ಮಿನಿ ಡ್ರೆಸ್ ಜೊತೆ ಹೈ ಹೀಲ್ಸ್… ಅನುಪಮಾ ಗೌಡ ಅಂದವನ್ನು ಚಂದ್ರನಿಗೆ ಹೋಲಿಕೆ ಮಾಡಿದ ಫ್ಯಾನ್ಸ್

Published : Nov 12, 2024, 08:25 PM ISTUpdated : Nov 13, 2024, 07:02 AM IST

ಕನ್ನಡದ ಜನಪ್ರಿಯ ನಿರೂಪಕಿ, ನಟಿ ಅನುಪಮಾ ಗೌಡ, ಮಿನಿ ಡ್ರೆಸ್, ಹೈ ಹೀಲ್ಸ್ ಧರಿಸಿ ಮುದ್ದಾದ ಫೋಟೊ ಶೂಟ್ ಮಾಡಿಸಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.   

PREV
17
ಮಿನಿ ಡ್ರೆಸ್ ಜೊತೆ ಹೈ ಹೀಲ್ಸ್… ಅನುಪಮಾ ಗೌಡ ಅಂದವನ್ನು ಚಂದ್ರನಿಗೆ ಹೋಲಿಕೆ ಮಾಡಿದ ಫ್ಯಾನ್ಸ್

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ (Anupama Gowda), ತಮ್ಮ ಜೀವನದ ಅತಿ ದೊಡ್ಡ ಕನಸು ನನಸು ಮಾಡಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಅನುಪಮಾ ತಮ್ಮ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮುಗಿಸಿದ್ದರು. 
 

27

ರಾಜಾ ರಾಣಿ ರೀಲೋಡೆಡ್ (Raja Rani Reloaded) ಬಳಿಕ ಯಾವುದೇ ಕಾರ್ಯಕ್ರಮಗಳಲ್ಲೂ ಅನುಪಮಾ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ನಟಿ ತಮ್ಮ ಹೊಸ ಹೊಸ ಫೋಟೊ ಶೂಟ್, ವಿಡೀಯೋಗಳ ಮೂಲಕ ಸುದ್ದಿ ಮಾಡುತ್ತಿರುತ್ತಾರೆ. 

37

ಕಳೆದ ಕೆಲವು ದಿನಗಳಿಂದ ಗೃಹಪ್ರವೇಶದ ಸುಂದರ ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡುತ್ತಿದ್ದರು, ಬೇರೆ ಬೇರೆ ಸೀರೆಯಲ್ಲಿ ವಿವಿಧ ಫೊಟೋ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. 
 

47

ಇದೀಗ ಸೀರೆ ಸೈಡಿಗಿಟ್ಟು ಮಿನಿ ಡ್ರೆಸ್ ಧರಿಸಿ, ಕಾಲಿಗೆ ಹೈ ಹೀಲ್ಸ್ ಚಪ್ಪಲ್ ಧರಿಸಿ, ತುಂಬಾನೆ ಮುದ್ದು ಮುದ್ದಾಗಿ ಅನುಪಮಾ ಪೋಸ್ ಕೊಟ್ಟಿದ್ದು, ಇವರ ಮುದ್ದಾದ ಲುಕ್ ನೋಡಿ, ಅಭಿಮಾನಿಗಳು ಕವಿಗಳಾಗಿ, ಕವನಗಳನ್ನೇ ಗೀಚಿದ್ದಾರೆ. 
 

57

ಬಿಳಿ ಬಣ್ಣದ ಮಿನಿ ಡ್ರೆಸ್ ಮೇಲೆ ಕೆಂಪು, ಆರೆಂಜ್, ಹಸಿರು ಬಣ್ಣದ ಫ್ಲೋರಲ್ ಚಿತ್ತಾರ ಇರುವ ಡ್ರೆಸ್ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಅನು ಹೂನಗು ಚೆಲ್ಲುತ್ತಿದ್ರೆ, ಅಭಿಮಾನಿಗಳು ಈಕೆ ಚಂದಿರನನ್ನು ನಾಚಿಸುವಷ್ಟು ಸುಂದರಿ ಎಂದಿದ್ದಾರೆ. 
 

67

ಅಷ್ಟೇ ಅಲ್ಲ ಒಬ್ಬರು ಕಾಮೆಂಟ್ ಮಾಡಿ, ಮೇಡಂ ಮೊದಲು ನಿಮ್ಮ ಸ್ಕಿನ್ ಟೋನ್ ಡಾರ್ಕ್ ಆಗಿತ್ತು, ಈವಾಗ ಇಷ್ಟೊಂದು ಫೇರ್ ಆಗೋದಕ್ಕೆ ಕಾರಣ ಏನು? ಅಂತಾನೂ ಕೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ನಿಮ್ಮ ಹೋಮ್ ಟೂರ್ ಮಾಡಿ ಅಂತ ಕೇಳಿದ್ದಾರೆ. 
 

77

ಅಕ್ಕ ಧಾರಾವಾಹಿಯ (Akka serial) ಮೂಲಕ ನಟನೆ ಆರಂಭಿಸಿದ ಅನುಪಮಾ ಗೌಡ, ನಂತ್ರ ಒಂದಿಷ್ಟು ಸಿನಿಮಾಗಳಲ್ಲೂ, ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿದ್ದರು. ಸದ್ಯ ನಿರೂಪಕಿಯಾಗಿ ಬ್ಯುಸಿಯಾಗಿದ್ದಾರೆ ಅನುಪಮಾ. ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್  ಮೊದಲಾದ ಕಾರ್ಯಕ್ರಮಗಳಲ್ಲಿ ಅನುಪಮಾ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 
 

Read more Photos on
click me!

Recommended Stories