bigg boss kannada 11 ತ್ರಿವಿಕ್ರಂಗೆ ಕ್ಲಾಸ್‌ ತೆಗೆದುಕೊಂಡು ಶೋಭಾ ಶೆಟ್ಟಿಗೆ ಟಾಂಟ್‌ ಕೊಟ್ಟ ಕಿಚ್ಚ!

Published : Dec 08, 2024, 01:08 AM IST

ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಶೋಭಾ ಶೆಟ್ಟಿ ಅವರ ನಿರ್ಗಮನದ ಬಗ್ಗೆ ತ್ರಿವಿಕ್ರಮ್ ಮತ್ತು ಗೌತಮಿ ಮಾತನಾಡಿಕೊಂಡಿದ್ದು ಕಿಚ್ಚನ ಕೋಪಕ್ಕೆ ಕಾರಣವಾಗಿದೆ. ಶೋಭಾ ಅವರ ನಿರ್ಗಮನದ ಬಗ್ಗೆ ಮಾಡಿದ ಚರ್ಚೆ ಮತ್ತು ಅದರ ಬಗ್ಗೆ ಕಿಚ್ಚ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

PREV
111
bigg boss kannada 11  ತ್ರಿವಿಕ್ರಂಗೆ ಕ್ಲಾಸ್‌ ತೆಗೆದುಕೊಂಡು ಶೋಭಾ ಶೆಟ್ಟಿಗೆ ಟಾಂಟ್‌ ಕೊಟ್ಟ ಕಿಚ್ಚ!

ಬಿಗ್‌ಬಾಸ್‌ ಸೀಸನ್‌ 11ರ ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ ನಲ್ಲಿ ಮನೆಯವರಿಗೆ ನಿರೂಪಕ ಸುದೀಪ್‌ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ತ್ರಿವಿಕ್ರಂ ಅವರಿಗೆ ತೆಗೆದುಕೊಂಡ ಕ್ಲಾಸ್‌ ಮಾತ್ರ ಮನೆಯ ಇತರರಿಗೂ ನಡುಕ ಹುಟ್ಟಿಸಿದ್ದಂತೂ ಸುಳ್ಳಲ್ಲ. ಕಳೆದವಾರ ಮನೆಯಿಂದ ಶೋಭಾ ಶೆಟ್ಟಿ ಹೊರಹೋಗಿದ್ದರು. ಕಿಚ್ಚನ ಬಳಿ ನನಗೆ ಆರೋಗ್ಯದ ಹದಗೆಡ್ಡಿದೆ, ನನಗೆ ಮುಂದುವರೆಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ್ದರು. ಆದರೆ ಶೋಭಾ ಅವರು ಉಳಿಯಬೇಕೆಂದು ಬರೋಬ್ಬರಿ 45 ನಿಮಿಷಗಳ ಕಾಲ ಪಾಠ ಮಾಡಿದ್ದರು ಕಿಚ್ಚ. ಆದರೆ ಇದ್ಯಾವುದನ್ನೂ ಕೇಳಿಸಿಕೊಳ್ಳದೆ ಶೋಭಾ ಹೊರ ನಡೆದಿದ್ದರು. ಈ ಬಗ್ಗೆ ತ್ರಿವಿಕ್ರಮ್ ಮತ್ತು ಗೌತಮಿ  ಮಾತನಾಡಿಕೊಂಡಿದ್ದರು. ಇಂದು ಕಿಚ್ಚನ ಕೋಪಕ್ಕೆ ಕಾರಣವಾಗಿತ್ತು.

211

ಶಿಶಿರ್‌ ಅವರನ್ನು ಉಳಿಸೋಕೆ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ತಾವಾಗಿ ಹೊರಬಂದರು ಎಂಬ ಅರ್ಥದಲ್ಲಿ ತ್ರಿವಿಕ್ರಂ ಅವರು ಗೌತಮಿ ಅವರ ಬಳಿ ಕಳೆದ ವಾರ ಎಪಿಸೋಡ್‌ ಮುಗಿದು ಶೋಭಾ ಮನೆಯಿಂದ ಹೊರ ಹೋದ ಬಳಿಕ ಅಡುಗೆ ಮನೆಯಲ್ಲಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.

