ಅಮೃತಧಾರೆಯಿಂದ‌ ನಾಪತ್ತೆಯಾಗಿರೋ ಸಾರಾ ಅಣ್ಣಯ್ಯ ಸನ್ಯಾಸಿ ಆಗ್ಬಿಟ್ರಾ?

First Published | Oct 7, 2024, 1:47 PM IST

ಅಮೃತಧಾರೆ ಧಾರಾವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ನಟಿ ಸಾರಾ ಅಣ್ಣಯ್ಯ ಹಣೆಯಲ್ಲಿ ಮೂರು ನಾಮ ಹಾಕೊಂದು ಭಕ್ತಿಯಲ್ಲಿ ಕಳೆದೋಗಿರೋದು ನೋಡಿದ್ರೆ ಸನ್ಯಾಸಿ ಆಗ್ಬಿಟ್ರಾ ಅನಿಸುತ್ತೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhare Serial) ಕಥೆಗಳು ವೇಗವಾಗಿ ಸಾಗುವ ಮೂಲಕ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಪಾತ್ರಗಳು ಸಹ ಇಲ್ಲಿ ತುಂಬಾನೆ ಪ್ರಾಮುಖ್ಯತೆ ಪಡೆದಿರುವಂತೆ ಮಹಿಮಾ ಪಾತ್ರವೂ ತುಂಬಾನೆ ಮಹತ್ವ ಪಡೆದ ಪಾತ್ರವಾಗಿದೆ. 
 

ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ. ಮೊದಲಿಗೆ ನೆಗೆಟಿವ್ ಶೇಡ್ ನಲ್ಲಿ (Negative shade)ನಟಿಸಿದ್ದ ನಟಿ, ಜೀವಾ ಜೊತೆ ಮದುವೆಯಾದ ಬಳಿಕ ನಿಧಾನವಾಗಿ ಬದಲಾಗುತ್ತಾ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರಿಂದ ಹೊಗಳಿಕೆ ಕೂಡ ಪಡೆದಿದ್ದರು. 
 

Tap to resize

ಆದರೆ ಇತ್ತೀಚಿನ ದಿನಗಳಲ್ಲಿ ಮಹಿಮಾ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳೋದೆ ಕಡಿಮೆಯಾಗಿದೆ. ಯಾವಾಗ ಜೈದೇವ್ - ಮಲ್ಲಿ ವಿಷ್ಯ ಆರಂಭವಾಯ್ತೋ, ಆವಾಗಿನಿಂದ ಸೀರಿಯಲ್ ನಲ್ಲಿ ಹೆಚ್ಚು ಹೈಲೈಟ್ ಆಗ್ತಿರೋದು ಜೈ-ಮಲ್ಲಿ ಮಾತ್ರ, ಭೂಮಿಕಾ ಮನೆಯವರು ಕಾಣಿಸಿಕೊಳ್ಳೋದೇ ಇಲ್ಲ. 
 

ವೀಕ್ಷಕರು ಹಲವಾರು ಭಾರಿ ಮಹಿಮಾ ಮತ್ತು ಜೀವಾ ಎಲ್ಲಿ ಎನ್ನುವ ಪ್ರಶ್ನೆಗಳನ್ನು ಕೇಳಿದ್ದುಂಟು. ಕೊನೆಗೆ ಮಲ್ಲಿ ಸೀಮಂತದಲ್ಲಾದ್ರೂ ಮಹಿಮಾ ಕಾಣಿಸಿಕೊಳ್ಳುತ್ತಾಳೆ ಅಂದ್ರೆ ಅದೂ ಕೂಡ ಆಗಿಲ್ಲ. ಸಾರಾ (Sara Annaiah) ಸೀರಿಯಲ್ ನಲ್ಲಿ ಕಾಣಿಸಿಕೊಳ್ಳದ್ದನ್ನ ನೋಡಿ, ಆಕೆ ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದು ಎನ್ನುವ ಗುಸುಗುಸು ಸಹ ಜೋರಾಗಿಯೇ ಕೇಳಿ ಬಂದಿತ್ತು. 
 

