ಬಿಗ್ ಬಾಸ್‌ನಿಂದ ಹೊರಬಂದ ನಂತರವೂ ಆ್ಯಂಕರ್ ಜಾಹ್ನವಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮಗೆ ಇನ್ನೂ ಬಿಗ್ ಬಾಸ್ ಪೇಮೆಂಟ್ ಬಂದಿಲ್ಲ ಮತ್ತು ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಹೀಗೆ ಹೇಳಿದ್ದು ಯಾಕೆ?
Bigg Bossನಲ್ಲಿ ಎಲ್ಲರಿಗಿಂತ ತಾವು ಸ್ಟ್ರಾಂಗ್ ಸ್ಪರ್ಧಿಯಾಗಿದ್ದರೂ ತಮ್ಮನ್ನು ಬೇಗನೇ ಮನೆಗೆ ಕಳುಹಿಸಿದರು ಎಂದು ಇದಾಗಲೇ ಆ್ಯಂಕರ್ ಜಾಹ್ನವಿ ಸಾಕಷ್ಟು ಬಾರಿ ನೊಂದುಕೊಂಡು ನುಡಿದಿದ್ದಾರೆ.
26
ಹುಡುಕಿ ಬರ್ತಿವೆ ಅವಕಾಶ
ಅದೇನೇ ಇದ್ದರೂ ಸದ್ಯ ಬಿಗ್ಬಾಸ್ ಮೂಲಕ ಫೇಮಸ್ ಆಗಿರುವ ಕಾರಣದಿಂದ ಅವರಿಗೆ ಪ್ರಮೋಷನ್ ಆ್ಯಡ್ಗಳಂತೂ ಬರುತ್ತಲೇ ಇವೆ. ಸಾಕಷ್ಟು ಅವಕಾಶಗಳೂ ಅವರನ್ನು ಹುಡುಕಿ ಬರುತ್ತಿವೆ.
36
ಪೇಮೆಂಟ್ ಬಂದಿಲ್ಲ
ಇದೀಗ ಅವರು ಬೇಸರದಲ್ಲಿ ಕುಳಿತಿರುವ ವಿಡಿಯೋ ಒಂದು ವೈರಲ್ ಆಗಿದೆ. ಅವರ ಸ್ನೇಹಿತೆ ಏಕೆ ಹೀಗೆ ಕುಳಿತಿರುವೆ ಎಂದು ಪ್ರಶ್ನಿಸಿದಾಗ ಜಾಹ್ನವಿ ಅವರು, ಬಿಗ್ಬಾಸ್ಗೆ ಎಂದು ತುಂಬಾ ಸಾಲ ಮಾಡಿಬಿಟ್ಟೆ. ಇನ್ನೂ ಪೇಮೆಂಟೇ ಕೊಟ್ಟಿಲ್ಲ. ಸಾಲ ತೀರಿಸೋಕೆ ದುಡ್ಡಿಲ್ಲ ಎಂದು ಹೇಳಿದ್ದಾರೆ.
ಹಾಗೆಂದು ಜಾಹ್ನವಿ ಏನೂ ಬಿಗ್ಬಾಸ್ಗೆಂದು ಸಾಲ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಒಂದು ವೇಳೆ ಸಾಲ ಮಾಡಿಕೊಂಡಿದ್ದರೂ, ಅದನ್ನು ತೀರಿಸಲಾಗದಷ್ಟು ಕಷ್ಟದಲ್ಲಿ ಅವರಂತೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿದ್ದೇ. ಏಕೆಂದರೆ ಇದಾಗಲೇ ಅವರು ಖ್ಯಾತ ಆ್ಯಂಕರ್, ನಟಿಯಾಗಿ ಜೊತೆಗೆ ಪತ್ರಕರ್ತೆಯಾಗಿಯೂ ಸಾಕಷ್ಟು ಫೇಮಸ್ ಆದವರು.
56
ಅವರು ಹೇಳಲು ಕಾರಣವೇನು?
ಆದರೆ, ಈ ವಿಡಿಯೋದಲ್ಲಿ ಅವರು ಹೀಗೆ ಹೇಳಲು ಕಾರಣ ಏನೆಂದರೆ, ಅದೊಂದು ಜಾಹೀರಾತು ಅಷ್ಟೇ. ರೇಷ್ಮೆ ಸೀರೆ ಕೊಟ್ಟರೆ ಹಣ ಕೊಡುತ್ತಾರೆ ಎನ್ನುವ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹಳೆದ ರೇಷ್ಮೆ ಸೀರೆ ಕೊಟ್ಟರೆ ತುಂಬಾ ಹಣ ಬರುತ್ತದೆ ಎಂದು ತೋರಿಸುವ ಜಾಹೀರಾತು ಅದು ಅಷ್ಟೇ.
66
ಪರೋಕ್ಷ ಅಸಮಾಧಾನ
ಈ ಜಾಹೀರಾತಿಗಾಗಿ, ಅವರು ಬಿಗ್ಬಾಸ್ನಿಂದ ತಮಗೆ ಇನ್ನೂ ಪೇಮೆಂಟ್ ಬಂದಿಲ್ಲ ಎಂದು ಹೇಳಿದರೂ, ತಮಗೆ ನಿಧಾನಕ್ಕೆ ಪೇಮೆಂಟ್ ಬಂದೇ ಬರುತ್ತದೆ ಎನ್ನುವ ಭರವಸೆ ಇದೆ ಎಂದೂ ಇದೇ ವೇಳೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.