ಬಿಗ್‌ಬಾಸ್‌ ಕನ್ನಡ 11: ಹುಡುಗ ಕೊಟ್ಟ ಉಂಗುರ ಕಳೆದುಕೊಂಡ ಚೈತ್ರಾ, ಕೊರಗಜ್ಜನ ಮೊರೆ ಬಳಿಕ ಸಿಕ್ಕಿದ್ದೇಗೆ?

Published : Nov 14, 2024, 12:14 AM ISTUpdated : Nov 14, 2024, 12:15 AM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ಚೈತ್ರಾ ಕುಂದಾಪುರ ಅವರ ಉಂಗುರ ಕಳೆದುಹೋಗಿ, ಬಿಗ್‌ಬಾಸ್‌ ಹುಡುಕಿಕೊಟ್ಟ ಘಟನೆ ನಡೆಯಿತು. ಜೊತೆಗೆ ಜೋಡಿ ಟಾಸ್ಕ್‌ಗಳಲ್ಲಿ ಚೈತ್ರಾ ಅವರು ಶಿಶಿರ್‌ಗೆ ಮೋಸ ಮಾಡಿದ್ದು, ಐಶ್ವರ್ಯಾ ಧರ್ಮ ಜೊತೆ ಆಡಲು ನಿರಾಕರಿಸಿದ್ದು ಹಾಗೂ ಇತರೆ ಜೋಡಿಗಳ ಬದಲಾವಣೆಗಳ ಬಗ್ಗೆ ಈ ಸಾರಾಂಶ ಒಳಗೊಂಡಿದೆ.

PREV
17
 ಬಿಗ್‌ಬಾಸ್‌ ಕನ್ನಡ 11:   ಹುಡುಗ ಕೊಟ್ಟ ಉಂಗುರ ಕಳೆದುಕೊಂಡ ಚೈತ್ರಾ,  ಕೊರಗಜ್ಜನ ಮೊರೆ ಬಳಿಕ ಸಿಕ್ಕಿದ್ದೇಗೆ?

ಬಿಗ್‌ಬಾಸ್‌ ಕನ್ನಡ 11 ನಲ್ಲಿ ಈ ವಾರ ಜೋಡಿ ಟಾಸ್ಕ್‌ ಗಳು ನಡೆಯುತ್ತಿದೆ. 45ನೇ ದಿನ ಮನೆಯಲ್ಲಿ ಮಣ್ಣಿನ ಮಕ್ಕಳು ಟಾಸ್ಕ್‌ ಕೊಟ್ಟಿದ್ದರು. ಈ ಟಾಸ್ಕ್ ನಲ್ಲಿ ಚೈತ್ರಾ ಕುಂದಾಪುರ ಅವರು ತಮ್ಮ ಹುಡುಗ ಕೊಟ್ಟ ಉಂಗುರವನ್ನು ಕಳೆದುಕೊಂಡರು.ಮನೆಯವರೆಲ್ಲ ಹುಡುಕಿದರೂ ಉಂಗುರ ಸಿಗಲಿಲ್ಲ. ಹೀಗಾಗಿ ಚೈತ್ರಾ ಕ್ಯಾಮಾರ ಮುಂದೆ ಬಂದು ತುಂಬಾ ಇಂಪಾರ್ಟೆಂಟ್ ಉಂಗುರು ದಯವಿಟ್ಟು ಹುಡುಕಿಸಿಕೊಡಿ ಎಂದು ಮನವಿ ಮಾಡಿಕೊಂಡರು.


 
 

27

ಟಾಸ್ಕ್‌ ಬಳಿಕ ಬಿಗ್‌ಬಾಸ್‌ ಉಂಗುರವನ್ನು ಹುಡುಕಿ ಕೊಟ್ಟರು. ಆಗ ಚೈತ್ರಾ ಸ್ವಾಮಿ ಕೊರಗಜ್ಜ ಎಂದು ಕೈಮುಗಿದರು. ಬಿಗ್‌ಬಾಸ್‌ ಗೂ ಧನ್ಯವಾದ ಹೇಳಿದರು. ತುಳುನಾಡಿನಲ್ಲಿ ಕೊರಗಜ್ಜ ದೈವ ಒಂದು ಕಾರ್ಣಿಕ ಶಕ್ತಿ. ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸುತ್ತಾನೆ ಎಂಬ ನಂಬಿಕೆ ದೈವಾರಾಧಕರದ್ದು, ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಸಿಕ್ಕಾಪಟ್ಟೆ ಚಡಪಡಿಸಿದರು.  ಕೊರಗಜ್ಜನ ಪ್ರಾರ್ಥನೆ ಮಾಡಿದರು. ಬಳಿಕ ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಅವರು ಕುಣಿದಾಡಿದರು. 