ಬಿಗ್ ಬಾಸ್ ಆರಂಭದ ಪ್ರೊಮೋದಲ್ಲಿ ಬ್ಲರ್ ಇಮೇಜ್ ನೋಡಿ, ಸಾರಾ ಅಣ್ಣಯ್ಯ ಬಿಗ್ ಬಾಸ್ ಗೆ ಬರೋದು 100% ಎಂದಿದ್ದರು ಜನ. ಆದರೆ ಅದೂ ಆಗಿಲ್ಲ. ಸಾರಾ ಸೀರಿಯಲ್ ಬಿಟ್ಟು ಹೊರ ನಡೆದ್ರಾ ಅಂದ್ರೆ ಅದು ಗೊತ್ತಿಲ್ಲ. ಇದೆಲ್ಲದರ ಮಧ್ಯೆ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಒಂದಷ್ಟು ವಿಶೇಷ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. 
 

ಹೌದು ಸಾರಾ ಅಣ್ಣಯ್ಯ ತಮ್ಮ ಇನ್’ಸ್ಟಾಗ್ರಾಂ (Instagram) ಹ್ಯಾಂಡಲ್ ನಲ್ಲಿ ಪಿಂಕ್ ಬಣ್ಣದ ಸೀರೆಯುಟ್ಟ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ಸಾರಾ ದೇವಸ್ಥಾನವೊಂದರಲ್ಲಿ ಭಕ್ತಿಯಲ್ಲಿ ಕಳೆದು ಹೋಗಿರುವಂತೆ ಕಾಣಿಸ್ತಿದೆ. ಅಲ್ಲದೇ ಸಾರಾ ಹಣೆಯ ಮೇಲೆ ತಿರುಪತಿಯ ನಾಮವೂ ಇದೆ, ಕೈಯಲ್ಲಿ ಹೂವುಗಳನ್ನು ಹಿಡಿದು ಕಳೆದು ಹೋಗಿದ್ದಾರೆ. 
 

ಇದನ್ನ ನೋಡಿದ್ರೆ ಸಾರಾ ನಟನೆಯಾನ್ನು ಬಿಟ್ಟು ಸನ್ಯಾಸಿ ಆಗ್ಬಿಟ್ರಾ ಎಂದು ಅನಿಸದೇ ಇರದು. ಈ ಫೋಟೊ ಎಲ್ಲಿ  ತೆಗೆಸಿಕೊಂಡಿದ್ದು ಅನ್ನೋದು ಸರಿಯಾಗಿ ತಿಳಿದು ಬಂದಿಲ್ಲ. ಆದರೆ ಸಾರಾ ಸೋಶಿಯಲ್ ಮೀಡಿಯಾ ಅಪ್ ಡೇಟ್ಸ್ ಗಳನ್ನ ನೋಡಿದ್ರೆ, ಸಾರಾ ತಮ್ಮ ಫ್ಯಾಮಿಲಿ ಜೊತೆ ದೇಗುಲ ದರ್ಶನಕ್ಕೆ ಹೋಗಿರುವಾಗ ತೆಗೆದಂತಹ ಫೋಟೊಗಳು ಇವು. ಕೆಲವರು ಇದು ಮೇಲು ಕೋಟೆಯಲ್ಲಿ ತೆಗೆದಂತಹ ಫೋಟೊ ಅಂತ ಹೇಳ್ತಿದ್ದಾರೆ. ನಟಿ ಸನ್ಯಾಸಿಯಂತೂ ಆಗಿಲ್ಲ ಅನ್ನೋದು ನಿಜಾ. ಆದರೆ ಸೀರಿಯಲ್ ನಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ತಾರೆ ಅನ್ನೋದು ಮಾತ್ರ ಕಾದು ನೋಡಬೇಕು. 
 

Latest Videos

click me!