311

ಸೀಸನ್‌ 10 ರಲ್ಲಿ ವರ್ತೂರು ಸಂತೋಷ್‌ ಇದೇ ರೀತಿ ಮನೆಗೆ  ಹೋಗುತ್ತೇನೆ ಎಂದು ಹಠ ಮಾಡಿ ಕುಳಿತಾಗ ಅವರ ತಾಯಿಯನ್ನು ಮನೆಗೆ ಕರೆಸಿದ ಬಿಗ್‌ಬಾಸ್‌ ಮನವೊಲಿಸಿದರು. ಕೊನೆಗೆ ವರ್ತೂರು ಫಿನಾಲೆವರೆಗೂ ಬಂದಿದ್ದರು. ಶೋಭಾ ಅವರ ತಾಯಿಯನ್ನು ಕರೆಸಿ ಮಾತನಾಡಿಸಬಹುದಿತ್ತಲ್ಲ?  ಜೊತೆಗೆ ಗೋಲ್ಡ್‌ ಸುರೇಶ್ ಮನೆಗೆ ಹೋಗುತ್ತೇನೆಂದಾಗ ಕಳುಹಿಸಲಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯವಾಗಿತ್ತು.

411

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ತ್ರಿವಿಕ್ರಂ ಮತ್ತು ಗೌತಮಿ ಮಾತನಾಡಿದ ಸಂಭಾಷಣೆಯ ವಿಡಿಯೋವನ್ನು ಪ್ಲೆ ಮಾಡಲಾಯ್ತು. ವಿಡಿಯೋ ಮುಗಿಯುತ್ತಿದ್ದಂತೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳೋಕೆ ಆರಂಭಿಸಿದರು. ಬಿಗ್‌ಬಾಸ್‌ ನ ಇಬ್ಬರು ಜಡ್ಜ್‌ಗಳು ಏನಾದರೂ ಹೇಳುವುದು ಇದೆಯಾ? ಎಂದು ಹೇಳಿದರು. ಇಲ್ಲ ಎಂದುಇಬ್ಬರು ಉತ್ತರಿಸಿದಾಗ ಹೇಳುವುದು ಉತ್ತಮ ಎಂದು ವಾರ್ನ್ ಮಾಡಿದಂತೆ ಮಾತನಾಡಿದರು ಕಿಚ್ಚ.
 

511

ನಿಮಗೆ ಶಿಶಿರ್ ಹೋಗಬೇಕಾ? ಡೈರೆಕ್ಟ್ ಆಗಿ ಕಳುಹಿಸಿ. ಶಿಶಿರ್‌ ನ ಸೇವ್‌ ಮಾಡಲು ಶೋಭಾ ಹೋಗಲಿಲ್ಲ. ಶೋಭಾ ಹೋಗಿದ್ಯಾಕೆ? ಈ ವೇದಿಕೆ ಮೇಲೆ ಏನೇನು ನಡೀತು. ಯಾಕೆ ಅವರನ್ನು ಹೊರಗೆ ಕಳುಹಿಸಿದೆವು?  ಯಾವ ಸಂದರ್ಭದಲ್ಲಿ ಹೊರಗೆ ಕಳುಹಿಸಿದ್ದೆವು. ಗೊತ್ತಿದ್ದ ಮೇಲೆ, ಹೇಗೆ? ಅವರು ಹೇಗೆ ಹೋದ್ರು? ಗೌತಮಿ ನೀವು ಹೇಳಿ ಎಂದು ಕೇಳಿದರು ಕಿಚ್ಚ. 