37

ಇದು ಚೈತ್ರಾ ಪಾಲಿಗೆ ತುಂಬ ಮಹತ್ವದ ಉಂಗುರ. ಅವರ ಹುಡುಗ ಕೊಟ್ಟಿದ್ದಾರೆ ಎಂದು ಉಂಗುರ ಕಾಣೆಯಾದಾಗ ಹುಡುಕುತ್ತಿದ್ದ ಯಾವುದೋ ಸ್ಪರ್ಧಿ ಈ ಮಾತನ್ನು ಹೇಳುತ್ತಿರುವುದು ಕೇಳಿಸಿದೆ. ಹೀಗಾಗಿ ಉಂಗುರ ಮಣ್ಣಿನಲ್ಲಿ ಕಳೆದುಹೋದಾಗ ಚೈತ್ರಾ ಗಲಬಿಲಿಗೊಂಡರು. 

47

ಇನ್ನೊಂದು ಕಡೆ ಶಿಶಿರ್ ಮತ್ತು ಚೈತ್ರಾ ನಡುವೆ ಬಿರುಕು ಮೂಡಿದೆ. ಆಟದ ಮಧ್ಯೆ ಬಿಗ್‌ಬಾಸ್ ಆಫರ್ ಒಪ್ಪಿದ ಚೈತ್ರಾ  ಶಿಶಿರ್ ಅವರನ್ನು ಬಿಟ್ಟು ತ್ರಿವಿಕ್ರಮ್  ಜೊತೆಗೆ ಸೇರುವ ಪ್ಲಾನ್ ಮಾಡಿದರು. ನಾಮಿನೇಷನ್​ ವಿಚಾರ ಬಂದಾಗ ಶಿಶಿರ್ ಅವರು ತ್ಯಾಗ ಮಾಡಿ ತಾವೇ ನಾಮಿನೇಟ್ ಆಗಿದ್ದರು. ಇಷ್ಟೆಲ್ಲ ಮಾಡಿದರೂ ಕೂಡ ಚೈತ್ರಾ ಶಿಶಿರ್‌ ಗೆ ಮೋಸ ಮಾಡಿದ್ದಾರೆ. 

57


‘ನಾಮಿನೇಷನ್​ ಸಮಯದಲ್ಲಿ ಅಯ್ಯೋ, ಅಮ್ಮಾ ಅನ್ನೋದು. 12 ವರ್ಷ ಮಣ್ಣು ಹೊತ್ತಿರುವ ನಾವು ಆ್ಯಕ್ಟರ್ ಅಲ್ಲ. ಇಲ್ಲಿ ಇದ್ದಾರೆ ನೋಡಿ ದೊಡ್ಡ ಆ್ಯಕ್ಟರ್​’ ಎಂದು ಚೈತ್ರಾ ಮೇಲೆ ಶಿಶಿರ್​ ಹರಿಹಾಯ್ದಿದ್ದಾರೆ. ಮಿಕ್ಕಂತೆ ಐಶ್ವರ್ಯಾ ಅವರು ಧರ್ಮ ಅವರ ಜೊತೆಗೆ ಆಡುತ್ತೇನೆ ಎಂದು ಬಿಗ್‌ಬಾಸ್‌ ನ ಆಫರ್‌ ತಿರಸ್ಕರಿಸಿದರು. 
 

67

ಬಿಗ್‌ಬಾಸ್‌ ಕೊಟ್ಟ ಈ ಟ್ವಿಸ್ಟ್ ನಲ್ಲಿ ಐಶ್ವರ್ಯಾ ಮಾತ್ರ ಬದಲು ಮಾಡಿಕೊಳ್ಳಲಿಲ್ಲ. ಮಿಕ್ಕಂತೆ ಎಲ್ಲಾ ಜೋಡಿಗಳಿಗೆ ಬಿಗ್‌ಬಾಸ್‌ ಕೊಟ್ಟ ಆಫರ್‌ ಅನ್ನು ಹೆಣ್ಣು ಮಕ್ಕಳು ಸ್ವೀಕರಿಸಿ ವಿಕ್ರಮ್‌ ಬಂದರೆ ಒಳಿತು ಎಂದರು. ಆದರೆ ಕೊನೆಗೆ ಟ್ವಿಸ್ಟ್ ಇಟ್ಟ ಬಿಗ್‌ಬಾಸ್‌ ತ್ರಿವಿಕ್ರಮ್‌  ಅವರಲ್ಲಿ ಯಾರು ಬೇಕು ಎಂದು ಕೇಳಿದಾಗ ಭವ್ಯ ಅವರನ್ನು ಆಯ್ಕೆ ಮಾಡಿಕೊಂಡರು. ಮಂಜು ಅವರು ಯಾವುದೇ ಟಾಸ್ಕ್ ಆಡುವಂತಿಲ್ಲ.

77


ಭವ್ಯಾ ಟೀಂ ಬದಲಾವಣೆ ಮಾಡಿದ್ದಕ್ಕೆ ಮಂಜು ಕೂಡ ಹರಿಹಾಯ್ದರು. ಶಿಶಿರ್ ಮತ್ತು ಮಂಜು ನಾಳಿನ ಸಂಚಿಕೆಯಲ್ಲಿ ಏನಾಗಲಿದೆ ಕಾದು ನೀಡಬೇಕಿದೆ.
  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories