ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್ (Paaru Serial)ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಪಾರು ಅಂತಾನೇ ಅಭಿಮಾನಿಗಳಿಂದ ಗುರುತಿಸಿಕೊಂಡು, ಬಳಿಕ ಬಿಗ್ ಬಾಸ್ ಸೀಸನ್ 11 ರಲ್ಲಿ ಟಫ್ ಕಾಂಪಿಟೀಶನ್ ನೀಡುವ ಮೂಲಕ ಟಾಪ್ 5 ಸ್ಪರ್ಧಿಯಾಗಿ ಸದ್ದು ಮಾಡಿದ ಬೆಡಗಿ ಮೋಕ್ಷಿತಾ ಪೈ.
26
ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಮೋಕ್ಷಿತಾ (Mokshitha Pai) ಸಂದರ್ಶನ ನೀಡೋದ್ರಲ್ಲಿ, ಹಾಗೂ ಗೆಳತಿ ಮಾನ್ಸಿ ಜೋಶಿ ಮದುವೆ ಸಮಾರಂಭದಲ್ಲಿ ಪೂರ್ತಿಯಾಗಿ ಬ್ಯುಸಿಯಾಗಿದ್ದರು. ಇದೀಗ ಎಲ್ಲಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ನಟಿ ಮೋಕ್ಷಿತಾ ಪೈ ಬಾಲಿಗೆ ತೆರಳಿದ್ದಾರೆ.
36
ನಟಿ ಮೋಕ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ಬಾಲಿಯ ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದು, Paradise found ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಬಾಲಿಯ ಸುಂದರ ತಾಣಗಳನ್ನು ಎಕ್ಸ್ ಪ್ಲೋರ್ ಮಾಡಿದ್ದು, ಅಭಿಮಾನಿಗಳು ಮೋಕ್ಷಿತಾ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.
46
ಮೋಕ್ಷಿತಾ ಪೈ ಕಪ್ಪು ಬಿಳುಪಿನ ಬಾಡಿ ಹಗ್ಗಿಂಗ್ ಮಾಕ್ಸಿ ಡ್ರೆಸ್ ಧರಿಸಿದ್ದು, ಜೊತೆಗೆ ಹ್ಯಾಟ್ ಧರಿಸಿದ್ದಾರೆ. ಈ ಸ್ಟೈಲಿಶ್ ಲುಕ್ ನಲ್ಲಿ ಮೋಕ್ಷಿತಾ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಹಿನ್ನೆಲೆಯಲ್ಲಿರುವ ಪ್ರಕೃತಿಯೂ ಅಷ್ಟೇ ಸುಂದರವಾಗಿದ್ದು, ಇಬ್ಬರ ಕಾಂಬಿನೇಶನ್ ನೋಡೋದಕ್ಕೆ ಸೂಪರ್ ಆಗಿದೆ.
56
ಮೋಕ್ಷಿತಾ ಪೈ ಫೋಟೊ ನೋಡಿ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ ಕ್ವೀನ್ ಈಸ್ ಕ್ವೀನಿಂಗ್ ಎಂದಿದ್ದಾರೆ. ಅಲ್ಲದೇ ಆಕೆ ಭಾರತದಲ್ಲಿದ್ರೂ, ವಿದೇಶದಲ್ಲಿದ್ರೂ ರಾಣಿ ರಾಣಿನೇ ಎಂದು ಹೇಳಿದ್ದಾರೆ. ಜೊತೆಗೆ ಬ್ಯೂಟಿಫುಲ್, ಮೋಕ್ಷಿ ಅಂದ್ರೆ ನಮ್ಮ ಎಮೋಷನ್, ಅಮೇಜಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ.
66
ಕರಿಯರ್ ವಿಚಾರಕ್ಕೆ ಬರೋದಾದ್ರೆ ಮೋಕ್ಷಿತಾ ಪೈ ಜಯರಾಮ್ ಗಂಗಪ್ಪನಹಳ್ಳಿ ನಿರ್ಮಾಣ ಮತ್ತು ಧನುಷ್ ಗೌಡ.ವಿ ನಿರ್ದೇಶನ ಮಾಡುತ್ತಿರುವ ‘ಮಿಡಲ್ ಕ್ಲಾಸ್ ರಾಮಾಯಣ’ (Middle Class Ramayana) ಸಿನಿಮಾಗೆ ಸಹಿ ಹಾಕಿದ್ದಾರೆ. ಶೀಘ್ರದಲ್ಲೇ ನಟಿ ದೊಡ್ಡ ತೆರೆಗೆ ಹಾರಲಿದ್ದಾರೆ. ಮೋಕ್ಷಿತಾ ಪೈಯವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.