611

ಇದಕ್ಕೆ ಗೌತಮಿ ಸಬೂಬು ನೀಡಿ, ಹೌದು ಸರ್ ಈ ಮಾತುಗಳು ಬಂದಿದ್ದು ತ್ರಿವಿಕ್ರಮ್ ಅವರಿಂದ ಅವರ ತಲೆಯಲ್ಲಿ ಗೊಂದಲಗಳಿತ್ತು. ಅಲ್ಲಿ ನಡೆದ ಸಂದರ್ಭದ ವಿಚಾರ ತುಂಬಾ ಅನ್ ಎಕ್ಸ್ಪೆಕ್ಟೆಡ್‌ ಆಗಿತ್ತು ಎಂದೆ ಎಂದರು. ಇದಕ್ಕೆ ಸುದೀಪ್ ನೀವು ಆ ರೀತಿ ಹೇಳಿಲ್ಲ ಗೌತಮಿ ಅವರೇ, ಇಲ್ಲ ಸರ್‌ ಶೋಭಾ ಹೊರಡುತ್ತೀನಿ ಎಂದಿದ್ದು ಬಿಗ್‌ಬಾಸ್‌ ಗೆ ಸಪ್ರೈಸ್‌ ಆಗಿತ್ತು. ಆವಾಗ ಏನು ಮಾಡಬಹುದಿತ್ತು ಮಾಡಿದ್ದಾರೆ. 
ಸುದೀಪ್‌: ಅದು ಬಿಗ್‌ಬಾಸ್‌ ತೀರ್ಮಾನ ಅಲ್ಲ ನನ್ನ ತೀರ್ಮಾನ ಮೇಡಂ.

ವೇದಿಕೆ ಮೇಲೆ ನಿಮ್ಮನ್ನೆಲ್ಲ ಅಹಂನಲ್ಲಿ ಕೂರಲು ಬಿಟ್ಟು ನಾಯಿತರ ನಿಂತು ಕೊಂಡು ಮಾತನಾಡುತ್ತೀನಲ್ಲ. ಆವಾಗ ಅಲ್ಲೊಬ್ಬರಿಗೆ  45 ನಿಮಿಷ ಹೋಗಬೇಡಿ ಅಂತ ಉಪದೇಶ ಮಾಡುತ್ತೀನಲ್ಲ. ಮಾತುಕತೆ ಆಗಿ ಆಗಿ ಆಮೇಲೆ ಹೊರಗಡೆ ಹೋಗ್ತಾರೆ. ಏನ್‌ ಹೇಳ್ತೀರಾ ತ್ರಿವಿಕ್ರಂ ಅವರೇ?

711

ತ್ರಿವಿಕ್ರಂ: ಅಣ್ಣ, ಅದು ಕನ್ಫ್ಯೂಶನ್ ನಲ್ಲಿ ಇದ್ದೆ
ಕಿಚ್ಚ: ಏನಿಕ್ಕೆ ಕನ್ಫ್ಯೂಶನ್, ನಿಮ್ಮೆ ಎದುರೇ ನಡೆದಿದ್ದು ತಾನೆ?
ತ್ರಿವಿಕ್ರಂ: ನೀವು ಕೋಪ ಮಾಡಿಕೊಳ್ಳಲ್ಲ ಅಂದ್ರೆ 2 ನಿಮಿಷ ಮಾತಾಡ್ತಿನಿ ಅಣ್ಣ
ಕಿಚ್ಚ: ನಾನೇನು ಮಾಡಬೇಕು ನನಗೆ ಬಿಡ್ರಿ. ನಿಮ್ಮನ್ನು ಕೇಳಿ ಮಾಡಿಕೊಳ್ಳ ಬೇಕಾ ನಾನು? ಅಥವಾ ನನ್ನನ್ನು ಕೇಳಿ ನೀವು ಮಾಡ್ತಿರಾ? ನೀವು ನಿಮ್ಮ ಕೆಲಸ ಮಾಡಿ. ನನಗೆ ಹೇಳಿ ಕೊಡಲು ಬರಬೇಡಿ ನಾನು ಏನು ಮಾಡಬೇಕೆಂದು. ನಿಮ್ಮಗಳ ಮೇಲೆ ಕೋಪ ಮಾಡಿಕೊಂಡು ಟೈಂ ವೇಸ್ಟ್ ಮಾಡಿಕೊಳ್ಳಲ್ಲ ನಾನು. ಮನಸ್ಸು ನಮ್ಮದು, ಅದರೊಳಗಿರುವ ಜಾಗ ನಮ್ಮದು, ಸ್ಥಾನ ಕೊಡೋದು ನಾವು. ಕೊಟ್ಟ ತಕ್ಷಣ ಎಲ್ಲೆಲ್ಲಿಂದ ಡಿಸೈನ್‌  ಆಗಿ ಓಡುತ್ತೆ ತಲೆ ವ್ಹಾ , ನಾನು ಕಲಿಬೇಕು ನಿಮ್ಮತ್ರ ಎಲ್ಲ.
 

811

ನಾನು ಅಷ್ಟೊಂದು ನಿಂತುಕೊಂಡು ಶೋಭಾ ಅವರತ್ರ ಮಾತಾಡಿ ಆಗಿದೆ. ಎಷ್ಟು ಸಲ ಕೇಳಿದ್ದು ನಾನು. ಈಗ ಒಂದು ತೀರ್ಮಾನ ಮಾಡುವ, ಇನ್ಮೇಲೆ ನಾನು ಎಷ್ಟು ಹೊತ್ತು ವೇದಿಕೆಯಲ್ಲಿ ನಿಲ್ಲುತ್ತೇನೋ  ದಯವಿಟ್ಟು ಅಷ್ಟೊತ್ತು ನೀವೆಲ್ಲ ನಿಂತುಕೊಂಡೇ ಮಾತನಾಡಿ. ಇನ್ಮೇಲೆ ಯಾರು ಕುಳಿತುಕೊಳ್ಳಬೇಡಿ. ಶೋ ನಡೆಯೋ ತನಕ ಇವತ್ತಿಂದ ಸಂಡೇವರೆಗೂ ನಿಂತುಕೊಂಡೇ ಮಾತನಾಡಿ. ನಿಂತುಕೊಂಡು ಮಾತನಾಡುವ ನೋವು ನಿಮಗೆಲ್ಲರಿಗೂ ಅರ್ಥ ಆಗಬೇಕು. ಇಲ್ಲಿ ಕೆಲವರು ಇದಕ್ಕೆ ಸೂಕ್ತರಲ್ಲ. ನಾನು ಇದಕ್ಕೆ ಕ್ಷಮೆ ಕೇಳುತ್ತೇನೆ. 

911

ನಾನು ಈ ವೀಕೆಂಡ್‌ ಈ ಬಗ್ಗೆ ನಿಮ್ಮಲ್ಲಿ ಕೇಳಲು ಯೋಚಿಸಿದ್ದೆ. ಆದರೆ ಅದಕ್ಕೆ ಮುನ್ನವೇ ಗೌತಮಿ ಬಳಿ ಕೇಳಿದೆ ಅಷ್ಟೇ ಬಿಟ್ಟರೆ ಬೇರೆ ಯಾವು ಉದ್ದೇಶವು ಇಲ್ಲ. ನಿಮ್ಮ ಮುಂದೆ ತಲರ ತಗ್ಗಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು ತ್ರಿವಿಕ್ರಮ್‌ .

ಕಿಚ್ಚ: ನನ್ನ ಜೀವನದಲ್ಲಿ ಯಾರೇ ಆಗಲಿ, ಜೀವನದಲ್ಲಿ ಒಪ್ಪಿಕೊಂಡ ಮೇಲೆ ನಾವು ಅವರಿಗೆ ಹೇಳೋದೆ ತಲೆ ಎತ್ತಿ ನಡೆ ಅಂತ. ತಲೆ ತಗ್ಗಿಸಿರು ಅಂತ ನಾವು ಯಾರಿಗೂ ಹೇಳಿ ಕೊಟ್ಟಿಲ್ಲ. ಆ ಆಸೆಗಳು ನಮಗಿಲ್ಲ. ಇಲ್ಲಿ ಬಹುತೇಕರಿಗೆ ಯಾಕೆ ಕಳುಹಿಸಿದ್ದೇವೆ ಎಂಬ ಬೇಸಿಕ್‌ ಜ್ಞಾನ ನಿಮಗಿಲ್ಲ. ಆ ಹುಡುಗಿ ಶೋ ಬಿಟ್ಟು ಹೋಗಬೇಕಾದರೆ. ಯಾವ ಪರಿಸ್ಥಿತಿಯಲ್ಲಿ ಈ ಇಬ್ಬರನ್ನು  (ಶಿಶಿರ್‌ , ಐಶ್ವರ್ಯಾ)  ಬಿಟ್ಟು ಹೋದ್ರು ಅಂದ್ರೆ, ಇವರಿಬ್ಬರು ಇರೋತನಕ ಇದನ್ನು ಎತ್ತಿಕೊಂಡು ಇರಬೇಕು.
 

1011

ಎರಡು ವೈಲ್ಡ್ ಕಾರ್ಡ್ ಎಂಟ್ರಿ ಬಂದಿದ್ದಾರೆ. ಒಬ್ಬರು ನಿಂತುಕೊಂಡು ಆಟ ಆಡ್ತಿಲ್ವಾ? ಸಾಬೀತು ಮಾಡ್ತಿಲ್ವಾ? ಅವರು ಎಷ್ಟು ಚೆನ್ನಾಗಿ ಆಡುತ್ತಿದ್ದಾರೆ ಎಂಬುದು ನಿಮಗೆ ಕಾಣಿಸ್ತಿಲ್ವಾ? ನಿಮಗೆ ಆಟದ ವೈಖರಿ ಚೇಂಜ್ ಆಗಿರುವುದು ಚುಚ್ಚುತ್ತಿಲ್ವಾ? ಅದೇ ವೈಲ್ಡ್ ಕಾರ್ಡ್ ಎಂಟ್ರಿ ಜೊತೆಗೆ ಬಂದಿರುವವರು ಇಟರೆಸ್ಟ್ ಇಲ್ಲದೆ ಹೋಗಬೇಕು ಅಂತನೂ ಹೇಳುತ್ತಿಲ್ಲ. ಇದು ಯಾವು ಥರಹದ ಟಾರ್ಚರ್‌? ಎಂದು ಶೋಭಾ ಶೆಟ್ಟಿಗೆ ಟಾಂಟ್‌ ಕೊಟ್ಟಿದ್ದಾರೆ ಕಿಚ್ಚ.
 

1111

ಇದೇ ಗೊಂದಲ ನನಗೆ ಇದೆ ಅಂತ ಶನಿವಾರದವರೆಗೆ ಕಾದು ನೀವು ನನ್ನನ್ನು ಕೇಳಿದ್ದರೆ ನಿಮ್ಮನ್ನು ಹೊಗಳುತ್ತಿದ್ದೆ. ನಿಮ್ಮ ಎದುಗಡೆ ನಡೆದ ಮೇಲೂ ನಿಮಗೆ ಕಷ್ಟ ಎನ್ನವುದಾದರೆ ಎನು? ತ್ರಿವಿಕ್ರಮ್ ಅವರೇ ನೀವು ಗೊಂದಲದಲ್ಲಿ ನೋಡ್ತೀನಿ ಮಾತನಾಡಿಲ್ಲ. ಅದು ದೂರಿನಂತೆ ಇತ್ತು.  ಈ ಚಿಕ್ಕ ವಿಚಾರ ನನಗೆ ಅರ್ಥವಾಗುತ್ತಿಲ್ಲ ಅನ್ನುವುದಾದರೆ ಪ್ರತೀ ಶನಿವಾರ ಒಬ್ಬರ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗುತ್ತಿರಲಿಲ್ಲ ನನಗೆ. 10 ವರ್ಷ 11 ನೇ ಸೀಸನ್‌ ಆಗುತ್ತಿರಲಿಲ್ಲ. ಕಾಲು ನೋವು ಅಂತ ಇರುವವನಲ್ಲ. 10 ವರ್ಷ ಬಿಬಿಕೆ ನಡೆಸಿಕೊಟ್ಟವನಿಗೆ ನಿಂತುಕೊಳ್ಳುವ 10 ನಿಮಿಷ ದೊಡ್ಡದಲ್ಲ ನನಗೆ ಎ ಎಂದಿದ್ದಾರೆ. 
ಇದು ನಾನು ತೆಗೆದುಕೊಂಡ ಬೋಲ್ಡ್ ನಿರ್ಧಾರ ಹೊರತು ಬಿಗ್‌ಬಾಸ್‌ ದು ಕೂಡ ಅಲ್ಲ. ಇದು ನನ್ನ ನಿರ್ಧಾರ ಎಂದು ಕಿಚ್ಚ ಮನೆಯವರಿಗೆ ಅರ್ಥ ಮಾಡಿಸಿದರು. ಇಷ್ಟೆಲ್ಲ ಆದ ಬಳಿಕ ಎಲ್ಲಾ ಸ್ಪರ್ಧಿಗಳ ವಿರುದ್ಧ ಸಿಟ್ಟಾಗಿ ಕ್ಷಮೆ ಕೇಳಿದ ಬಳಿಕ ಕೂರಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories