ ಬಾರಿ ಕೂಡ ಮನೆಯವರ ಬಾಯಿಗೆ ಆಹಾರವಾದರು. ಕಳಪೆಗೆ ಕೊಟ್ಟ ಕಾರಣಕ್ಕೆ ಸರಿಯಾಗಿ ತಿರುಗೇಟು ಕೊಡಲು ವಿಫಲವಾಗಿ ಬೇಸರ ಮಾಡಿಕೊಂಡರು. ಹೌದು ನಾನು ವಾದ ಮಾಡಿ ನನ್ನನ್ನು ಡಿಫೆಂಡ್ ಮಾಡಿಕೊಂಡಿಲ್ಲ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ ಧನು, ನಾನು ಜಾಯಿಂಟ್ ಫ್ಯಾಮಿಲಿಯಲ್ಲಿ ಬೆಳೆದವನು. ಹಾಗಾಗಿ ನನಗೆ ಈ ರೀತಿ ಮಾತನಾಡಲು ಮನಸ್ಸು ಬರಲ್ಲ. ಹೆಣ್ಣು ಮಕ್ಕಳ ವಿರದ್ಧ ಮಾತನಾಡಿ ನನಗೆ ಗೊತ್ತಿಲ್ಲ ಎಂದರು.

ಇನ್ನು ಕಳಪೆ ಪಡೆದು ಜೈಲಿಗೆ ಹೋದ ಸುರೇಶ್ ಮತ್ತು ಧನ್‌ರಾಜ್‌ ಇಬ್ಬರೂ ಬೇಸರ ಮಾಡಿಕೊಂಡರು. ಜೊತೆಯಲ್ಲಿದ್ದವರು ಮಿತ್ರ ದ್ರೋಹಿಗಳು ಆದಾಗ ಏನೇನೋ ಆಗುತ್ತೆ ಎಂದು ಸುರೇಶ್ ಜೈಲಿಗೆ ಹೋಗುವಾಗ ಮಾತನಾಡಿದರು.  ನಾವು ಅಂತಹ ತಪ್ಪು ಏನು ಮಾಡಿದೆವು ಎಂದು ಚರ್ಚಿಸಿದರು. ಕೊನೆಗೆ ರಾತ್ರಿ ನಿದ್ದೆ ಬರದ ಧನು ಸುರೇಶ್ ಮಲಗಿದ ಬಳಿಕ ಎಚ್ಚರವೇ ಇದ್ದು, ಗೋಡಲ್ಲಿ ನಾನು ಉತ್ತಮ ಎಂದು ಗೋಡೆಯ ಮೇಲೆ ಕೆತ್ತಿದರು.  

ಇನ್ನು ಮನೆಯಲ್ಲಿ ಐಶ್ವರ್ಯಾ ಸಿಂಧೋಗಿ  ಮತ್ತು  ಶಿಶಿರ್ ಹೆಚ್ಚು ಕ್ಲೋಸ್‌ ಆಗತ್ತಿದ್ದು, ಇಂದಿನ ಎಪಿಸೋಡ್ ನಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕಥೆ ಗಮನ ಸೆಳೆದಿದೆ. ‘ಹುಡುಗ ನನ್ನ ಹಾಗೆ ಇದ್ದರೆ ಓಕೆನಾ?’ ಎಂದು ಶಿಶಿರ್ ಕೇಳಿದ್ದಾರೆ. ‘ಸೇಮ್ ನಿಮ್ಮ ರೀತಿ ಇದ್ದರೆ ಓಕೆ. ಸ್ವಲ್ಪವೂ ಬದಲಾವಣೆ ಇರಬಾರದು’ ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರು ಅಕ್ಕಪಕ್ಕ ಕುಳಿತಿದ್ದರು. ಅವರಿಬ್ಬರು ಪರಸ್ಪರ ದೃಷ್ಟಿ ಬೆರೆಸುವ ಪರಿ ಕಂಡು ಐಶ್ವರ್ಯಾ ಮತ್ತು ಶಿಶಿರ್ ಅವರು ಕಣ್ಣರಳಿಸಿದ್ದಾರೆ. ‘ನಾನು ಕೂಡ ನಿನ್ನನ್ನು ಹಾಗೇ ನೋಡಲೇ?’ ಎಂದು ಶಿಶಿರ್ ಅವರು ಐಶ್ವರ್ಯಾಗೆ ಕೇಳಿದ್ದು,  ‘ಹೀಗೆಲ್ಲ ನೋಡಿದರೆ ಕೃತಕ ಎನಿಸುತ್ತದೆ’ ಎಂದಿದ್ದಾರೆ ಐಶ್ವರ್ಯಾ 

Latest Videos

click me!